ವಾಣಿಜ್ಯ

ಸೆನ್ಸೆಕ್ಸ್ 100 ಅಂಕ ಏರಿಕೆ, 7500ರ ಗಡಿ ದಾಟಿದ ನಿಫ್ಟಿ

ಸತತ ಐದನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರಿಕೆ ಕಂಡಿದ್ದು ಬೆಳಗಿನ ವಹಿವಾಟಿನಲ್ಲಿ 100 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ...

ಸೆನ್ಸೆಕ್ಸ್ 100 ಅಂಕ ಏರಿಕೆ, 7500ರ ಗಡಿ ದಾಟಿದ ನಿಫ್ಟಿ
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
Published On :

ಮುಂಬೈ: ಸತತ ಐದನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರಿಕೆ ಕಂಡಿದ್ದು ಬೆಳಗಿನ ವಹಿವಾಟಿನಲ್ಲಿ 100 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.

ಬ್ಯಾಕಿಂಗ್ ವಲಯದಲ್ಲಿನ ಸಕಾರಾತ್ಮಕ ವಹಿವಾಟು ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಬರೊಬ್ಬರಿ 100 ಅಂಕಗಳ  ಏರಿಕೆಯೊಂದಿಗೆ 24, 744.35ಕ್ಕೆ ಏರಿಕೆಯಾಗಿದೆ. ನಿಫ್ಟಿ ಕೂಡ 8.71 ಅಂಕಗಳ ಏರಿಕೆಯೊಂದಿಗೆ 7500 ಗಡಿ ದಾಟಿದೆ.

ಬ್ಯಾಕಿಂಗ್ ವಲಯ ಹೆಚ್ಚಾಗಿ ಲಾಭಾಂಶ ಕಂಡಿದ್ದು, ಔಷಧಿ, ಉಕ್ಕು, ಆಟೋ ಮತ್ತು ಇಂಧನ ವಲಯಗಳಿಗೆ ನಷ್ಟವಾಗಿದೆ. ಪ್ರಮುಖವಾಗಿ ಲುಪಿನ್, ಬಿಎಚ್ ಇಲ್, ಐಟಿಸಿ, ಒಎನ್ ಜಿಸಿ, ಟಾಟಾ  ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ರಿಲಯನ್ಸ್ ಸಂಸ್ಥೆಗಳ ಷೇರುಗಳು ಲಾಭ ಕಂಡಿದ್ದರೆ, ಹೆಚ್ ಯುಎಲ್, ಐಸಿಐಸಿಐ, ಟಿಸಿಎಸ್ ಸಂಸ್ಥೆಗಳು ನಷ್ಟ ಅನುಭವಿಸಿವೆ.

ರುಪಾಯಿ ಮೌಲ್ಯ ಕುಸಿತ
ಇದೇ ವೇಳೆ ಡಾಲರ್ ಎದರು ರುಪಾಯಿ ಮೌಲ್ಯ ಕುಸಿತಗೊಂಡಿದ್ದು. 19 ಪೈಸೆಗಳ ಕುಸಿತದೊಂದಿಗೆ ರುಪಾಯಿ ಮೌಲ್ಯ 67.27ಕ್ಕೆ ಇಳಿಕೆಯಾಗಿದೆ. ಈ ಹಿಂದಿನ ವಹಿವಾಟಿನಲ್ಲಿ ರುಪಾಯಿ 26  ಪೈಸೆಗಳ ಏರಿಕೆಯೊಂದಿಗೆ, 67.08 ರು.ಗೆ ಸ್ಥಿರವಾಗಿತ್ತು.=

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.