ಅಮೆಜಾನ್ ನಲ್ಲಿ ಉತ್ಪನ್ನ ವಿತರಣೆಗೆ ಮೊದಲ ಬಾರಿಗೆ ಯುವತಿಯರ ನೇಮಕ
ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಉತ್ಪನ್ನ ಡೇಲಿವರಿಗಾಗಿ ಮಹಿಳೆಯರನ್ನು ನೇಮಕ ಮಾಡಿಕೊಂಡಿದೆ.

ಚೆನ್ನೈ: ಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಉತ್ಪನ್ನ ಡೇಲಿವರಿಗಾಗಿ ಯುವತಿಯರನ್ನು ನೇಮಕ ಮಾಡಿಕೊಂಡಿದೆ.
ಚೆನ್ನೈ ನ ಗಿಂಡಿ ಹಾಗೂ ತಿರುವನಂತಪುರಮ್ ನಲ್ಲಿ ಉತ್ಪನ್ನಗಳಿಗಾಗಿ ಮಹಿಳಾ ಡೆಲಿವರಿ ಕೇಂದ್ರ ಪ್ರಾರಂಭ ಮಾಡುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಅಮೆಜಾನ್ ವಿತರಣಾ ಕೆಲಸಕ್ಕೆ ಮಹಿಳೆಯರನ್ನು ನೇಮಿಸಿದೆ. ಮಹಿಳಾ ಉದ್ಯೋಗಿಗಳಿರುವ ಎರಡು ಉತ್ಪನ್ನ ವಿತರಣಾ ಕೆಂದ್ರಗಳನ್ನು ಕಳೆದ ವಾರವಷ್ಟೇ ಉದ್ಘಾಟನೆ ಮಾಡಲಾಗಿದೆ.
ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ನೀಡಬೇಕೆಂಬ ಪ್ರಯತ್ನದ ಭಾಗವಾಗಿ ಮಹಿಳೆಯರೇ ಹೆಚ್ಚಿರುವ ಉತ್ಪನ್ನ ವಿತರಣಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಅಮೆಜಾನ್ ಇಂಡಿಯಾದ ಸಾರಿಗೆ ವಿಭಾಗದ ನಿರ್ದೇಶಕ ಸ್ಯಾಮ್ಯುಯೆಲ್ ಥಾಮಸ್ ಹೇಳಿದ್ದಾರೆ.
ಕಳೆದ ವಾರ ಉದ್ಘಾಟನೆಯಾಗಿರುವ ಉತ್ಪನ್ನ ವಿತರಣಾ ಕೇಂದ್ರಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡುತ್ತಾರೆ. ಇಂಥದ್ದೇ ಮತ್ತಷ್ಟು ಕೇಂದ್ರಗಳನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರಾರಂಭಿಸುವುದಾಗಿ ಅಮೆಜಾನ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


