ಆರ್ ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ
ಜೂ.7 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟವಾಗಿದ್ದು ಬಡ್ಡಿ ದರದಲ್ಲಿ ಬದಲಾವಣೆಯಾಗಿಲ್ಲ.

ಮುಂಬೈ: ಜೂ.7 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟವಾಗಿದ್ದು ಬಡ್ಡಿ ದರದಲ್ಲಿ ಬದಲಾವಣೆಯಾಗಿಲ್ಲ.
ಕಳೆದ ಬಾರಿ ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ರೆಪೋದರವನ್ನು 25 ಬೇಸಿಸ್ ಪಾಯಿಂಟ್ ನಷ್ಟು ಕಡಿತಗೊಳಿಸಿತ್ತು.ಕಡಿತಗೊಳಿಸಿತ್ತು. ಆದರೆ ಹಣದುಬ್ಬರದ ಕುರಿತು ಆತಂಕ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ಹಣಕಾಸು ನೀತಿಯಲ್ಲಿ ಬಡ್ಡಿ ದವರನ್ನು ಕಡಿತಗೊಳಿಸಲಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ರಿಸರ್ವ್ ಬ್ಯಾಂಕ್ ನಿಂದ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಶೇ.6 .05 ರಲ್ಲೇ ಕಾಯ್ದುಕೊಳ್ಳಲಾಗಿದೆ. ಇನ್ನು ಸಿಆರ್ ಆರ್ ದರದಲ್ಲೂ ಯಾವುದೇ ಬದಲಾವಣೆ ಮಾಡದೇ ಈ ಹಿಂದೆ ಇದ್ದ ಶೇ.4 ರಷ್ಟನ್ನೆ ಮುಂಡುವರೆಸಲಾಗುತ್ತದೆ ಎಂದು ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ವಿತ್ತೀಯ ಬೆಳವಣಿಗೆ ಕುಂಟಿತವಾಗಿದೆ. ಅಷ್ಟೇ ಅಲ್ಲದೇ ಏಪ್ರಿಲ್ ನ ಹಣದುಬ್ಬರದ ಅಂಕಿಅಂಶಗಳು ಹಣದುಬ್ಬರ ದರ ಏರಿಕೆಯ ಬಗ್ಗೆ ಅನಿಶ್ಚಿತತೆಯನ್ನು ತೋರುತ್ತಿದೆ. ಈ ಹಿನ್ನೆಲೆಯಲ್ಲಿ ವಿತ್ತೀಯ ನೀತಿಯ ನಿಲುವು ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.
ಅಮೆರಿಕದ ವಿತ್ತೀಯ ನೀತಿಯಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿದ್ದು ಜುನ್ ನಂತರ ಪ್ರಕಟವಾಗಲಿರುವ ಹಣಕಾಸು ನೀತಿಯಲ್ಲಿ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ರೂಪಾಯಿ ಬೆಲೆಯಲ್ಲಿ ತೀವ್ರ ಅಸ್ಥಿರತೆ ಉಂಟಾದರೆ ಆರ್ ಬಿಐ ತನ್ನಲ್ಲಿರುವ ಡಾಲರ್ ಗಳನ್ನು ಮಾರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


