ಸ್ಮಾರ್ಟ್ ಫೋನ್ ಮಾರಾಟದಲ್ಲಿ ಆಪಲ್ ಹಿಂದಿಕ್ಕಿದ ಸ್ಯಾಮ್ ಸಂಗ್
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಮತ್ತು ಗ್ಯಾಲಕ್ಸಿ ಎಸ್ 7 ಎಡ್ಜ್ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು,...

Published On :
ಸಿಯೋಲ್: ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 7 ಮತ್ತು ಗ್ಯಾಲಕ್ಸಿ ಎಸ್ 7 ಎಡ್ಜ್ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ವಾರ್ಷಿಕ 7 ಶತಕೋಟಿ ಡಾಲರ್ ಲಾಭ ಹಾಗೂ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 18ರಷ್ಟು ಲಾಭ ಕಂಡುಬಂದಿದೆ.
ಆದರೆ ಆ್ಯಪಲ್ ಕಂಪೆನಿ ಐಫೋನ್ ಮಾರಾಟದಲ್ಲಿ ಪ್ರಸಕ್ತ ದ್ವೈವಾರ್ಷಿಕ ಅವಧಿಯಲ್ಲಿ ಶೇಕಡಾ 15ರಷ್ಟು ಇಳಿಮುಖ ಕಂಡುಬಂದಿದೆ.
ಸ್ಯಾಮ್ ಸಂಗ್, ಏಪ್ರಿಲ್ ನಿಂದ ಜೂನ್ ವರೆಗೆ 90 ದಶಲಕ್ಷ ಹ್ಯಾಂಡ್ ಸೆಟ್ ಗಳನ್ನು ಮಾರಾಟ ಮಾಡಿದ್ದು, ಒಟ್ಟು ಸ್ಮಾರ್ಟ್ ಫೋನ್ ನ ಶೇಕಡಾ 80ರಷ್ಟು ಆಗಿದೆ ಎಂದು ಕೊರಿಯಾ ಹೆರಾಲ್ಡ್ ವರದಿ ಮಾಡಿದೆ.
ಸ್ಯಾಮ್ ಸಂಗ್ ಪ್ರಸಕ್ತ ವರ್ಷ ಸ್ಮಾರ್ಟ್ ಫೋನ್ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು, ಗ್ಯಾಲಕ್ಸಿ ಎ ಮತ್ತು ಜೆ ಸರಣಿಯನ್ನು ಮತ್ತು ಚೀನಾ ಮಾರುಕಟ್ಟೆಗೆ ಗ್ಯಾಲಕ್ಸಿ ಸಿ ಸರಣಿಯನ್ನು ವಿಶೇಷವಾಗಿ ಮಾರುಕಟ್ಟೆಯಲ್ಲಿ ಪ್ರಚುರಪಡಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


