ಟೆಕ್ಕಿ ಉದ್ಯೋಗ ನೇಮಕಾತಿಯಲ್ಲಿ ಇಳಿಕೆ: ಭವಿಷ್ಯ ಕುರಿತು ಐಟಿ ಆಕಾಂಕ್ಷಿಗಳ ಆತಂಕ
ಐಟಿ ಕ್ಷೇತ್ರದಲ್ಲಿ ರೋಬೋಟ್ ಗಳು ಮಾಡಲು ಸಾಧ್ಯವಾಗದ ಕೆಲಸಗಳಿಗೆ ಮಾತ್ರ ಇನ್ನು ಮುಂದಿನ ದಿನಗಳಲ್ಲಿ ನೇಮಕಾತಿ ನಡೆಯಲಿದ್ದು, ಅಟೋಮೇಷನ್ ನ ಪರಿಣಾಮ ಉದ್ಯೋಗಾವಕಾಶಗಳು ಕಡಿಮೆ..

ಚೆನ್ನೈ: ಐಟಿ ಕ್ಷೇತ್ರದಲ್ಲಿ ರೋಬೋಟ್ ಗಳು ಮಾಡಲು ಸಾಧ್ಯವಾಗದ ಕೆಲಸಗಳಿಗೆ ಮಾತ್ರ ಇನ್ನು ಮುಂದಿನ ದಿನಗಳಲ್ಲಿ ನೇಮಕಾತಿ ನಡೆಯಲಿದ್ದು, ಅಟೋಮೇಷನ್ ನ ಪರಿಣಾಮ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದರಿಂದ ಭವಿಷ್ಯ ಕುರಿತು ಐಟಿ ಆಕಾಂಕ್ಷಿಗಳಲ್ಲಿ ಆತಂಕ ಎದುರಾಗಿದೆ.
ಐಟಿ ಕ್ಷೇತ್ರದಲ್ಲಿ ಅಟೋಮೇಷನ್ ನ ಪರಿಣಾಮ ಸತತ ಮೂರನೇ ವರ್ಷ ಉದ್ಯೋಗ ನೇಮಕಾತಿ ಕುಸಿಯಲಿದೆ ಎಂದು ಉದ್ಯಮ ಸಂಸ್ಥೆ ನಾಸ್ಕಾಮ್ ಅಧ್ಯಕ್ಷ ಆರ್ ಚಂದ್ರಶೇಖರ್ ಮಾಹಿತಿ ನೀಡಿದ್ದು, ಇದು ಐಟಿ ಉದ್ಯೋಗದಲ್ಲಿ ನೇಮಕಾತಿ ಕುಸಿತ ಕಾಣುವ ಬಗ್ಗೆ ನಾಸ್ಕಾಮ್ ನೀಡಿರುವ ಎರಡನೇ ಎಚ್ಚರಿಕೆಯಾಗಿದೆ.
ಈ ಹಿಂದೆ ನಾಸ್ಕಾಮ್ ಅಧ್ಯಕ್ಷರಾಗಿದ್ದ ಸಿಪಿ ಗುರ್ನಾನಿ ಅವರು ಐಟಿ ಉದ್ಯೋಗಗಳಲ್ಲಿ ಶೇ.20 ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದ್ದರು. ಐಟಿ ಕಂಪನಿಗಳ ಲಾಭವು ಕಡಿಮೆಯಾಗುತ್ತಿರುವುದರಿಂದ ಕಂಪನಿಗಳು ಅಟೋಮೇಷನ್ ಮೊರೆ ಹೋಗಿದ್ದು ನೇಮಕಾತಿ ಕಡಿಮೆಯಾಗುತ್ತಿದೆ. ಪರಿಣಾಮ ಭವಿಷ್ಯದ ಐಟಿ ಆಕಾಂಕ್ಷಿಗಳಲ್ಲಿ ಆತಂಕ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


