ಪತಂಜಲಿ ಜಾಹಿರಾತುಗಳು ಜನರನ್ನು ದಾರಿತಪ್ಪಿಸುತ್ತಿವೆ: ಎಎಸ್ ಸಿಐ
ಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು,...

ನವದೆಹಲಿ: ಜಾಹಿರಾತು ಗುಣಮಟ್ಟವನ್ನು ಪರೀಕ್ಷಿಸುವ ಸಂಸ್ಥೆ ಎಎಸ್ ಸಿಐ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯ ಜಾಹಿರಾತುಗಳ ಬಗ್ಗೆ ತಕರಾರು ತೆಗೆದಿದ್ದು, ತನಗೆ ಪೈಪೋಟಿ ನೀಡುತ್ತಿರುವ ಸಂಸ್ಥೆಗಳನ್ನು ಹೀಗಳೆಯಲು ಯತ್ನಿಸುತ್ತಿದೆ ಎಂದು ಹೇಳಿದೆ.
ಉಳಿದ ಕಂಪೆನಿಗಳಿಗಿಂತ ತನ್ನ ಕಂಪನಿಯ ಉತ್ಪನ್ನಗಳು ಉತ್ತಮವಾದುದ್ದೆಂದು ಪ್ರಚಾರ ಮಾಡುವ ಭರದಲ್ಲಿ ಪತಂಜಲಿ ಆಯುರ್ವೇದ ತನಗೆ ಪೈಪೋಟಿ ನೀಡುತ್ತಿರುವ ಸಂಸ್ಥೆಗಳನ್ನು ಹೀಗಳೆಯಲು ಯತ್ನಿಸುತ್ತಿರುವುದು ಸೂಕ್ತವಲ್ಲ ಎಂದು ಎಎಸ್ ಸಿಐ ಹೇಳಿದೆ.
ಪತಂಜಲಿ ಉತ್ಪನ್ನಗಳಲ್ಲಿ ಒಂದಾಗಿರುವ ಸಾಸಿವೆ ಎಣ್ಣೆಯ ಜಾಹಿರಾತಿನಲ್ಲಿ ಪತಂಜಲಿ ಸಂಸ್ಥೆ ಬೇರೆಯ ಸಂಸ್ಥೆಗಳು ಮಾರಾಟ ಮಾಡುವ ಸಾಸಿವೆ ಎಣ್ಣೆ ಕಲಬೆರಕೆಯಾಗಿರುತ್ತದೆ ಎಂದು ಜಾಹೀರಾತುಗಳಲ್ಲಿ ಹೇಳಿದೆ. ಆದರೆ ಈ ಅಂಶ ಈವರೆಗೂ ಸಾಬೀತಾಗಿಲ್ಲ. ಅನ್ಯ ಕಂಪನಿಗಳ ಉತ್ಪನ್ನಗಳನ್ನು ಹೀಗಳೆಯುವುದಷ್ಟೇ ಅಲ್ಲದೆ, ಪತಂಜಲಿ ಉತ್ಪನ್ನಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಎಎಸ್ ಸಿ ಐ ಹೇಳಿದ್ದು, ಪಂತಂಜಲಿ ಸಂಸ್ಥೆಯ ರೀತಿಯಲ್ಲೇ ಹಲವು ಕಂಪನಿಗಳ ಜಾಹಿರಾತುಗಳ ಬಗ್ಗೆ ಬಂದಿರುವ ದೂರುಗಳನ್ನು ಎಎಸ್ ಸಿ ಐ ಪುರಸ್ಕರಿಸಿದೆ. ಇನ್ನು ಪತಂಜಲಿ ಆಯುರ್ವೇದದ ದಂತ ಕಾಂತಿ ಟೂತ್ ಪೇಸ್ಟ್ ಸಹ ಜನರನ್ನು ದಾರಿ ತಪ್ಪಿಸುತ್ತಿದ್ದು, ಹಲ್ಲಿನ ಸೂಕ್ಶ್ಮತೆ, ವಸಡುಗಳಲ್ಲಿ ರಕ್ತ ಸ್ರಾವವನ್ನು ತಡೆಯುವುದು ಸೇರಿದಂತೆ ಹಲವು ವಿಷಯಗಳಲ್ಲಿ ಸಂಸ್ಥೆ ಹೇಳಿಕೊಂಡಿರುವ ರೀತಿಯಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಎಎಸ್ ಸಿಐ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


