ವಾಣಿಜ್ಯ

ಫ್ಲಿಪ್ ಕಾರ್ಟ್‍ನಲ್ಲಿ ಬದಲಾವಣೆ

ಆನ್‍ಲೈನ್ ವಾಣಿಜ್ಯ ಕಂಪನಿ ಫ್ಲಿಪ್‍ಕಾರ್ಟ್ ಆಡಳಿತ ನಿರ್ವಹಣೆಯಲ್ಲಿ ಬದಲಾವಣೆ ತಂದಿದೆ. ಇದುವರೆಗೂ...

ಫ್ಲಿಪ್ ಕಾರ್ಟ್‍ನಲ್ಲಿ ಬದಲಾವಣೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಆನ್‍ಲೈನ್ ವಾಣಿಜ್ಯ ಕಂಪನಿ ಫ್ಲಿಪ್‍ಕಾರ್ಟ್ ಆಡಳಿತ ನಿರ್ವಹಣೆಯಲ್ಲಿ ಬದಲಾವಣೆ ತಂದಿದೆ. ಇದುವರೆಗೂ ಮುಖ್ಯ ಕಾರ್ಯಾಚರಣೆ ಅಧಿಕಾರಿ ಯಾಗಿದ್ದ ಬಿನ್ನಿ ಬನ್ಸಾಲ್‍ರನ್ನು ಸಿಇಒ ಹುದ್ದೆಗೆ ಏರಿಸಲಾಗಿದೆ. 
ಕಂಪನಿ ಸಿಇಒ ಆಗಿದ್ದ ಸಚಿನ್ ಬನ್ಸಾಲ್‍ರಿಗೆ ಕಾರ್ಯಕಾರಿ ಚೇರ್ಮನ್ ಜವಾಬ್ದಾರಿ ವಹಿಸಲಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಕಾರ್ಯಕಾರಿ ಚೇರ್ಮನ್ ಹುದ್ದೆಯಲ್ಲಿ ಸಚಿನ್ ಬನ್ಸಾಲ್ ಕಾರ್ಯತಂತ್ರ ನಿರ್ದೇಶನ, ಹಿರಿಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವುದು ಮತ್ತು ಹೊಸ ಹೂಡಿಕೆ ಅವಕಾಶಗಳತ್ತ ನೋಟ ಹರಿಸಲಿದ್ದಾರೆ. 
ಬಿನ್ನಿ ಸಿಇಒ ಹುದ್ದೆಯಲ್ಲಿ ಕಂಪನಿಯ ವಹಿವಾಟು ನೋಡಿಕೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕಂಪನಿಯ ಎಲ್ಲ ಪ್ರಗತಿಯ ಹೊಣೆ ವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.