ಫ್ರೀಡಂ 251: ಒಂದು ಫೋನ್ ಮಾರಾಟವಾದರೆ ರು. 31 ಲಾಭ
ರು. 251ರ ಫೋನ್ ರು. 40 ಡಿಲಿವರಿ ಚಾರ್ಜ್ ಸೇರಿ ರು.291ಗೆ ಗ್ರಾಹಕರಿಗೆ ತಲುಪಲಿದೆ. ಆದಾಗ್ಯೂ, ಪ್ರತಿಯೊಂದು ಯುನಿಟ್ ಮಾರಾಟದಿಂದ ಕಂಪನಿಗೆ...

Published On :
ನವದೆಹಲಿ: ವಿಶ್ವದ ಅತೀ ಅಗ್ಗದ ಸ್ಮಾರ್ಟ್‌ಫೋನ್ ಫ್ರೀಡಂ 251 ಈಗಾಗಲೇ ಸಾಕಷ್ಟು ಸುದ್ದಿ ಮಾಡಿ ಗಮನ ಸೆಳೆದಿದೆ. ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಎಂಬ ಕಂಪನಿ ಈ ಫೋನ್ ತಯಾರಿಸುತ್ತಿದ್ದು, ಬುಕಿಂಗ್ ಮಾಡಿದವರಿಗೆ ನಾಲ್ಕು ತಿಂಗಳಲ್ಲಿ ಈ ಫೋನ್ ಕೈಸೇರಲಿದೆ.
ರು. 251ರ ಫೋನ್ ರು. 40 ಡಿಲಿವರಿ ಚಾರ್ಜ್ ಸೇರಿ ರು.291ಗೆ ಗ್ರಾಹಕರಿಗೆ ತಲುಪಲಿದೆ. ಆದಾಗ್ಯೂ, ಪ್ರತಿಯೊಂದು ಯುನಿಟ್ ಮಾರಾಟದಿಂದ ಕಂಪನಿಗೆ ರು. 31 ಲಾಭವಾಗಲಿದೆ ಎಂದು ರಿಂಗಿಂಗ್ ಬೆಲ್ಸ್ ಸಂಸ್ಥಾಪಕ ಮೋಹಿತ್ ಗೋಯೆಲ್ ಹೇಳಿದ್ದಾರೆ.
ಫ್ರೀಡಂ 251 ಫೋನ್ ಬಗ್ಗೆ ಈಗಾಗಲೇ ಹಲವಾರು ಊಹಾಪೋಹಗಳು ಕೇಳಿ ಬರುತ್ತಿದ್ದು, ಇದನ್ನೆಲ್ಲಾ ಮೋಹಿತ್ ಗೋಯೆಲ್ ಅಲ್ಲಗೆಳೆದಿದ್ದಾರೆ.
ಯಾಕೆ ಎಲ್ಲರು ನನ್ನನ್ನು ಕಾಡುತ್ತಿದ್ದಾರೆ? ನಾನೇನು ತಪ್ಪು ಮಾಡಿದ್ದೇನೆ? ನಾನು ಹಣವನ್ನು ಕದ್ದು ಪರಾರಿಯಾಗಿದ್ದೇನೆ ಎಂಬ ಸುದ್ದಿಯನ್ನು ಯಾಕೆ ಹಬ್ಬಿಸುತ್ತಿದ್ದಾರೆ? ಎಲ್ಲ ಸ್ಟಾರ್ಟ್‌ಅಪ್ ಗಳಂತೆ ನಾನು ಈ ವ್ಯವಹಾರ ಆರಂಭಿಸಿದ್ದೇನೆ. ನನ್ನ ವ್ಯವಹಾರ ಯೋಜನೆಗಳೆಲ್ಲವೂ ಸಿದ್ಧವಾಗಿವೆ ಎಂದು ಗೋಯೆಲ್ ಹೇಳಿದ್ದಾರೆ.
ಮೂರು ದಿನಗಳಲ್ಲಿ 70 ಮಿಲಿಯನ್ ಜನರು ಈ ಫೋನ್‌ಗಾಗಿ ಬುಕಿಂಗ್ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ.
ಮೊದಲಿನ ಹಂತದಲ್ಲಿ 25 ಲಕ್ಷ ಯುನಿಟ್ ವಿತರಣೆ ಮಾಡಲಾಗುವುದು. ಮುಂದಿನ ಹಂತದಲ್ಲಿ 25 ಲಕ್ಷವನ್ನು ಆಫ್‌ಲೈನ್ ಆಗಿ ವಿತರಣೆ ಮಾಡಲಾಗುವುದು. ಜೂನ್ 30ರ ಒಳಗೆ ಫೋನ್ ಎಲ್ಲರ ಕೈ ಸೇರಲಿದೆ ಎಂದು ಗೋಯಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


