ವಾಣಿಜ್ಯ

ಅಧಿಕಾರದಿಂದ ಕೆಳಗಿಳಿದ ಫೇಸ್‌ಬುಕ್‌ ಭಾರತೀಯ ಸಿಇಒ ಕೀರ್ತಿಗ ರೆಡ್ಡಿ

ಫೇಸ್‌ಬುಕ್‌ನ ವಿವಾದಾತ್ಮಕ ಫ್ರೀ ಬೇಸಿಕ್ಸ್ ಯೋಜನೆಯನ್ನು ಭಾರತ ರದ್ದುಗೊಳಿಸಿರುವ ಬೆನ್ನಲ್ಲೇ ಇದೀಗ ಫೇಸ್‌ಬುಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಕೀರ್ತಿಗ ರೆಡ್ಡಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆಂದು ಹೇಳಲಾಗುತ್ತಿದೆ...

ಅಧಿಕಾರದಿಂದ ಕೆಳಗಿಳಿದ ಫೇಸ್‌ಬುಕ್‌ ಭಾರತೀಯ ಸಿಇಒ ಕೀರ್ತಿಗ ರೆಡ್ಡಿ
ಅಧಿಕಾರದಿಂದ ಕೆಳಗಿಳಿದ ಫೇಸ್‌ಬುಕ್‌ ಭಾರತೀಯ ಸಿಇಒ ಕೀರ್ತಿಗ ರೆಡ್ಡಿ
Published On :
ನವದೆಹಲಿ: ಫೇಸ್‌ಬುಕ್‌ನ ವಿವಾದಾತ್ಮಕ ಫ್ರೀ ಬೇಸಿಕ್ಸ್ ಯೋಜನೆಯನ್ನು ಭಾರತ ರದ್ದುಗೊಳಿಸಿರುವ ಬೆನ್ನಲ್ಲೇ ಇದೀಗ ಫೇಸ್‌ಬುಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಕೀರ್ತಿಗ ರೆಡ್ಡಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆಂದು ಹೇಳಲಾಗುತ್ತಿದೆ. 
ಈ ಕುರಿತಂತೆ ತಮ್ಮ ಫೇಸ್‌ಬುಕ್‌ ಗೋಡೆಯಲ್ಲಿ ಬರೆದುಕೊಂಡಿರುವ ರೆಡ್ಡಿ ಅವರು, ಕುಟುಂಬದ ಕಾರಣಾಂತರಗಳಿಂದಾಗಿ ಅಧಿಕಾರದಿಂದ ಕೆಳಗಿಳಿಯುತ್ತಿದ್ದೇನೆ. ಮುಂದಿನ 6-12 ತಿಂಗಳು ತಿಂಗಳುಗಳಲ್ಲಿ ಅಮೆರಿಕದ ಫೇಸು ಬುಕ್ ಪ್ರಧಾನ ಕಚೇರಿಗೆ ಸ್ಥಳಾಂತರಗೊಳ್ಳುತ್ತಿದ್ದು, ಉದಯೋನ್ಮುಖ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ವಿಲಿಯಮ್ ಈಸ್ಟನ್ ಮತ್ತು ವಿಪಿ ಏಷ್ಯಾ ಪ್ಯಾಸಿಫಿಕ್ ನ ಡಾನ್ ನಿಯರಿ ಜೊತೆಗೂಡಿ ಉತ್ತರಾಧಿಕಾರಿಯನ್ನು ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. 
ಭಾರತೀಯ ದೂರ ಸಂಪರ್ಕ ಪ್ರಾಧಿಕಾರ (ಟ್ರಾಯ್) ತಾರತಮ್ಯದ ದರ ನೀಡುವ ಸೇವಾ ವಿತರಕರಿಗೆ ದಂಡ ವಿಧಿಸುವ ನಿರ್ಧಾ ಕೈಗೊಂಡ ಬಳಿಕ ಫೇಸ್ ಬುಕ್ ಭಾರತದಲ್ಲಿ ತನ್ನ ಫ್ರೀ ಬೇಸಿಕ್ಸ್ ಸೇವೆಯನ್ನು ನಿಲ್ಲಿಸಿದೆ. ಈ ಹಿಂದೆ ಫೇಸ್ ಬುಕ್ ರಿಲಯನ್ಸ್ ಇಂಡಿಯಾದ ಸಹಭಾಗಿತ್ವದಲ್ಲಿ Internet.org ಎಂಬ ಹೆಸರಿನಲ್ಲಿ ಭಾರತದಲ್ಲಿ ಫ್ರೀ ಬೇಸಿಕ್ಸ್ ಸೇವೆ ನೀಡಲು ಆರಂಭಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.