ಜಾಹೀರಾತು ಪ್ರಸಾರ: ವಿದೇಶಿ ಕಂಪನಿಗಳನ್ನು ಹಿಂದಿಕ್ಕಿದ ಪತ೦ಜಲಿ ಸಂಸ್ಥೆ
ಯೋಗಗುರು ಬಾಬಾ ರಾಮದೇವ್ ಒಡೆತನದ ಪತ೦ಜಲಿ ಸ೦ಸ್ಥೆಯು ಜಾಹಿರಾತು ಪ್ರಸಾರದಲ್ಲಿ ವಿದೇಶಿ ಸಂಸ್ಥೆಗಳನ್ನು ಹಿಂದಿಕ್ಕಿ ಮುಂಚೂಣಿ ಸ್ಥಾನಕ್ಕೇರಿದೆ...

ನವದೆಹಲಿ: ಯೋಗಗುರು ಬಾಬಾ ರಾಮದೇವ್ ಒಡೆತನದ ಪತ೦ಜಲಿ ಸ೦ಸ್ಥೆಯು ಜಾಹಿರಾತು ಪ್ರಸಾರದಲ್ಲಿ ವಿದೇಶಿ ಸಂಸ್ಥೆಗಳನ್ನು ಹಿಂದಿಕ್ಕಿ ಮುಂಚೂಣಿ ಸ್ಥಾನಕ್ಕೇರಿದೆ.
ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯು ತನ್ನ ಉತ್ಪನ್ನಗಳ ಜಾಹಿರಾತುಗಳು ಬಹುರಾಷ್ಟ್ರೀಯ ಕ೦ಪನಿಗಳ ಜಾಹೀರಾತಿಗಿ೦ತಲೂ ಹೆಚ್ಚು ಬಾರಿ ಟಿವಿ ವಾಹಿನಿಗಳಲ್ಲಿ ಪ್ರಸಾರಗೊಳ್ಳುತ್ತಿವೆ. ಬಹುರಾಷ್ಟ್ರೀಯ ಕ೦ಪನಿಗಳ ಉತನ್ನಗಳಿಗೆ ಪತ೦ಜಲಿ ಸಂಸ್ಥೆ ತೀವ್ರ ಸ್ಪಧೆ೯ ಒಡ್ಡುತ್ತಿರುವ ಬೆನ್ನಲ್ಲೇ ಜಾಹೀರಾತಿನ ಮೂಲಕವೂ ಜನರ ಗಮನಸೆಳೆಯುತ್ತಿದೆ. ಜನವರಿ 23ರಿ೦ದ 29ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅ೦ಶ ಬಹಿರ೦ಗಗೊ೦ಡಿದೆ.
ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸಚ್‍೯ ಕೌನ್ಸಿಲ್ (ಬಾಕ್‍೯) ಈ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಗಾಗಿ ದೇಶದ ಒಟ್ಟು 450 ಟಿವಿ ವಾಹಿನಿಗಳನ್ನು ಬಳಸಿಕೊಳ್ಳಲಾಗಿದೆ. ಈ ಪ್ಯೆಕಿ ಪತ೦ಜಲಿ ಉತನ್ನಗಳ ಜಾಹೀರಾತು ಜ.23ರಿ೦ದ 29ರವರೆಗೆ 17000 ಬಾರಿ ಪ್ರಸಾರವಾಗಿದ್ದರೆ, ಕ್ಯಾಡ್‍ಬರಿ ಕ೦ಪನಿಯ ಉತನ್ನಗಳು 16000 ಬಾರಿ ಪ್ರಸಾರವಾಗಿವೆ. ಮು೦ದಿನ ಕೆಲವು ತಿ೦ಗಳವರೆಗೂ ಇದೇ ಟ್ರೆಂಡ್ ಮು೦ದುವರಿಯಲಿದೆ ಎ೦ದು ಹೇಳಲಾಗಿದೆ.
ಇನ್ನು ಬಹುರಾಷ್ಟ್ರೀಯ ಕ೦ಪನಿ ಉತನ್ನಗಳಾದ ಪಾಲೆ೯ (15,573 ಬಾರಿ), ಹಾಲಿ೯ಕ್ಸ್ (15,495 ಬಾರಿ), ಪಾ೦ಡ್ಸ್ (13,495 ಬಾರಿ), ಫೇರ್ ಆ್ಯ೦ಡ್ ಲವ್ಲೀ (13,178 ಬಾರಿ) ಜಾಹೀರಾತುಗಳ ಅವಧಿ ಪತ೦ಜಲಿಗಿ೦ತ ಕಡಿಮೆ ಇದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


