ವಾಣಿಜ್ಯ

ಹೊಸ 500 ಮತ್ತು 2000 ರು. ಮುಖಬೆಲೆಯ ನೋಟು ಮುದ್ರಣಕ್ಕೆ ಎಷ್ಟು ಖರ್ಚಾಗುತ್ತದೆ? ಇಲ್ಲಿದೆ ಉತ್ತರ

ನೋಟು ನಿಷೇಧ ಕ್ರಮದ ಬಳಿಕ ಹಳೆಯ 500 ಮತ್ತು 1000 ರು. ನೋಟುಗಳು ಚಲಾವಣೆ ಸ್ಥಗಿತಗೊಳ್ಳುತ್ತಿದ್ದು, ಹೊಸದಾಗಿ ಮುದ್ರಣವಾಗುತ್ತಿರುವ 500 ಮತ್ತು 2000ರು. ಮುಖಬೆಲೆ ನೋಟುಗಳು ಪ್ರಜೆಗಳ ಕೈ ಸೇರುತ್ತಿದೆ. ಹಾಗಾದರೇ ಈ ಹೊಸ ನೋಟುಗಳ ಮುದ್ರಣಕ್ಕೆ ಎಷ್ಟು ವೆಚ್ಚವಾಗುತ್ತದೆ ನಿಮಗೆ ತಿಳಿದಿದೆಯೇ..

ಹೊಸ 500 ಮತ್ತು 2000 ರು. ಮುಖಬೆಲೆಯ ನೋಟು ಮುದ್ರಣಕ್ಕೆ ಎಷ್ಟು ಖರ್ಚಾಗುತ್ತದೆ? ಇಲ್ಲಿದೆ ಉತ್ತರ
ಸಂಗ್ರಹ ಚಿತ್ರ
Published On :

ನವದೆಹಲಿ: ನೋಟು ನಿಷೇಧ ಕ್ರಮದ ಬಳಿಕ ಹಳೆಯ 500 ಮತ್ತು 1000 ರು. ನೋಟುಗಳು ಚಲಾವಣೆ ಸ್ಥಗಿತಗೊಳ್ಳುತ್ತಿದ್ದು, ಹೊಸದಾಗಿ ಮುದ್ರಣವಾಗುತ್ತಿರುವ 500 ಮತ್ತು 2000ರು. ಮುಖಬೆಲೆ ನೋಟುಗಳು ಪ್ರಜೆಗಳ ಕೈ  ಸೇರುತ್ತಿದೆ. ಹಾಗಾದರೇ ಈ ಹೊಸ ನೋಟುಗಳ ಮುದ್ರಣಕ್ಕೆ ಎಷ್ಟು ವೆಚ್ಚವಾಗುತ್ತದೆ ನಿಮಗೆ ತಿಳಿದಿದೆಯೇ..

ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಶ್ನೆಗೆ ಆರ್ ಟಿಐ ಅರ್ಜಿಯಿಂದ ಉತ್ತರ ದೊರೆತಿದ್ದು, ಹೊಸ 500 ರು.ಲ ಪ್ರತೀ ನೋಟಿಗೆ 3.09 ರು. ವೆಚ್ಚವಾಗುತ್ತಿದ್ದು, 2000 ರು.ಮುಖಬೆಲೆಯ ಪ್ರತೀ ನೋಟಿಗೆ 3.54 ರ. ವೆಚ್ಚವಾಗಲಿದೆಯಂತೆ.  ಆರ್ ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿ ಮೇರೆಗೆ ಹೊಸ ನೋಟುಗಳನ್ನು ಮುದ್ರಣ ಮಾಡುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಮಾಹಿತಿ ನೀಡಿದ್ದು, 500 ರು.  ಮುಖಬೆಲೆ 1000 ನೋಟುಗಳ ಮುದ್ರಣಕ್ಕೆ 3,090 ರು. ವೆಚ್ಚವಾಗುತ್ತಿದ್ದು, 2000 ರು.ಮುಖಬೆಲೆಯ ಸಾವಿರ ನೋಟುಗಳ ಮುದ್ರಣಕ್ಕೆ 3, 540 ರು. ವೆಚ್ಚವಾಗುತ್ತಿದೆ ಎಂದು ಬಿಆರ್ ಬಿಎನ್ಎಂಪಿಎಲ್ ಸಂಸ್ಥೆ ತನ್ನ ಉತ್ತರದಲ್ಲಿ ತಿಳಿಸಿದೆ.

ಈ ಹಿಂದೆ ನಿಷೇಧವಾದ 500 ಮಕ್ಕು 1000 ರು. ಮುಖಬೆಲೆಯ ನೋಟುಗಳ ಮುದ್ರಣಕ್ಕೂ ಸರಾಸರಿ ಇದೇ ಪ್ರಮಾಣದ ಹಣ ಖರ್ಚಾಗುತ್ತಿತ್ತು ಎಂದು ಬಿಆರ್ ಬಿಎನ್ಎಂಪಿಎಲ್ ಸಂಸ್ಥೆ ತಿಳಿಸಿದೆ. ಇದೇ ವೇಳೆ ರಿಸರ್ವ್ ಬ್ಯಾಂಕ್  ಹೊಸ 500 ಮುಖಬೆಲೆಯ ಹೊಸ ಆರ್ ಸರಣಿಯ ನೋಟುಗಳನ್ನು ಬ್ಯಾಂಕುಗಳಿಗೆ ಚಲಾವಣೆಗಾಗಿ ನೀಡಿದೆ ಎಂದು ತಿಳಿದುಬಂದಿದೆ. ಅಂತೆಯೇ 50 ರು. ಮುಖಬೆಲೆಯ ಆರ್ ಮತ್ತು ಎಲ್ ಸರಣಿಯ ಹೊಸ ನೋಟುಗಳನ್ನೂ ಕೂಡ  ಮುಂದಿನ ದಿನಗಳಲ್ಲಿ ಚಲಾವಣೆಗೆ ನೀಡಲಾಗುತ್ತದೆ ಎಂದು ಆರ್ ಬಿಐ ಅಧ್ಯಕ್ಷ ಊರ್ಜಿತ್ ಪಟೇಲ್ ಅವರು ತಿಳಿಸಿದ್ದಾರೆ.

ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರು.ನೋಟುಗಳನ್ನು ನಿಷೇಧಿಸಿದ್ದರು. ಅಂದಿನಿಂದ ಇಂದಿನವರೆಗೂ ದೇಶಾದ್ಯಂತ ಚಲಾವಣೆಯಾಗುತ್ತಿದ್ದ ಸುಮಾರು 15.44 ಲಕ್ಷ ಕೋಟಿ ಹಳೆಯ  ನೋಟುಗಳ ಪೈಕಿ ಶೇ.86ರಷ್ಟು ಹಳೆಯ ನೋಟುಗಳು ಈಗಾಗಲೇ ಬ್ಯಾಂಕುಗಳಲ್ಲಿ ಜಮೆಯಾಗಿದೆ. ಹಳೆಯ ನೋಟು ಜಮಾವಣೆ ಇನ್ನು ಕೇವಲ 9 ದಿನಗಳು ಮಾತ್ರ ಬಾಕಿ ಇದ್ದು, ಈ 9 ದಿನಗಳಲ್ಲಿ ಅತ್ಯಲ್ಪ ಪ್ರಮಾಣದ ಹಳೆಯ  ನೋಟುಗಳ ಮಾತ್ರ ಬ್ಯಾಂಕ್ ಗೆ ಜಮೆಯಾಗುವ ಸಾಧ್ಯತೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಒಂದು ಬಾರಿ ಮಾತ್ರ 5 ಸಾವಿರ ರು.ಗಿಂತ ಹೆಚ್ಚು ಹಳೆಯ ನೋಟುಗಳನ್ನು ಠೇವಣೆ ಮಾಡುವುದಕ್ಕೆ ಮಿತಿ ಹೇರಿತ್ತು.

ಹೀಗಾಗಿ ಕಪ್ಪುಹಣದ ರೂಪದಲ್ಲಿ ಬಾಕಿ ಉಳಿದಿರುವ ಹಳೆಯ ನೋಟುಗಳ ಚಲಾವಣೆಯಾಗದೇ ಸ್ಥಗಿತವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.