ವಾಣಿಜ್ಯ

ಪೆಟ್ರೋಲ್ ದರ 2.21 ರು. ಮತ್ತು ಡೀಸೆಲ್ ದರ 1.79 ರು. ಏರಿಕೆ!

ನಿರೀಕ್ಷೆಯಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.21 ರು ಮತ್ತು ಡೀಸೆಲ್ ದರದಲ್ಲಿ 1.79 ರು. ಏರಿಕೆ ಮಾಡಲಾಗಿದೆ.

ಪೆಟ್ರೋಲ್ ದರ 2.21 ರು. ಮತ್ತು ಡೀಸೆಲ್ ದರ 1.79 ರು. ಏರಿಕೆ!
ಸಂಗ್ರಹ ಚಿತ್ರ
Published On :

ನವದೆಹಲಿ: ನಿರೀಕ್ಷೆಯಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.21 ರು ಮತ್ತು ಡೀಸೆಲ್ ದರದಲ್ಲಿ 1.79 ರು. ಏರಿಕೆ ಮಾಡಲಾಗಿದೆ.

ನೂತನ ದರಗಳು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿನ ವ್ಯಾಟ್ ಏರಿಕೆಯೇ ದರ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಪೆಟ್ರೋಲ್  ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕೇಂದ್ರ ಸರ್ಕಾರ ಈ ಹಿಂದೆ 2.84ರು ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು 2.11ರು, ಏರಿಕೆ ಮಾಡಿತ್ತು. ಇದೇ ಕಾರಣಕ್ಕೆ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ  ಏರಿಕೆ ಮಾಡಿವೆ ಎಂದು ಹೇಳಲಾಗುತ್ತಿದೆ.

ತೈಲೋತ್ಪನ್ನ ಸಂಸ್ಥೆಗಳು ಪ್ರತೀ ತಿಂಗಳ 1 ಮತ್ತು 16ದಿನಾಂಕದಂದು ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡಲು ನಿರ್ಧರಿಸಿದ್ದು, ಅದರಂತೆ ನಿನ್ನೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡಿವೆ.  ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಚಾತೈಲ ದರ 62.82 ಜಾಲರ್ ಗೆ ಏರಿಕೆಯಾಗಿದ್ದು, ಪ್ರತೀ ಬ್ಯಾರೆಲ್ ಡೀಸೆಲ್ ಕೂಡ 57.43ಕ್ಕೆ ಏರಿಕೆಯಾಗಿತ್ತು. ಹೀಗಾಗಿ ತೈಲೋತ್ಪನ್ನ ಸಂಸ್ಥೆಗಳು ದರ ಏರಿಕೆ  ಮಾಡಿವೆ.

10 ದಿನಗಳಿಗೂ ಮೊದಲೇ ತೈಲೋತ್ಪನ್ನ ಸಂಸ್ಥೆಗಳು ತೈಲ ದರ ಏರಿಕೆಗೆ ಮುಂದಾಗಿದ್ದವು. ಆದರೆ ಸಂಸತ್ ಕಲಾಪದಲ್ಲಿ ತೈಲ ದರ ಏರಿಕೆ ಅಡ್ಡಿಯುಂಟು ಮಾಡುವ ಆತಂಕದಿಂದ ಕೇಂದ್ರ ಸರ್ಕಾರ ತೈಲ ದರ ಏರಿಕೆಯನ್ನು  ಮುಂದೂಡಿತ್ತು. ಅದರಂತೆ ಶುಕ್ರವಾರ ಸಂಸತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ನಿನ್ನೆ ನಡೆದ ಸಭೆಯಲ್ಲಿ ತೈಲೋತ್ಪನ್ನ ಸಂಸ್ಥೆಗಳು ದರ ಏರಿಕೆ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.