ಸೆನ್ಸೆಕ್ಸ್ 541 ಅಂಕ ಕುಸಿತ
ಸೆಪ್ಟೆಂಬರ್ ತಿಂಗಳ ಡೆರಿವೆಟಿವ್ ಒಪ್ಪಂದಗಳ ನವೀಕರಣ ಗುರುವಾರ ಇರುವುದರಿಂದ ಎಚ್ಚರಗೊಂಡ ಹೂಡಿಕೆದಾರರು ಮಂಗಳವಾರ ಹೆಚ್ಚಿನ ಮಾರಾಟದಲ್ಲಿ...

ಮುಂಬೈ: ಸೆಪ್ಟೆಂಬರ್ ತಿಂಗಳ ಡೆರಿವೆಟಿವ್ ಒಪ್ಪಂದಗಳ ನವೀಕರಣ ಗುರುವಾರ ಇರುವುದರಿಂದ ಎಚ್ಚರಗೊಂಡ ಹೂಡಿಕೆದಾರರು ಮಂಗಳವಾರ ಹೆಚ್ಚಿನ ಮಾರಾಟದಲ್ಲಿ ತೊಡಗಿದ್ದರಿಂದ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಗಣನೀಯ ನಷ್ಟ ಕಂಡವು. ಯೂರೋಪ್ ಮತ್ತು ಅಮೆರಿಕದ ಸೂಚ್ಯಂಕಗಳು ನಷ್ಟದೊಂದಿಗೆ ವಹಿವಾಟು ಅರಂಭಿಸಿದ್ದರಿಂದಲೂ ವಹಿವಾಟು ಕೊನೆ ಕೊನೆಗೆ ಮಾರುಕಟ್ಟೆಯಲ್ಲಿ ಮಾರಾಟ ಒತ್ತಡ ಹೆಚ್ಚಿತ್ತು.
ಸೆನ್ಸೆಕ್ಸ್ 541.14 ಅಂಕ ಕುಸಿತದೊಂದಿಗೆ 25,651.84ಕ್ಕೆ ತಲುಪಿದರೆ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 165.10 ಅಂಕ ನಷ್ಟದೊಂದಿಗೆ 7,812ಕ್ಕೆ ತಲುಪಿದೆ. ಬಿಎಸ್ಇ ಸಣ್ಣ ಮತ್ತು ಮಧ್ಯಮ ಬಂಡವಾಳ ಸೂಚ್ಯಂಕಗಳು ಶೇ.1.6ರಷ್ಟು ಕುಸಿದವು. 1,699 ಷೇರುಗಳು ನಷ್ಟ ಕಂಡರೆ 978 ಮಾತ್ರ ಗಳಿಕೆ ದಾಖಲಿಸಿದವು. ಡಾಲರ್ ಎದುರು ರುಪಾಯಿ ಮೌಲ್ಯ ಸಹ 20 ಪೈಸೆ ನಷ್ಟದೊಂದಿಗೆ 65.85ಕ್ಕೆ ತಲುಪಿತು.
ಪ್ರಸಕ್ತ ಹಣಕಾಸು ಸಾಲಿನಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಶೇ.7.8ರಿಂದ ಶೇ.7.4ಕ್ಕೆ ಇಳಿಸಿತು. ದುರ್ಬಲ ಮುಂಗಾರು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಹಾಗೂ ಸುಧಾರಣೆಗಳನ್ನು ಕೈಗೊಳ್ಳುವಲ್ಲಿ ಸರ್ಕಾರದ ಹಿನ್ನಡೆ ಇದಕ್ಕೆ ಕಾರಣ ಎಂದು ಹೇಳಿದ್ದು ಸಹ ವಹಿವಾಟಿನ ಮೇಲೆ ಪರಿಣಾಮ ಬೀರಿತು. ಯೂರೋಪ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಹ ಕುಸಿತ ಕಂಡವು.
ಆಕ್ಸಿಸ್ ಬ್ಯಾಂಕ್, ಎಚ್‍ಡಿಎಫ್ ಸಿ, ಎಸ್ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‍ಡಿಎಫ್ ಸಿ ಬ್ಯಾಂಕ್ ಶೇ 2ರಿಂದ 3ರಷ್ಟು ಕುಸಿದವು. ವಾಹನ ವಿಭಾಗದಲ್ಲಿ ಟಾಟಾ ಮೋಟಾರ್ಸ್, ಬಜಾಜ್ ಆಟೋ ಶೇ.1ರಿಂದ 3ರವರೆಗೂ ನಷ್ಟ ಕಂಡವು. ಲೋಹ ವಲಯದ ಷೇರುಗಳು ಸಹ ಹೆಚ್ಚಿನ ಮಾರಾಟ ಒತ್ತಡಕ್ಕೆ ಸಿಲುಕಿದ್ದವು. ಇದರಿಂದ ವೇದಾಂತ, ಕೋಲ್ ಇಂಡಿಯಾ, ಹಿಂಡಾಲ್ಕೊ, ಟಾಟಾ ಸ್ಟೀಲ್ ಷೇರುಗಳು ಹೆಚ್ಚಿನ ಕುಸಿತ ಕಂಡವು.
ಡೆರಿವೆಟಿವ್ ಒಪ್ಪಂದಗಳ ನವೀಕರಣ ಇರುವುದರಿಂದ ಮತ್ತು ಸೂಚ್ಯಂಕಗಳು ಕಳೆದ ವಾರ ಎತ್ತರದಲ್ಲಿದ್ದುದರಿಂದ ಹೂಡಿಕೆದಾರರು ಮಧ್ಯಾಹ್ನದ ನಂತರ ಭಾರಿ ಮಾರಾಟಕ್ಕೆ ಮುಂದಾದರು ಎಂದು ಜಿಯೋಜಿತ್ ಬಿಎನ್‍ಪಿ ಪಾರಿಬಾಸ್ ಫೈನಾನ್ಷಿಯಲ್ ಸರ್ವೀಸಸ್ನ ಸಹ ಮುಖ್ಯಸ್ಥರಾದ ಆನಂದ್ ಜೇಮ್ಸ್ ಹೇಳಿದ್ದಾರೆ.
ಆದರೂ ಏಷ್ಯಾದ ಇತರ ಷೇರು ಪೇಟೆ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ಶಾಂಘೈ ಸೂಚ್ಯಂಕ ಶೇ.0.92 ಏರಿಕೆ ದಾಖಲಿಸಿದರೆ ಹಾಂಕಾಂಗ್‍ನ ಹ್ಯಾಂಗ್‍ಸೆಂಗ್ ಶೇ.0.18ರಷ್ಟು ಗಳಿಕೆ ಕಂಡಿತು. ಫೋಕ್ಸ್ ವ್ಯಾಗನ್ ತನ್ನ ಡೀಸೆಲ್ ಕಾರುಗಳಿಗೆ ಹೊಗೆ ಹೊರಸೂಸುವ ಸಾಧನ ಅಳವಡಿಸುವಲ್ಲಿ ವಂಚಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಂಪನಿಯ ಎಲ್ಲ ಮಾಡೆಲ್‍ಗಳ ಷೇರುಗಳು ಭಾರಿ ಕುಸಿತ ಕಂಡವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


