ಬಿಎಸ್‍ಎನ್‍ಎಲ್ ನೆಟ್ ವೇಗ ಏರಿಕೆ
ಬಿಎಸ್‍ಎನ್‍ಎಲ್ ಇಂಟರ್ ನೆಟ್ ಸೌಲಭ್ಯ ಹೊಂದಿರುವ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅಕ್ಟೋಬರ್ 1ರಿಂದ ಬ್ರಾಡ್‍ಬ್ಯಾಂಡ್ ವೇಗವನ್ನು...

ಗುರ್ ಗಾಂವ್: ಬಿಎಸ್‍ಎನ್‍ಎಲ್ ಇಂಟರ್ ನೆಟ್ ಸೌಲಭ್ಯ ಹೊಂದಿರುವ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅಕ್ಟೋಬರ್ 1ರಿಂದ ಬ್ರಾಡ್‍ಬ್ಯಾಂಡ್ ವೇಗವನ್ನು ಕನಿಷ್ಠ 2 ಮೆಗಾ ಬೈಟ್ ಪರ್ ಸೆಕೆಂಡ್ (ಎಂಬಿಪಿಎಸ್)ಗೆ ಹೆಚ್ಚಿಸಲಿದೆ.
ಕಂಪನಿ ಸದ್ಯ 512ಕೆಬಿಪಿಎಸ್ ವೇಗದ ಸೇವೆ ಮಾತ್ರ ಕಲ್ಪಿಸುತ್ತಿದೆ. ಬಿಎಸ್‍ಎನ್‍ಎಲ್‍ನ್ನು ಪುನಶ್ಚೇತನಗೊಳಿಸುವ ಭಾಗವಾಗಿ ಸೇವೆಗಳನ್ನು ಉತ್ತಮಗೊಳಿಸಲಾಗುತ್ತಿದೆ. ಬಿಎಸ್‍ಎನ್‍ಎಲ್ ನಿರಂತರವಾಗಿ ಮೊಬೈಲ್ ಮತ್ತು ಲ್ಯಾಂಡ್‍ಲೇನ್ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ.
2014ರ ಮಾಚ್ರ್ ನಿಂದ 2015ರ ಮಾರ್ಚ್ ವೇಳೆಗೆ 1.78 ಕೋಟಿ ಮೊಬೈಲ್ ಮತ್ತು 20 ಲಕ್ಷ ಲ್ಯಾಂಡ್‍ಲೇನ್ ಗ್ರಾಹಕರನ್ನು ಕಳೆದುಕೊಂಡಿದೆ. ಇದರಿಂದ ರು.7,600 ಕೋಟಿ ನಷ್ಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


