ವಾಣಿಜ್ಯ

ಉದ್ಯಮ ಸ್ನೇಹಿ ರ್ಯಾಂಕ್ ಮೇಲೇರಿಕೆ

ಉದ್ಯಮ ಸ್ನೇಹಿ ಪರಿಸರ ಪಟ್ಟಿಯಲ್ಲಿ ಭಾರತದ ಸ್ಥಾನ ಮೇಲೇರಿದೆ. ವಿಶ್ವಬ್ಯಾಂಕ್ 189 ದೇಶಗಳು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದ್ದು...

ಉದ್ಯಮ ಸ್ನೇಹಿ ರ್ಯಾಂಕ್ ಮೇಲೇರಿಕೆ
ಸಾಂದರ್ಭಿಕ ಚಿತ್ರ
Published On :
ವಾಷಿಂಗ್ಟನ್: ಉದ್ಯಮ ಸ್ನೇಹಿ ಪರಿಸರ ಪಟ್ಟಿಯಲ್ಲಿ ಭಾರತದ ಸ್ಥಾನ ಮೇಲೇರಿದೆ. ವಿಶ್ವಬ್ಯಾಂಕ್ 189 ದೇಶಗಳು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಭಾರತ 130ನೇ ಸ್ಥಾನದಲ್ಲಿದೆ. ಈ ಹಿಂದೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಭಾರತ 142ನೇ ಸ್ಥಾನದಲ್ಲಿತ್ತು. ಅಂದರೆ 12 ಸ್ಥಾನಗಳಷ್ಟು ಮೇಲೇರಿದೆ ಎಂದು ವಿಶ್ವಬ್ಯಾಂಕ್‍ನ ಮುಖ್ಯ ಆರ್ಥಿಕ ತಜ್ಞ ಮತ್ತು ಹಿರಿಯ ಉಪಾಧ್ಯಕ್ಷ ಕೌಶಿಕ್ ಬಸು ಹೇಳಿದ್ದಾರೆ. ಯಾವುದೇ ಒಂದು ದೇಶಕ್ಕೆ ಒಮ್ಮೆಗೆ 12 ರ್ಯಾಂಕ್ ಏರಿಕೆ ಕಾಣವುದು ದೊಡ್ಡ ಸಾಧನೆಯಾಗಿದೆ. ಭಾರತದ ಈ ಪ್ರಗತಿ ಅತ್ಯುತ್ತಮ ಸೂಚನೆಯಾಗಿದೆ. ಭಾರತದಲ್ಲಿ ನಡೆಯುತ್ತಿರುವ ಆಡಳಿತದ ಕುರಿತು ಒಳ್ಳೆಯ ಸೂಚನೆಗಳನ್ನು ನೀಡಲಿದೆ ಎಂದಿದ್ದಾರೆ. ಈ ಪಟ್ಟಿಯಲ್ಲಿ ಚೀನಾ 84ನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ 138ನೇ ಸ್ಥಾನದಲ್ಲಿದೆ. ಕಳೆದ ಬಾರಿ ಪಾಕಿಸ್ತಾನ 128ನೇ ಸ್ಥಾನದಲ್ಲಿ ಇದ್ದದು ಈ ಬಾರಿ ಹತ್ತು ಸ್ಥಾನ ಕುಸಿದಿದ್ದರೆ ಚೀನಾ ಆರು ಸ್ಥಾನ ಮೇಲೇರಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಎರಡು ಸುಧಾರಣೆಗಳನ್ನು ಕೈಗೊಂಡಿತು. ಮೊದಲನೆಯದ ದೇಶದಲ್ಲಿ ವಹಿವಾಟು ನಡೆಸಲು ಇಡಬೇಕಾದ ಕನಿಷ್ಠ ಬಂಡವಾಳ ಮತ್ತು ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯುವುದನ್ನು ತೆಗೆದುಹಾಕಿತು. ಇದು ರ್ಯಾಂಕ್‍ನಲ್ಲಿ ಏರಿಕೆ ಕಾಣಲು ಪ್ರಮುಖ ಕಾರಣವಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.