ಎರಡನೇ ತ್ರೈಮಾಸಿಕ: ಏರ್ ಟೆಲ್ ಸಂಸ್ಥೆ ನಿವ್ವಳ ಲಾಭ ಶೇ.10 ರಷ್ಟು ಏರಿಕೆ
ಅತಿ ಹೆಚ್ಚು ಮೊಬೈಲ್ ಗ್ರಾಹಕರನ್ನು ಹೊಂದಿರುವ ಭಾರತಿ ಏರ್ ಟೆಲ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ಶೇ.10 ರಷ್ಟು ನಿವ್ವಳ ಲಾಭ ಗಳಿಸಿದೆ.

ಮುಂಬೈ:ಅತಿ ಹೆಚ್ಚು ಮೊಬೈಲ್ ಗ್ರಾಹಕರನ್ನು ಹೊಂದಿರುವ ಭಾರತಿ ಏರ್ ಟೆಲ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ಶೇ.10 ರಷ್ಟು ನಿವ್ವಳ ಲಾಭ ಗಳಿಸಿದೆ.
ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತ ಉತ್ತಮ ಡೇಟಾ ಸೌಲಭ್ಯ ಒದಗಿಸುತ್ತಿದ್ದು, ಏರ್ ಟೆಲ್ ಗ್ರಾಹಕರು ಅತಿ ಹೆಚ್ಚು ಡಾಟಾ ಬಳಕೆ ಮಾಡುತ್ತಿರುವುದು ಸಂಸ್ಥೆಗೆ ಲಾಭವಾಗಿ ಪರಿಣಮಿಸಿರುವುದು ನಿವ್ವಳ ಲಾಭ ಏರಿಕೆಗೆ ಪ್ರಮುಖ ಕಾರಣವಾಗಿದೆ. ಚೀನಾ ಬ್ರಾಂಡ್ ನ ಫೋನ್ ಗಳ ಪ್ರಸರಣದಿಂದಾಗಿ ಭಾರತದಲ್ಲಿ ಅತಿ ಹೆಚ್ಚು ಜನರು ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆ ಮಾಡುತ್ತಿದ್ದು, ವೇಗವಾದ ಡೌನ್ ಲೋಡ್ ಹಾಗೂ ಇಂಟರ್ ನೆಟ್ ಆಕ್ಸೆಸ್ ಗೆ ಬೇಡಿಕೆ ಹೆಚ್ಚಾಗಿದೆ.
ಏರ್ ಟೆಲ್ ಸಂಸ್ಥೆ ೪ ಜಿ ಮೂಲಕ ಅತಿ ಹೆಚ್ಚು ವೇಗದ ಇಂಟರ್ ನೆಟ್ ಸೌಲಭ್ಯ ಒದಗಿಸಿದೆ. ಭಾರತದಲ್ಲಿ ಸ್ಟಾರ್ಟ್ ಅಪ್ ಉದ್ಯಮಗಳು ಹೆಚ್ಚುತ್ತಿದ್ದು ಸ್ಥಿರ ಇಂಟರ್ನೆಟ್ ಸಂಪರ್ಕ ಒದಗಿಸುವ ಸಂಸ್ಥೆಯತ್ತ ಹೆಚ್ಚು ಒಲವು ತೋರುತ್ತಿರುವುದು ಸಹ ಏರ್ ಟೆಲ್ ನ ಬೇಡಿಕೆ ಹೆಚ್ಚು ಮಾಡಿದೆ.
" ಹೈ ಸ್ಪೀಡ್ 4 ಜಿ ಸೇವೆಗಳನ್ನು ದೇಶದ 334 ಪಟ್ಟಣಗಳಲ್ಲಿ ಪರಿಚಯಿಸಿ, ವೇಗವಾಗಿ ಬೆಳೆಯುತ್ತಿರುವ ಡೇಟಾ ಮಾರುಕಟ್ಟೆ ಮೇಲೆ ಹತೋಟಿ ಸಾಧಿಸಿದ್ದೇವೆ ಎಂದು ಏರ್ ಟೆಲ್ ನ ಮುಖ್ಯ ಕಾರ್ಯನಿರ್ವಾಹಕ ಗೋಪಾಲ್ ವಿಠಲ್ ತಿಳಿಸಿದ್ದಾರೆ.
3 ಜಿ ದರದಲ್ಲೇ 4 ಜಿ ಸೇವೆಗಳನ್ನು ನೀಡುವುದಾಗಿ ಏರ್ ಟೆಲ್ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ 3 ಜಿ ಗ್ರಾಹಕರು 4 ಜಿಗೆ ವಲಸೆ ಹೋಗುತ್ತಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


