ವಾಣಿಜ್ಯ

ಬಿಡದಿಯಲ್ಲಿ ಹೆರ್ಮಾನ್ ಮಿಲ್ಲರ್ಸ್ ಕುರ್ಚಿ ಘಟಕ

ಪೀಠೋಪಕರಣಗಳ ತಯಾರಿಕಾ ಕಂಪನಿಯಾದ ಹೆರ್ಮಾನ್ ಮಿಲ್ಲರ್ಸ್ ಮೊದಲ ಬಾರಿಗೆ ಬೆಂಗಳೂರಿನ ಬಿಡದಿಯಲ್ಲಿ ಕುರ್ಚಿ ತಯಾರಿಕಾ ಘಟಕ ತೆರೆದಿದೆ...

ಬಿಡದಿಯಲ್ಲಿ ಹೆರ್ಮಾನ್ ಮಿಲ್ಲರ್ಸ್ ಕುರ್ಚಿ ಘಟಕ
ಹೆರ್ಮಾನ್ ಮಿಲ್ಲರ್ಸ್ ಕುರ್ಚಿ ಘಟಕ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಪೀಠೋಪಕರಣಗಳ ತಯಾರಿಕಾ ಕಂಪನಿಯಾದ ಹೆರ್ಮಾನ್ ಮಿಲ್ಲರ್ಸ್ ಮೊದಲ ಬಾರಿಗೆ ಬೆಂಗಳೂರಿನ ಬಿಡದಿಯಲ್ಲಿ ಕುರ್ಚಿ ತಯಾರಿಕಾ ಘಟಕ ತೆರೆದಿದೆ.

ಇದರಿಂದಾಗಿ ಏಷ್ಯಾದಲ್ಲಿ ತನ್ನ ವಹಿವಾಟು ವಿಸ್ತರಿಸಿದಂತಾಗಿದೆ ಎಂದು ಕಂಪನಿ ಉಪಾಧ್ಯಕ್ಷ ಜೆರೆಮಿ ಹಾಕಿಂಗ್ ಹೇಳಿದ್ದಾರೆ. ಹೆರ್ಮಾನ್ ಮಿಲ್ಲರ್ಸ್ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯಲ್ಲಿ  ಹೆಚ್ಚು ಲಭ್ಯವಾಗುವಂತೆ ಮಾಡಲು ಘಟಕ ಸ್ಥಾಪಿಸಲಾಗಿದೆ ಎಂದರು. ಎರಾನ್ ಟಿಎಂ ಹಾಗೂ ಮಿರ್ರಾ ಟಿಎಂ ನಂತಹ ವಿನ್ಯಾಸಗಳು ವಿಶ್ವದಲ್ಲೇ ಅತ್ಯಂತ ಸದೃಢ ಕುರ್ಚಿಗಳಾಗಿದ್ದು, ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತವೆ. ಹೊಸ ಘಟಕ ಫಾಸ್ಟ್ ಟ್ರ್ಯಾಕ್ ಡೆಲಿವರಿ ಸೇವೆ ನೀಡಲಿದೆ.

ಖರೀದಿಸುವುದು ಹೇಗೆ?: ಗ್ರಾಹಕರು ಫಾಸ್ಟ್ ಟ್ರ್ಯಾಕ್ ಕಾರ್ಯಕ್ರಮದ ಮೂಲಕ ಖರೀದಿಸಲು 1020ದಿನಗಳು ತಗುಲುತ್ತದೆ. ಹೆರ್ಮಾನ್ ಮಿಲ್ಲರ್ ಇಂಡಿಯಾ ಕೂಡಾ ಹೆಚ್ಚುವರಿ ವಿನ್ಯಾಸ ಸೇವೆಗಳಾದ ಸ್ಪೇಸ್ ಪ್ಲಾನಿಂಗ್ ಮತ್ತು ಲಿವಿಂಗ್ ಆಫೀಸ್ ಸೊಲ್ಯೂಷನ್ಸ್‍ನ್ನೂ ಒದಗಿಸುತ್ತದೆ. ಗ್ರಾಹಕರು ಹೆರ್ಮಾನ್ ಮಿಲ್ಲರ್ಸ್‍ನ ಪೋರ್ಟ್ ಪೋಲಿಯೋವನ್ನು ಯಾವುದೇ ಪ್ರಾದೇಶಿಕ ಡೀಲರ್ ಶೋರೂಂಗಳಲ್ಲಿ ಅನ್ವೇಷಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.