ಬೇಳೆಕಾಳುಗಳ ಬೆಲೆ ಇಳಿಕೆಗೆ ಕೇಂದ್ರ ಕ್ರಮ
ಬೇಳೆ ಕಾಳುಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಗ್ರಾಹಕರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಇದೀಗ ಬೇಳೆ ಕಾಳುಗಳ ಬೆಲೆ ಏರಿಕೆಗೆ ನಿಯಂತ್ರಣ ಹಾಕಲು ಮುಂದಾಗಿದ್ದು, ತುರ್ತುಕ್ರಮ ಕೈಗೊಳ್ಳಲು ಗುರುವಾರ ಮುಂದಾಗಿದೆ...

ನವದೆಹಲಿ: ಬೇಳೆ ಕಾಳುಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಗ್ರಾಹಕರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಇದೀಗ ಬೇಳೆ ಕಾಳುಗಳ ಬೆಲೆ ಏರಿಕೆಗೆ ನಿಯಂತ್ರಣ ಹಾಕಲು ಮುಂದಾಗಿದ್ದು, ತುರ್ತುಕ್ರಮ ಕೈಗೊಳ್ಳಲು ಗುರುವಾರ ಮುಂದಾಗಿದೆ.
ಹಾಗೂ ಮಧ್ಯಮ ವರ್ಗದ ಜನರ ಕೈಗೆ ಎಟುಕದ ಬೇಳೆ ಕಾಳು ದರವು ಜನರಲ್ಲಿ ಸಾಕಷ್ಟು ಸಮಸ್ಯೆಯನ್ನು ಮಾಡಿದೆ. ಪ್ರಸ್ತುತ ಚಿಲ್ಲೆರೆ ಮಾರುಕಟ್ಟೆಗಳಲ್ಲಿ ಬೇಳೆಕಾಳುಗಳ ಬೆಲೆ 187-190 ಇದೆ. ಹೀಗಾಗಿ ಬೇಳೆ ಕಾಳುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರವು 500 ಕೋಟಿ ರುಪಾಯಿ ಬೆಲೆ ಸ್ಥೀರೀಕರಣ ನಿಧಿಯನ್ನು ಸ್ಥಾಪನೆ ಮಾಡಿದೆ.
ಈ ಕುರಿತಂತೆ ಇಂದು ಮಾತನಾಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಮುಂಬೈ ಸೇರಿದಂತೆ ದೇಶದ ಹಲವು ಬಂದರುಗಳಲ್ಲಿ ದಾಸ್ತಾನಿರುವ ಬೇಳೆ ಕಾಳುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಜತೆಗೆ ಬೆಲೆ ಸ್ಥಿರ ನಿಧಿಯನ್ನು ಬಳಸಲು ಕೇಂದ್ರ ನಿರ್ಧಾರ ಮಾಡಿದೆ. ಇದಕ್ಕಾಗಿ 500 ಕೋಟಿ ರುಪಾಯಿಯ ಬೆಲೆ ಸ್ಥಿರೀಕರಣ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಜವಹರ್ ಲಾಲ್ ನೆಹರು ಬಂದರಿನಲ್ಲಿರುವ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಇದರಿಂದಾಗಿ ಬೇಳೆ ಕಾಳುಗಳ ಬೆಳೆ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ಹೊರದೇಶಗಳಿಂದ ಆಮದಾಗುವ ಬೇಳೆ ಕಾಳುಗಳ ಮೇಲಿನ ತೆರಿಗೆಯ ದರದಲ್ಲೂ ಇಳಿಮುಖವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


