ಟ್ವಿಟರ್‍ನಲ್ಲೂ ಅರ್ಧಚಂದ್ರ ಪರ್ವ?
ಅಪಾರ ಜನಪ್ರಿಯತೆ ಹಾಗೂ ಪ್ರತಿದಿನ ಏರುತ್ತಿರುವ ಸದಸ್ಯ ಸಂಖ್ಯೆಯ ನಡುವೆಯೂ ಟ್ವಿಟರ್ ತನ್ನ ಉದ್ಯೋಗಿಗಳ...

Published On :
ಸ್ಯಾನ್ಫ್ರಾನ್ಸಿಸ್ಕೊ: ಅಪಾರ ಜನಪ್ರಿಯತೆ ಹಾಗೂ ಪ್ರತಿದಿನ ಏರುತ್ತಿರುವ ಸದಸ್ಯ ಸಂಖ್ಯೆಯ ನಡುವೆಯೂ ಟ್ವಿಟರ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಚಿಂತನೆಗೆ ಮುಂದಾಗಿದೆ.
ಕಂಪನಿಗೆ ಮರಳಿರುವ ಸಿಇಓ ಜಾಕ್ ಡೋರ್ಸಿ ಈ ಸುಳಿವು ನೀಡಿದ್ದು, ಜಾಲತಾಣದ ಸದಸ್ಯರನ್ನು ಗೆಲ್ಲುವಲ್ಲಿ ಹೊಸ ರೀತಿಯ ಕಾರ್ಯವೈಖರಿಗೆ ಒತ್ತು ನೀಡಲು ನಿರ್ಧರಿಸಿದ್ದಾರೆ.
ಟೆಕ್‍ವೆಬ್‍ಸೈಟ್ ಒಂದರಲ್ಲಿ ಇದು ವರದಿಯಾಗಿದೆ. ಕೆಲಸದಿಂದ ಕಿತ್ತುಹಾಕುವ ಕಾರ್ಯ ಟ್ವಿಟರ್‍ನ ಎಲ್ಲ ಶಾಖೆಗ ಳಲ್ಲೂ ನಡೆಯಲಿದ್ದು, ಇದರ ನೇರ ಪರಿಣಾಮ ಎಂಜಿನಿಯರ್‍ಗಳ ಮೇಲೆ ಆಗಲಿದೆ.
4200 ಎಂಜಿ ನಿಯರ್‍ಗಳಿರುವ ಟ್ವಿಟರ್‍ನಲ್ಲಿ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳು ನೌಕರಿ ಕಳೆದುಕೊಳ್ಳಲಿದ್ದಾರೆ. ಈ ವರದಿ ಬಗ್ಗೆ ಟ್ವಿಟರ್ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


