ಸತತ 6 ದಿನಗಳ ಏರಿಕೆ ಬಳಿಕ ಮುಗ್ಗರಿಸಿದ ಸೆನ್ಸೆಕ್ಸ್, 190 ಅಂಕಗಳ ಕಡಿತ
ಸಕಾರಾತ್ಮಕ ವಹಿವಾಟಿನಿಂದಾಗಿ ಸತತ ಆರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಮುಗ್ಗರಿಸಿದೆ...

ಮುಂಬೈ: ಸಕಾರಾತ್ಮಕ ವಹಿವಾಟಿನಿಂದಾಗಿ ಸತತ ಆರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಭಾರತೀಯ ಷೇರುಮಾರುಕಟ್ಟೆ ಗುರುವಾರ ಮುಗ್ಗರಿಸಿದೆ.
ಗುರುವಾರ ದಿನದಂತ್ಯದ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ 190 ಅಂಕಗಳನ್ನು ಕಳೆದುಕೊಂಡಿದ್ದು, 26,845.81 ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿ ಸೂಚ್ಯಂಕ ಕೂಡ 48.05 ಅಂಕಗಳ ಇಳಿಕೆಯೊಂದಿಗೆ 8,129.35 ಅಂಕಗಳಿಗೆ ಸ್ಥಿರವಾಗಿದೆ. ಪ್ರಮುಖವಾಗಿ ಐಟಿಸಿ ಶೇ.3, ಐಡಿಯಾ ಸೆಲ್ಯುಲರ್ ಶೇ.2, ರಿಲಯನ್ಸ್ ಇಂಡಸ್ಟ್ರೀಸ್ ಶೇ.2 ಮತ್ತು ಎಕ್ಸಿಸ್ ಬ್ಯಾಂಕ್ ಶೇ.2.ರಷ್ಟು ನಷ್ಟ ಅನುಭವಿಸಿದ್ದು, ಟಿಸಿಎಸ್ ಶೇ.1.2, ಎಚ್‌ಡಿಎಫ್ಸಿ ಶೇ.1, ಲೂಪಿನ್ ಶೇ.1, ಸನ್‌ಫಾರ್ಮಾ ಶೇ.1 ಮತ್ತು ಮಹಿಂದ್ರ ಸಂಸ್ಥೆಯ ಷೇರುಗಳಲ್ಲಿ ಶೇ.1ರಷ್ಟು ನಷ್ಟ ಕಂಡುಬಂದಿದೆ.
ಸತತ ಆರು ದಿನಗಳ ವಹಿವಾಟಿನಲ್ಲಿ ಲಾಭದ ಹಾದಿಯಲ್ಲಿ ನಡೆದು ಬಂದ ಷೇರುಗಳನ್ನು ಹೂಡಿಕೆದಾರರು ಏಕಾಏಕಿ ಮಾರಲು ಮುಂದಾಗಿ ಲಾಭ ಮಾಡಿಕೊಳ್ಳಲು ತೊಡಗಿಕೊಂಡಿದ್ದೇ ಭಾರತೀಯ ಷೇರುಮಾರುಕಟ್ಟೆ ಮುಗ್ಗರಿಸಲು ಕಾರಣವಾಯಿತೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


