ಆರ್‌ಬಿಐ ಬಡ್ಡಿದರದಲ್ಲಿ ಬದಲಾವಣೆ ಇಲ್ಲ
ಮಂಗಳವಾರ ದ್ವಿ ಮಾಸಿಕ ಆರ್ಥಿಕ ನೀತಿ ಅವಲೋಕನ ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದುಬ್ಬರವನ್ನು...

Published On :
ಮುಂಬೈ: ಮಂಗಳವಾರ ದ್ವಿ ಮಾಸಿಕ ಆರ್ಥಿಕ ನೀತಿ ಅವಲೋಕನ ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದುಬ್ಬರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಅದೇ ವೇಳೆ ರಿಪೋ, ರಿವರ್ಸ್ ರಿಪೋ ದರಗಳಲ್ಲಿಯೂ ಆರ್‌ಬಿಐ ಬದಲಾವಣೆಗಳನ್ನು ಮಾಡಿಲ್ಲ.
ಮಾತ್ರವಲ್ಲದೆ ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವಾಗ ಅವರಿಂದ ವಸೂಲಿ ಮಾಡುವ ಬಡ್ಡಿಯ ರಿಪೋ ದರ ಶೇ. 6.75 ಆಗಿದ್ದು, ಇದರಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿಲ್ಲ. ಅದೇ ವೇಳೆ ಶೇ. 4 ಇದ್ದ ಕ್ಯಾಶ್ ರಿವರ್ಸ್ ಅನುಪಾತದಲ್ಲಿಯೂ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ದೇಶದಲ್ಲಿ ಹಣದುಬ್ಬರದ ದರವನ್ನು ಏರಿಕೆಯಾಗಿರುವುದರಿಂದ ಮತ್ತು ಯುಎಸ್ ಫೆಡ್ ರಿಸರ್ವ್ ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆಯಿರುವುದರಿಂದ ರಿಸರ್ವ್ ಬ್ಯಾಂಕ್ ಯಾವುದೇ ದರಗಳಲ್ಲಿ ಬದಲಾವಣೆಗಳನ್ನು ಮಾಡಿಲ್ಲ.
ಯುಎಸ್ ಫೆಡ್ ರಿಸರ್ವ್‌ನ ಅವಲೋಕನ ಸಭೆ ಡಿಸೆಂಬರ್ 15-16 ರಂದು ನಡೆಯಲಿದೆ. ಉದ್ಯೋಗವಕಾಶಗಳು ಹೆಚ್ಚಾಗಿರುವುದು ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ಫೆಡ್ ರಿಸರ್ವ್ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ. ಏತನ್ಮಧ್ಯೆ, ಫೆಡ್ ರಿಸರ್ವ್ ನ ನಡೆಯೇನು ಎಂಬುದನ್ನು ಅರಿತ ನಂತರವೇ ಆರ್‌ಬಿಐ ತನ್ನ ಬಡ್ಡಿದರಗಳನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


