ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಪ್ರಪಾತಕ್ಕೆ ಕುಸಿದ ಷೇರುಗಳು
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡನೇ ಭಾರಿಗೆ ದೊಡ್ಡ ಪ್ರಮಾಣದಲ್ಲಿ ಷೇರುಗಳು ಪ್ರಪಾತಕ್ಕೆ ಕುಸಿದಿವೆ...

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎರಡನೇ ಭಾರಿಗೆ ದೊಡ್ಡ ಪ್ರಮಾಣದಲ್ಲಿ ಷೇರುಗಳು ಪ್ರಪಾತಕ್ಕೆ ಕುಸಿದಿವೆ. ಅಮೆರಿಕ, ಚೀನ ಹಾಗೂ ಐರೋಪ್ಯ ವಲಯದ ಆರ್ಥಿಕತೆಯಲ್ಲಿ ಕಂಡು ಬಂದಿರುವ ಏರುಪೇರು, ಅಸ್ಥಿರತೆಯ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಗಳಲ್ಲೂ ಭಾರೀ ಕುಸಿತ ಕಂಡಿದೆ.
ಬುಧವಾರ ಅಂತ್ಯದ ವೇಳೆ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ 722.77 ಅಂಕಗಳ ಭಾರೀ ಕುಸಿತವನ್ನು ಕಂಡಿದೆ. ಇದೇ ರೀತಿ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ 227.80 ಅಂಕಗಳ ಕುಸಿತವನ್ನು ಕಂಡಿದೆ.
722.77 ಅಂಕಗಳ ಕುಸಿತದೊಂದಿಗೆ (ಶೇ.2.6 ನಷ್ಟ) 26,717.37 ಅಂಕಗಳಲ್ಲಿ ಸ್ಥಿರವಾಗಿದೆ. ಅದೇ ರೀತಿ ನಿಫ್ಟಿ 227.80 ಅಂಕಗಳ ಕುಸಿತದೊಂದಿಗೆ (ಶೇ.2.7 ನಷ್ಟ) 8097.00 ಅಂಕಗಳಲ್ಲಿ ಸ್ಥಿರವಾಗಿದೆ. ಬುಧವಾರ ಕೇವಲ 599 ಕಂಪೆನಿಗಳ ಶೇರುಗಳು ಮುನ್ನಡೆ ಸಾಧಿಸಿದ್ದು 2,143 ಕಂಪೆನಿಗಳ ಶೇರುಗಳು ಕುಸಿತವನ್ನು ಕಂಡವು. 158 ಕಂಪೆನಿಗಳ ಶೇರು ಮೌಲ್ಯ ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.
ಭಾರಿ ಕುಸಿತದ ನಡುವೆಯಲೂ ಭಾರ್ತಿ ಏರ್‌ಟೆಲ್ ಕಂಪೆನಿಯ ಷೇರುಗಳು ಮಾತ್ರವೇ ಮುನ್ನಡೆ ಕಂಡಿತು. ಬಿಎಚ್‌ಇಎಲ್ ಶೇ.6ರಷ್ಟು ನಷ್ಟಕ್ಕೆ ಗುರಿಯಾದರೆ ಐಸಿಐಸಿಐ ಬ್ಯಾಂಕ್, ಎಲ್ ಅಂಡ್ ಟಿ, ಮಾರುತಿ ಮತ್ತು ಎನ್ ಟಿ ಪಿ ಸಿ ಷೇರುಗಳು ತೀವ್ರ ಕುಸಿತ ಕಂಡವು.
ಕಳೆದ ಮಾರ್ಚ್ 31ಕ್ಕೆ ಕೊನೆಗೊಂಡ ಲೆಕ್ಕಪತ್ರ ವರ್ಷದಲ್ಲಿ ಗರಿಷ್ಠ ಸಂಖ್ಯೆಯ ಮುಂಚೂಣಿ ಭಾರತೀಯ ಕಂಪೆನಿಗಳು ನಷ್ಟಕ್ಕೆ ಗುರಿಯಾಗಿರುವುದರಿಂದ ಕಳೆದೊಂದು ತಿಂಗಳಿಂದ ಷೇರು ಮೌಲ್ಯಗಳು ನಿರಂತರ ಕುಸಿತವನ್ನು ಕಾಣುತ್ತಿವೆ. ಹಾಗಾಗಿ ಹೂಡಿಕೆದಾರರು ತೀವ್ರ ನಷ್ಟಕ್ಕೆ ಗುರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


