ಋಣಾತ್ಮಕ ವಲಯದಲ್ಲೇ ಮುಂದುವರೆದ ಹಣದುಬ್ಬರ ದರ : ಆದರೆ ಸ್ವಲ್ಪ ಏರಿಕೆ
ಭಾರತದ ಸಗಟು ಹಣದುಬ್ಬರ ದರ ಮೇ ತಿಂಗಳಿನಲ್ಲೂ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ. ಆದರೆ ಶೇ. (-)2 .36 ರಿಂದ 2 .65 ಕ್ಕೆ ಅಲ್ಪ ಏರಿಕೆಯಾಗಿದೆ.

ಭಾರತದ ಸಗಟು ಹಣದುಬ್ಬರ ದರ ಮೇ ತಿಂಗಳಿನಲ್ಲೂ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ. ಆದರೆ ಶೇ. (-) 2 .65 ರಿಂದ 2 .36 ಕ್ಕೆ ಅಲ್ಪ ಏರಿಕೆಯಾಗಿದೆ.
ಆಹಾರ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಹಣಬುಬ್ಬರ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶದಿಂದ ತಿಳಿದುಬಂದಿದೆ.
ಸಗಟು ದರ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ ಮೇ 2014 ರಲ್ಲಿ ಶೇ.6 .18 ರಷ್ಟು ದಾಖಲೆಯ ಏರಿಕೆ ಕಂಡಿತ್ತು. 2015 ರ ಮೇ ನಲ್ಲಿ ಆಹಾರ ಧಾನ್ಯಗಳ ಬೆಲೆ ಶೇ.3.8 ರಷ್ಟು ಏರಿಕೆಯಾಗಿತ್ತು. ಈರುಳ್ಳಿ ಹಾಗೂ ಆಲೂಗಡ್ಡೆ ಬೆಲೆ ಶೇ.20.41 ರಷ್ಟು ಏರಿಕೆಯಾಗಿತ್ತು.
ಮೇ ನಲ್ಲಿ ವಾರ್ಷಿಕ ಇಂಧನ ಹಣದುಬ್ಬರ ದರ ಶೇ.(-) 10 .41 ರಷ್ಟಾಗಿದ್ದರೆ ತಯಾರಿಸಲ್ಪಟ್ಟ ಉತ್ಪನ್ನಗಳ ಹಣದುಬ್ಬರ (-) 0.64 ರಷ್ಟಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


