ದಶಕದ ನಂತರ ಬಡ್ಡಿದರವನ್ನು ಹೆಚ್ಚಿಸಿದ ಯುಎಸ್ ಫೆಡರಲ್ ರಿಸರ್ವ್
ಮಹತ್ವದ ಐತಿಹಾಸಿಕ ಕ್ರಮವೊಂದರಲ್ಲಿ ಸರಿಸುಮಾರು ದಶಕದ ನಂತರ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು 0.25...

ನವದೆಹಲಿ: ಮಹತ್ವದ ಐತಿಹಾಸಿಕ ಕ್ರಮವೊಂದರಲ್ಲಿ ಸರಿಸುಮಾರು ದಶಕದ ನಂತರ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು 0.25 ಶೇಕಡಾದಷ್ಟು ಹೆಚ್ಚಿಸಿದ್ದು, ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ವಿಶ್ವದ ಅತಿ ದೊಡ್ಡ ಆರ್ಥಿಕ ರಾಷ್ಟ್ರ ಹೊರಬರುವ ಸೂಚನೆ ನೀಡಿದೆ.
ಅಮೆರಿಕದ ಕೇಂದ್ರ ಬ್ಯಾಂಕು ಆಗಿರುವ ಫೆಡರಲ್ ರಿಸರ್ವ್ ಹೆಚ್ಚಿಸಿರುವ ಬಡ್ಡಿ ದರವು ಮಾರುಕಟ್ಟೆಯ ಆರ್ಥಿಕ ಚೇತರಿಕೆಯನ್ನು ಸೂಚಿಸುತ್ತದೆ. 2006ರಿಂದ 2008ರವರೆಗೆ ಅಮೆರಿಕ ಎದುರಿಸಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಸೂಚನೆ ನೀಡಿದೆ.
ಅಧಿಕ ಸಾಲ ವೆಚ್ಚವನ್ನು ಭರಿಸುವ ಶಕ್ತಿ ಅಮೆರಿಕಕ್ಕೆ ಇದೆಯೇ ಇಲ್ಲವೇ ಎಂಬ ಬಗ್ಗೆ ಇರುವ ಚರ್ಚೆಗೆ ಕೊನೆಹಾಡಲು ಫೆಡರಲ್ ಬ್ಯಾಂಕಿನ ಯೋಜನಾ ನಿರ್ಣಯ ಸಮಿತಿ ತನ್ನ ಷೇರು ಮಾರುಕಟ್ಟೆಯ ಬಡ್ಡಿದರವನ್ನು 0.25 ಶೇಕಡಾದಿಂದ 0.50ಕ್ಕೆ ಹೆಚ್ಚಿಸಿದೆ.ಅಮೆರಿಕದಲ್ಲಿ ಈ ವರ್ಷದ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಗತಿ ಉತ್ತಮವಾಗಿದೆ. ಹಣದುಬ್ಬರ ಶೇಕಡಾ 2ರಷ್ಟು ಹೆಚ್ಚಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


