ವಾಣಿಜ್ಯ

50 ಪೈಸೆ ನಾಣ್ಯ ಇನ್ನೂ ಉತ್ಪಾದನೆ

ಇತ್ತೀಚಿನ ವರ್ಷಗಳಲ್ಲಿ ಮಾಯವಾದಂತಿರುವ 50 ಪೈಸೆ ನಾಣ್ಯ ಉತ್ಪಾದನೆಯಾಗುತ್ತಲೇ ಇದೆ...

50 ಪೈಸೆ ನಾಣ್ಯ ಇನ್ನೂ ಉತ್ಪಾದನೆ
50 ಪೈಸೆ ನಾಣ್ಯ
Published On :
ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಮಾಯವಾದಂತಿರುವ 50 ಪೈಸೆ ನಾಣ್ಯ ಉತ್ಪಾದನೆಯಾಗುತ್ತಲೇ ಇದೆ. 
ಅಷ್ಟೇ ಅಲ್ಲ, ನಾಣ್ಯಗಳ ಪೈಕಿ ಶೇ.14.90ರಷ್ಟು ಉತ್ಪಾದನಾ ಪ್ರಮಾಣ ಹೊಂದಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್‍ಚಂದ್ರ ಅಗರ್‍ವಾಲ್ ಆರ್ ಟಿಐ ಅಡಿ ಪಡೆದ ಮಾಹಿತಿ ಪ್ರಕಾರ, ಐದು ವರ್ಷಗಳಿಂದ 50 ಪೈಸೆ ನಾಣ್ಯ ಬಳಕೆ ಪ್ರಮಾಣ ಬಹುತೇಕ ಸ್ಥಿರವಾಗಿದೆ. 2011-12ರಲ್ಲಿ 50 ಪೈಸೆ ಮೌಲ್ಯದ 14,785 ನಾಣ್ಯಗಳು ಚಲಾವಣೆಯಾಗಿವೆ. 2011-12ರಲ್ಲಿ ರು. 1 ಮುಖಬೆಲೆಯ 3,26,750 ನಾಣ್ಯಗಳನ್ನು ಟಂಕಿಸಲಾಗಿತ್ತು. ರು.1, ರು.2, ರು.5, ಮತ್ತು ರು.10 ಮುಖಬೆಲೆ ನಾಣ್ಯಗಳ ಬಳಕೆಯಂತೂ ನಿರಂತರವಾಗಿ ಏರಿಕೆ ದಾಖಲಿಸಿದೆ. 
2014-15ರಲ್ಲಿ ಟಂಕಿಸಲಾದ ನಾಣ್ಯಗಳ ಪೈಕಿ ರು.1 ನಾಣ್ಯಗಳು ಶೇ.42.10, ರು.2 ನಾಣ್ಯಗಳು ಶೇ.27.30 ಹಾಗೂ ರು.10 ಮುಖಬೆಲೆಯ ನಾಣ್ಯಗಳ ಉತ್ಪಾದನೆ ಪ್ರಮಾಣ ಶೇ.2.80 ರಷ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.