`ಐಸಿಐಸಿಐ ಬ್ಯಾಂಕ್‍ನ ಹೆಚ್ಚುವರಿ ಗೃಹ ಸಾಲ’ಯೋಜನೆಗೆ ಚಾಲನೆ
ಐಸಿಐಸಿಐ ಬ್ಯಾಂಕ್, ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಕೈಗೆಟುಕುವ ವಲಯದ ಗೃಹ ಸಾಲ ಕ್ಷೇತ್ರದಲ್ಲಿನ ಬಿಡಿ...
ಮುಂಬೈ: ಐಸಿಐಸಿಐ ಬ್ಯಾಂಕ್, ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಕೈಗೆಟುಕುವ ವಲಯದ ಗೃಹ ಸಾಲ ಕ್ಷೇತ್ರದಲ್ಲಿನ ಬಿಡಿ ಗ್ರಾಹಕರಿಗಾಗಿ ಭೋಗ್ಯದ ಖಾತರಿ ನೀಡುವ ಸಾಲ ಯೋಜನೆಯನ್ನು ಪ್ರಕಟಿಸಿದೆ.
`ಐಸಿಐಸಿಐ ಬ್ಯಾಂಕ್‍ನ ಹೆಚ್ಚುವರಿ ಗೃಹ ಸಾಲ’ಎಂದು ಬಣ್ಣಿಸಲಾದ ಈ ಯೋಜನೆಯು ಗೃಹ ಸಾಲದ ಪ್ರಮಾಣವನ್ನು ಶೇ 20ರಷ್ಟು ಹೆಚ್ಚಿಸಲಿದ್ದು, ಸಾಲದ ಮರುಪಾವತಿ ಅವಧಿಯನ್ನು 67ನೇ ವಯಸ್ಸಿನವರೆಗೂ ವಿಸ್ತರಿಸಲು ಅವಕಾಶವಿದೆ. ‘ಐಸಿಐಸಿಐ ಬ್ಯಾಂಕ್ ಎಕ್ಸ್ಟ್ರಾ ಹೋಂ ಲೋನ್’ ಗ್ರಾಹಕರಿಗೆ ಹೆಚ್ಚುವರಿ ಸಾಲ ಪಡೆಯುವ ಹಾಗೂ ಸಾಲ ಮರುಪಾವತಿ ಅವಧಿ ವಿಸ್ತರಿಸುವ ಜೋಡಿ ಅವಕಾಶ ಒದಗಿಸಲಿದೆ.
ಐಸಿಐಸಿಐ ಬ್ಯಾಂಕ್ ಈ ಕಾರ್ಯಕ್ರಮವನ್ನು ಇಂಡಿಯಾ ಮಾರ್ಟೆಜ್ ಗ್ಯಾರಂಟಿ ಕಾರ್ಪೊರೇಷನ್ (ಐಎಂಜಿಸಿ) ಸಹಯೋಗದಲ್ಲಿ ಆರಂಭಿಸಿದೆ. ಐಎಂಜಿಸಿ ಎಂಬುದು ಆರ್‍ಬಿಐ ಅಂಗ ಸಂಸ್ಥೆಯಾದ ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್‍ಎಚ್‍ಬಿ) ಮತ್ತು ಎನ್‍ವೈಎಸ್‍ಇನಲ್ಲಿ ಪಟ್ಟಿ ಆಗಿರುವ, ಫಾಚ್ರ್ಯುನ್ 500ರ ಕಂಪನಿಯಾಗಿರುವ ಗೆನ್‍ವರ್ಥ್ ಫೈನಾನ್ಷಿಯಲ್ ಐಎನ್‍ಸಿ, ಇಂಟರ್‍ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ (ಐಎಫ್‍ಸಿ) ಹಾಗೂ ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕ್ (ಎಡಿಬಿ) ಜಂಟಿ ಸಹಭಾಗಿತ್ವವಾಗಿದೆ.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಐಸಿಐಸಿಐ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಚಂದಾ ಕೊಚ್ಚಾರ್ ಅವರು, `ಐಸಿಐಸಿಐ ಬ್ಯಾಂಕ್ ಅನೇಕ ವಿನೂತನ, ಜನಪ್ರಿಯ ಯೋಜನೆಗಳನ್ನು ಆರಂಭಿಸಿದ ಹಿರಿಮೆ ಹೊಂದಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಈಗ ಮಾರ್ಟೆಜ್ ಗ್ಯಾರಂಟಿ ಬೆಂಬಲಿತ ಗೃಹ ಸಾಲ ಯೋಜನೆಯು ಆ ನಿಟ್ಟಿನಲ್ಲಿ ಇನ್ನೊಂದು ಯೋಜನೆಯಾಗಿದೆ. ನಗರ ಪ್ರದೇಶದ ಯುವಜನರು ಈಗ 2 ಮತ್ತು 3ನೇ ಹಂತದ ನಗರಗಳಲ್ಲಿ ಕೈಗೆಟುಕುವ ದರದ ಗೃಹ ಸಾಲಗಳ ನಿರೀಕ್ಷೆಯಲ್ಲಿ ಇರುವುದನ್ನು ಗಮನಿಸುತ್ತಿದ್ದೇವೆ. ಈ ಕ್ರಮವು ಭಾರತೀಯ ಮಾರ್ಟೆಜ್ ಮಾರುಕಟ್ಟೆಯಲ್ಲಿ ಇರುವ ಅವಕಾಶಗಳನ್ನು ಯಾವುದೇ ಹೆಚ್ಚುವರಿ ತೊಡಕು ಇಲ್ಲದೆ ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮವು ಇನ್ನೊಂದು ಮೈಲಿಗಲ್ಲು ಆಗಿದ್ದು, ಈಗ ಗ್ರಾಹಕರು ಕೈಗೆಟುಕುವ ಪ್ರಮಾಣದಲ್ಲಿ ಗೃಹಸಾಲ ಪಡೆಯಲು ಅವಕಾಶ ನೀಡಲಿದೆ’ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

