ರು.27 ಸಾವಿರ ಮುಟ್ಟಿದ ಚಿನ್ನ
ಎರಡು ತಿಂಗಳ ನಂತರ ಚಿನ್ನ ಮತ್ತೆ ರು.27 ಸಾವಿರ ಹಂತ ತಲುಪಿತು. ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ...

ನವದೆಹಲಿ: ಎರಡು ತಿಂಗಳ ನಂತರ ಚಿನ್ನ ಮತ್ತೆ ರು.27 ಸಾವಿರ ಹಂತ ತಲುಪಿತು. ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.480 ಏರಿಕೆ ಕಂಡು ರು.27,180ಕ್ಕೆ ತಲುಪಿತು. ದೇಶದಲ್ಲಿನ ಮದುವೆ ಸೀಸನ್ ಗಾಗಿ ಆಭರಣ ತಯಾರಕರು ಖರೀದಿಯಲ್ಲಿ ನಿರತರಾಗಿದ್ದರಿಂದ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲೂ ಏರಿಕೆ ದಾಖಲಿಸಿತು. ಪ್ರತಿ ಕೆಜಿ ಬೆಳ್ಳಿ ದರ ಸಹ ರು.200 ಏರಿಕೆ ಕಂಡು 36,500ಕ್ಕೆ ತಲುಪಿತು. ರುಪಾಯಿ ಮೌಲ್ಯ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ದರ ಏರಿಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


