ಚಿನ್ನ ರು.200 ಏರಿಕೆ
ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಜಾಗತಿಕ...

ನವದೆಹಲಿ: ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಂಡಿದ್ದ ಚಿನ್ನ ಶನಿವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿದ್ದ ರಿಂದ ಹಾಗೂ ಆಭರಣ ತಯಾರಕರು ಖರೀದಿಯಲ್ಲಿ ತೊಡಗಿದ್ದರಿಂದ ಪ್ರತಿ ಹತ್ತು ಗ್ರಾಂ ದರ ರು.200 ಏರಿಕೆ ಕಂಡು ರು.25,300ಕ್ಕೆ ತಲುಪಿದೆ.
ಬೆಳ್ಳಿ ದರ ಸಹ ರು.300 ಏರಿಕೆ ಕಂಡು ರು.34,300ಕ್ಕೆ ತಲುಪಿದೆ. ಅಮೆರಿಕದ ಉದ್ಯೋಗ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಗತಿ ಕಾಣದಿರುವುದರಿಂದ ಫೆಡ ರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಗಳು ಕಡಿಮೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತೆ ಚಿನ್ನದ ಮಾರುಕಟ್ಟೆಯತ್ತ ಮುಖ ಮಾಡಿದರು.
ಮತ್ತೊಂದು ಕಡೆ ಆಭರಣ ತಯಾರಕರು ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್ ದರ ಶೇ.0.6ರಷ್ಟು ಏರಿಕೆ ಕಂಡು 1,095 ಡಾಲರ್‍ಗೆ ತಲುಪಿದರೆ ಬೆಳ್ಳಿ ಪ್ರತಿ ಔನ್ಸ್ ದರ ಶೇ.0.3ರಷ್ಟು ಏರಿಕೆ ಕಂಡು 14.74 ಡಾಲರ್‍ಗೆ ತಲುಪಿದೆ.
ಹಾಗಿದ್ದರೂ ಚಿನ್ನದ ಗಟ್ಟಿ ದರ ಪ್ರತಿ ಎಂಟು ಗ್ರಾಂ ದರ ರು.22,200 ಇತ್ತು. ಬೆಳ್ಳಿ ನಾಣ್ಯಗಳ ಗ್ರಾಹಕರಿಂದ ಖರೀದಿ ದರ ರು.49 ಸಾವಿರ ಇದ್ದರೆ ಮಾರಾಟ ದರ ರು.48 ಸಾವಿರ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


