ಹೊಸ ಬೇಡಿಕೆ; ಚೇತರಿಸಿಕೊಂಡ ಚಿನ್ನ ಬೆಳ್ಳಿ ಬೆಲೆ
ಮೂರು ದಿನಗಳಿಂದ ಇಳಿಮುಖ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ, ಶನಿವಾರ ಆಭರಣ ಮಾರಾಟಗಾರರು ಹಾಗು ದಾಸ್ತಾನುಗಾರರು ಸೀಸನ್ ಬೇಡಿಕೆಯಿಂದ

ಮುಂಬೈ: ಮೂರು ದಿನಗಳಿಂದ ಇಳಿಮುಖ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ, ಶನಿವಾರ ಆಭರಣ ಮಾರಾಟಗಾರರು ಹಾಗು ದಾಸ್ತಾನುಗಾರರು ಸೀಸನ್ ಬೇಡಿಕೆಯಿಂದ ನೂತನವಾಗಿ ಕೊಂಡಿದ್ದರಿಂದ ಬೆಲೆಯಲ್ಲಿ ಚೇತರಿಕೆ ಕಂಡಿದೆ.
ಇನ್ನು ಹೆಚ್ಚಿನ ಬೇಡಿಕೆ ಬರಬಹುದಾದ ಹಿನ್ನಲೆಯಲ್ಲಿ ಬೆಳ್ಳಿಯ ಬೆಲೆ ೩೮೧೦೦ರೂಗೆ ಏರಿದೆ.
ಸಾಮಾನ್ಯ ಚಿನ್ನದ(೯೯.೫ ಶುದ್ಧ) ಬೆಲೆ ೪೧೦ರೂ ಏರಿಕೆ ಕಂಡಿದ್ದು ೧೦ ಗ್ರಾಂ ಗಳಿಗೆ ಬುಧವಾರದ ೨೬೨೨೦ ರೂಗಳಿಂದ ೨೬೬೩೦ರೂಗೆ ಏರಿದೆ. ಶುದ್ಧ ಚಿನ್ನ (೯೯.೯೯ ಶುದ್ಧ) ಕೂಡ ೧೦ ಗ್ರಾಂ ಗಳಿಗೆ ೨೬೩೭೦ ರೂಗಳಿಂದ ೨೬೭೮೦ ರೂಗಳಿಗೆ ಏರಿಕೆ ಕಂಡಿದೆ.
ಬೆಳ್ಳಿ ಕೆಜಿಗೆ ೪೪೦ ರೂ ಏರಿಕೆ ಕಂಡಿದ್ದು, ೩೭೬೬೦ ರೂಗಳಿಂದ ೩೮೧೦೦ ರೂಗಳಿಗೆ ಏರಿಕೆ ಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


