ಸಿಂಡಿಕೇಟ್ ಬ್ಯಾಂಕ್‌ಗೆ ರು. 316 ಕೋಟಿ ನಿವ್ವಳ ಲಾಭ
ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್ ಪ್ರಸಕ್ತ ತ್ರೈಮಾಸಿಕದಲ್ಲಿ ರು. 316 ಕೋಟಿ ನಿವ್ವಳ ಲಾಭ ಗಳಿಸಿದೆ.

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್ ಪ್ರಸಕ್ತ ತ್ರೈಮಾಸಿಕದಲ್ಲಿ ರು. 316 ಕೋಟಿ ನಿವ್ವಳ ಲಾಭ ಗಳಿಸಿದೆ.
ಆದರೆ ಕಳೆದ ತ್ರೈಮಾಸಿಕದಲ್ಲಿ ಅನುಭವಿಸಿದ್ದ ನಷ್ಟದ ಪರಿಣಾಮವಾಗಿ ಅರ್ಧವಾರ್ಷಿಕದ ಆರ್ಥಿಕ ಬೆಳವಣಿಗೆ ನೋಡಿದಾಗ ಲಾಭ ಕಳೆದ ಸಾಲಿಗಿಂತ ಶೇ. 13.12ರಷ್ಟು ಇಳಿಕೆಯಾಗಿದೆ. ಲಾಭವು ಹಿಂದಿನ ಸಾಲಿಗಿಂತ ರು. 121 ಕೋಟಿಯಷ್ಟು ಕಡಿಮೆಯಾಗಿದೆ. ಆದಾಗ್ಯೂ ಕಳೆದ ಸಾಲಿನ ಎರಡನೇ ತ್ರೈಮಾಸಿಕಕ್ಕಿಂತ ಲಾಭದಲ್ಲಿ ಶೇ.18ರಷ್ಟು ಏರಿಕೆಯಾಗಿದ್ದು, ಕಾರ್ಯಾಚರಣೆ ಲಾಭವು ರು. 954 ಕೋಟಿಯಾಗಿದೆ. ಈ ತ್ರೈಮಾಸಿಕದಲ್ಲಿ ಕೆಲ ಸಮಸ್ಯೆಗಳು ಎದುರಾದರೂ ಬ್ಯಾಂಕ್ ಚೇತರಿಕೆಯ ಫಲಿತಾಂಶ ನೀಡಿದೆ. ಮುಂದಿನ ತ್ರೈಮಾಸಿಕದಲ್ಲಿ ಇನ್ನಷ್ಟು ಸುಧಾರಣೆ ಕಾಣುವ ಭರವಸೆಯಿದೆ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್ ತಿಳಿಸಿದ್ದಾರೆ.
ಬ್ಯಾಂಕ್‌ನ ಒಟ್ಟಾರೆ ವ್ಯವಹಾರದಲ್ಲಿಯೂ ಶೇ.20 ರಷ್ಟು ವೃದ್ಧಿಯಾಗಿ ರು. 4.15 ಲಕ್ಷ ಕೋಟಿಗೆ ಏರಿದೆ. ಭಾರತದಲ್ಲಿ ಶೇ. 23 ರಷ್ಟು ಏರಿಕೆ ಕಂಡು ರು. 3.54 ಲಕ್ಷ ಕೋಟಿ ವ್ಯವಹಾರ ನಡೆಸಲಾಗಿದೆ. ಜಾಗತಿಕ ಠೇವಣಿ ರು. 2.39 ಲಕ್ಷ ಕೋಟಿ ಹಾಗೂ ಸ್ಥಳೀಯ ಠೇವಣಿ ರು. 2.13 ಲಕ್ಷ ಕೋಟಿಗೆ ಏರಿದೆ. ಜಾಗತಿಕ ಹಾಗೂ ಸ್ಥಳೀಯ ಸಾಲ ನೀಡಿಕೆಯಲ್ಲಿಯೂ ಏರಿಕೆಯಾಗಿದ್ದು ಕ್ರಮವಾಗಿ ರು. 1.76 ಲಕ್ಷ ಕೋಟಿ ಹಾಗೂ ರು. 1.40 ಲಕ್ಷ ಕೋಟಿಯಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


