ಮಕ್ಕಳ ಕಲ್ಯಾಣ

ಕುಟುಂಬಕ್ಕೆ ನಾವು ಆದ್ಯತೆ ಕೊಡಲೇಬೇಕು. ಅದರಲ್ಲೂ ಮಕ್ಕಳಿಗೆ ವಿಶೇಷ ಪ್ರಾಮುಖ್ಯ ನೀಡಬೇಕು. 'ಮನೆಯೇ ಮೊದಲ ಪಾಠ ಶಾಲೆ' ಎಂಬ ನೀತಿಯಿಂದ ಹಿಡಿದು ಅವರು ಬೆಳೆದು ದೊಡ್ಡವರಾದ ಮೇಲೆ ಸ್ನೇಹಿತರಾಗುವಲ್ಲಿಯವರೆಗೆ ನಾವು ಅವರಿಗೆ ಹೆಗಲಾಗಲೇಬೇಕು. ಅವರ ವಿವಿಧ ತಳಮಳಗಳಿಗೆ ಹೆತ್ತವರು ಸ್ಪಂದಿಸಲೇಬೇಕು.
ಇಂಥ ವೇಳೆಯಲ್ಲಿ ನಾವು ಮಕ್ಕಳಿಗಾಗಿ ತೆಗೆದುಕೊಳ್ಳುವ ನಿರ್ಧಾರಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಮತ್ತು ಇತರ ಅಗತ್ಯಗಳಿಗಾಗಿ ವಿಶೇಷ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಪೋಷಕರಿಗೆ ಅಥವಾ ಹೆತ್ತವರಿಗೆ ಸವಾಲಾಗಿ ಪರಿಣಮಿಸುವುದು ಮಕ್ಕಳ ವಿದ್ಯಾಭ್ಯಾಸ. ಅದಕ್ಕಾಗಿಯೇ ಹೆಚ್ಚಿನ ವೆಚ್ಚವಾಗುತ್ತದೆ. ಇದಕ್ಕಾಗಿ ಮಕ್ಕಳಿಗೆ ಅನುಕೂಲವಾಗುವ ವಿಮಾ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಇವು ಅತ್ಯಂತ ಕಷ್ಟಕರವಾದ ಸಂದರ್ಭಗಳಲ್ಲಿ ನೆರವಿಗೆ ಬರುತ್ತವೆ.
ಕೆಲವೊಂದು ಸಲ ಜೀವನ ಶೈಲಿಯೂ ಪ್ರಮುಖ ಪಾತ್ರವಹಿಸುತ್ತದೆ. ಎಂಥ ಕಷ್ಟ ಬಂದರೂ ಮಕ್ಕಳು ಕಷ್ಟಕರವಾದ ಜೀವನ ಸಾಗಿಸುವಂತಾಗಬಾರದು. ಅದಕ್ಕಾಗಿ ಹೆತ್ತವರು ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಇದಕ್ಕಾಗಿಯೂ ವಿಮೆಗಳಲ್ಲಿ ಅವಕಾಶ ಉಂಟು. ಹೀಗಾಗಿ, ಅದನ್ನೆಲ್ಲ ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದು.
(ಲೇಖಕರು ಅವಿವಾ ಲೈಫ್ ಇನ್ಶೂರೆನ್ಸ್ನ ಸಿಇಒ ಮತ್ತು ಎಂಡಿ)
-ಟಿ.ಆರ್. ರಾಮಚಂದ್ರನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


