ಹಳೇ ನೋಟು, ಇನ್ನೂ 6 ತಿಂಗಳು ಚಿಂತೆ ಬೇಡ
ಹೆದರಬೇಡಿ, ಗಾಬರಿಯನ್ನೂ ಪಡಬೇಡಿ, 2005ಕ್ಕಿಂತ ಹಳೆಯ ನೋಟು...

ಮುಂಬೈ: ಹೆದರಬೇಡಿ, ಗಾಬರಿಯನ್ನೂ ಪಡಬೇಡಿ, 2005ಕ್ಕಿಂತ ಹಳೆಯ ನೋಟು ವಿನಿಮಯಕ್ಕೆ ಇನ್ನೂ 6 ತಿಂಗಳು ಕಾಲಾವಕಾಶ ಇದೆ. ಹೀಗಾಗಿ ಹತ್ತಿರದ ಬ್ಯಾಂಕ್ ಎಲ್ಲಿದೇ? ಹೋಗಿ ಸಾಲಿನಲ್ಲಿ ನಿಲ್ಲಬೇಕೆಂಬ ಚಿಂತೆಯನ್ನು ಸದ್ಯಕ್ಕೆ ಮಾಡುವ ಅಗತ್ಯವಿಲ್ಲ.
ಇನ್ನು 7 ದಿನದಲ್ಲಿ ಅವುಗಳು ಮೌಲ್ಯ ಕಳೆದು ಕೊಳ್ಳಲಿವೆ ಎಂಬ ಆತಂಕವನ್ನು ದೂರ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್, 2015ರ ಜೂ.30ರವರೆಗ ವಿನಿಮಯ ಅವಧಿಯನ್ನು ವಿಸ್ತರಿಸಿದೆ. ಹೀಗಾಗಿ ಸದ್ಯದ ಮಟ್ಟಿಗೆ ರು.500 ಮತ್ತು ರು.1000 ಮುಖಬೆಲೆಯ ಹಳೆಯ ನೋಟುಗಳು ಇರುವವರು ಉಸಿರಾಡುವಂತಾಗಿದೆ.
ಏಕೆ ಈ ನಿರ್ಧಾರ?: 2005ಕ್ಕಿಂತ ಮುಂಚೆ ಮುದ್ರಿತವಾದ ನೋಟುಗಳಲ್ಲಿ ಮುದ್ರಿತವಾದ ಇಶವಿ ಇರುತ್ತಿರಲಿಲ್ಲ. ಹೀಗಾಗಿ ಇದು ನಕಲಿ ನೋಟುಗಳ ತಯಾರಿಕೆಗೆ ಎಡೆ ಮಾಡಿಕೊಟ್ಟಿತ್ತು. ಇದನ್ನು ತಡೆಯುವ ಹಾಗೂ ರಕ್ಷಣೆ ವಿಚಾರವಾಗಿ ಆರ್‌ಬಿಐ ಈ ನಿರ್ಧಾರವನ್ನು ಕೈಗೊಂಡಿತ್ತು.
ಹೀಗಾಗಿ ಇಂಥ ನೋಟುಗಳನ್ನು ಹೊಂದಿರುವವರು ತಮ್ಮ ಖಾತೆಯಲ್ಲಿ ಜಮಾ ಮಾಡಬಹುದು. ಇಲ್ಲವೇ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ಸೂಚನೆಯನ್ನೂ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


