ವಾಣಿಜ್ಯ

ದುಬಾರಿಯಾಗಲಿದೆ ಐಸಿಐಸಿಐ ಬ್ಯಾಂಕ್ ಎಟಿಎಂ ಬಳಕೆ

ಖಾಸಗಿ ರಂಗದ ಅತಿದೊಡ್ಡ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರ ಎಟಿಎಂ ಬಳಕೆಗೆ...

ದುಬಾರಿಯಾಗಲಿದೆ ಐಸಿಐಸಿಐ ಬ್ಯಾಂಕ್ ಎಟಿಎಂ ಬಳಕೆ
Published On :

ಮುಂಬೈ: ಖಾಸಗಿ ರಂಗದ ಅತಿದೊಡ್ಡ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರ ಎಟಿಎಂ ಬಳಕೆಗೆ ನಿರ್ಬಂಧ ಹೇರಲು ಮುಂದಾಗಿದೆ.

ಎಟಿಎಂ ಉಚಿತ ಬಳಕೆಗೆ ಕುರಿತ ಆರ್‌ಬಿಐ ಹೊಸ ನಿಯಮ ಜಾರಿಗೆ ತಂದಿದ್ದರೂ, ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಎಟಿಎಂ ಬಳಕೆ ಹೆಚ್ಚಿಸಲು ಇರುವ ಅವಕಾಶಗಳ ಕುರಿತು ಚರ್ಚೆ ನಡೆಸುತ್ತಿದ್ದವು. ಅಲ್ಲದೇ, ಕಾರ್ಯಾಚರಣೆಯ ವೆಚ್ಚ ಹೆಚ್ಚಳ ಸಾಧ್ಯತೆಗಳು ಇರುವುದರಿಂದ ಬ್ಯಾಂಕ್‌ಗಳು ಆರ್‌ಬಿಐ ಸುತ್ತೋಲೆ ಜಾರಿ ಮಾಡಲು ಹಿಂದೇಟು ಹಾಕುತ್ತಿವೆ.

ಇದೀಗ ದೇಶದ ಪ್ರಮುಖ ಶಾಸಗಿ ಬ್ಯಾಂಕ್ ಐಸಿಐಸಿಐ ಉಚಿತ ಎಟಿಎಂ ಬಳಕೆಯ ಮಿತಿಗೆ ನಿರ್ಬಂಧ ಹೇರಲು ಮುಂದಾಗಿದೆ.

ಐಸಿಐಸಿಐ ಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಎಟಿಎಂ ಬಳಸಬೇಕಾದರೆ ಸ್ವಲ್ಪ ಚಿಂತಿಸಬೇಕಿದೆ. ಏಕೆಂದರೆ ಐಸಿಐಸಿಐ ಬ್ಯಾಂಕ್ ಜನವರಿ 1ರಿಂದ ಎಟಿಎಂ ಬಳಕೆ ಬೆಲೆಯನ್ನು ಏರಿಕೆ ಮಾಡಲಿದೆ.

ಐಸಿಐಸಿಐ ಗ್ರಾಹಕರು ಬ್ಯಾಂಕ್‌ನ ಎಟಿಎಂಗಳಲ್ಲೇ ನಡೆಸುವ 5 ವಹಿವಾಟು ಮತ್ತು ಇತರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಡೆಸುವ ಮಾಸಿಕ 3 ವಹಿವಾಟು ಮಾತ್ರ ಉಚಿತವಾಗಿ ಸಿಗಲಿದೆ. ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಬ್ಯಾಂಕ್‌ನಲ್ಲಿ ಐದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೇ, ಪ್ರತಿ ವಹಿವಾಟಿಗೆ ರು.20 ಶುಲ್ಕ ವಿಧಿಸಿದ್ದು, ಹಣಕಾಸೇತರ ವಹಿವಾಟಿಗೆ ರು. 8.50ರವರೆಗೆ ಶುಲ್ಕ ನೀಡಬೇಕಾಗುತ್ತದೆ.

ಎಟಿಎಂಗಳಲ್ಲಿ ಮಾಸಿಕ 5ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಪ್ರತಿ ಹಣಕಾಸು ವಹಿವಾಟಿಗೆ ಗ್ರಾಹಕರೂ 20 ರುವರೆಗೆ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ತಿಳಿಯಲು, ಮಿನಿ ಸ್ಟೇಟ್‌ಮೆಂಟ್ ಪಡೆಯಲು ರು. 8.50 ರವರೆಗೆ ಶುಲ್ಕ ತೆರಬೇಕಾಗುತ್ತದೆ. ಜನವರಿ 1ರಿಂದ ಈ ನಿಯಮ ಜಾರಿಯಾಗಲಿದೆ ಎಂದು ಐಸಿಐಸಿಐ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.