ಕೃಷಿ ಕ್ಷೇತ್ರಕ್ಕೆ 4,346 ಕೋಟಿ ರುಪಾಯಿ ಅನುದಾನ
2016-17ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಹಿತಾದೃಷ್ಟಿಯಿಂದ ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ...

ಬೆಂಗಳೂರು: 2016-17ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಹಿತಾದೃಷ್ಟಿಯಿಂದ ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ ತಂದು ಆ ಮೂಲಕ 100 ಮಾದರಿ ಕೃಷಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.
ಈ ವೇಳೆ ಕೃಷಿ ಕ್ಷೇತ್ರಕ್ಕೆ 4,346ಕೋಟಿ ರೂಪಾಯಿ ಅನುದಾನ ಹಾಗೂ ಕೃಷಿ ನವೋದ್ಯಮ ಯೋಜನೆಗೆ 10 ಕೋಟಿ ಅನುದಾನವನ್ನು ಘೋಷಿಸಿದ ಸಿದ್ದರಾಮಯ್ಯ ಘೋಷಿಸಿದ್ದಾರೆ.
* ಕೃಷಿ ಪತ್ತಿನ ಸಹಕಾರ ಸಂಘಗಳೆಲ್ಲವೂ ಗಣಕೀಕರಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
* ಮೇಕೆ ಮತ್ತು ಕುರಿಗಳಿಗೆ ಕೃತಕ ಗರ್ಭಧಾರಣೆಗಾಗಿ ವೀರ್ಯ ಬ್ಯಾಂಕ್ ಸ್ಥಾಪನೆ. ಮೇಕೆ ಹಾಲಿಗೆ ಪ್ರೋತ್ಸಾಹ.
* ಕೆಎಂಎಫ್ ಸಂಪೂರ್ಣ ಹೂಡಿಕೆಯೊಂದಿಗೆ ಹಾಸನದಲ್ಲಿ ಪಶು ಆಹಾರ ಕೇಂದ್ರ 2015-16 ರ ಸಾಲಿನಲ್ಲಿ ಪಶುಸಂಗೋಪನಾ ಇಲಾಖೆಗೆ 1,886 ಕೋಟಿ ರೂ ಒದಗಿಸಲಾಗಿದೆ.
* ದೇಸಿ ಗೋ ವಂಶದ ವೀರ್ಯ ಬ್ಯಾಂಕ್ ಸ್ಥಾಪನೆ. ಸ್ಥಳೀಯ ತಳಿ ಅಭಿವೃದ್ದಿಗಾಗಿ 5 ಕೋಟಿ ರೂಪಾಯಿ.
* ಮತ್ಸಾಶ್ರಯ ಯೋಜನೆ ಅಡಿ ವಸತಿ ರಹಿತ ಮೀನುಗಾರರಿಗೆ ಮನೆಗಳ ನೀರ್ಮಾಣ. ಮಂಗಳೂರಿನ ಪಿಲಿಕುಳದಲ್ಲಿ 15 ಕೋಟಿ ರು. ಓಷನೇನಿಯಂ ನಿರ್ಮಾಣ.ಮಹಿಳಾ ಮೀನುಗಾರರಿಗೆ ಎಪ್ರಾನ್ ,ಗ್ಲೌಸ್, ಬುಟ್ಟಿ ನೀಡಲು 1 ಕೋಟಿ ರು ಬಿಡುಗಡೆ
* ಮೀನುಗಾರಿಕೆಗೆ 302 ಕೋಟಿ, ಮೀನುಗಾರಿಕೆ ಅಭಿವೃದ್ದಿಗೆ ಕ್ರಮ. ಬಂದರುಗಳು ಹೂಳೆತ್ತಲು, ತಡೆಗೋಡೆ ನಿರ್ಮಾಣಕ್ಕೆ ಹಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


