ವಾಹನ

SUV ಕಾರು ಖರೀದಿ ಪ್ಲಾನ್ ಮಾಡಿದ್ದೀರಾ? ಇವೇ ನೋಡಿ ಭಾರತದ ಟಾಪ್ 7 ಸೀಟರ್ ಕಾರುಗಳು!

ಪ್ರತಿಯೊಬ್ಬರಿಗೂ ಕಾರು ಅದರಲ್ಲೂ ದೊಡ್ಡದಾದ 7 ಸೀಟರ್ SUV ಕಾರುಗಳ್ಳನ್ನ ತಗೋಳೋಕೆ ಇಷ್ಟ; ಅದಕ್ಕೆ ಕಾರಣ ಫ್ಯಾಮಿಲಿ ಹಾಗೂ ಹೆಚ್ಚು ಫ್ರೆಂಡ್ಸ್ ಜೊತೆ ಟೂರ್ ಹೋಗಲು ಇದು ಬೆಸ್ಟ್ ಚಾಯ್ಸ್. ಹಾಗಾಗಿ ಕಾರು ಖರೀದಿ ಪ್ಲಾನ್ ಇದ್ದವರಿಗಾಗಿ ಅತಿ ಹೆಚ್ಚು ಮಾರಾಟವಾದ SUV ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ:

SUV ಕಾರು ಖರೀದಿ ಪ್ಲಾನ್ ಮಾಡಿದ್ದೀರಾ? ಇವೇ ನೋಡಿ ಭಾರತದ ಟಾಪ್ 7 ಸೀಟರ್ ಕಾರುಗಳು!
ಕಾರು — Online Desk
Published On :

1. ಮಾರುತಿ ಎರ್ಟಿಗಾ

ಮಾರುತಿ ಎರ್ಟಿಗಾ
ಮಾರುತಿ ಎರ್ಟಿಗಾ — Online Desk

ಕಳೆದ ತಿಂಗಳು 16,111 ಮಾರುತಿ ಎರ್ಟಿಗಾ ಕಾರುಗಳು ಮಾರಾಟವಾಗುವ ಮೂಲಕ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ₹8.85 ಲಕ್ಷದಿಂದ ₹12.99 ಲಕ್ಷ ಎಕ್ಸ್-ಶೋರೂಂ ಬೆಳೆಯ ಈ ಕಾರು ಪೆಟ್ರೋಲ್ 20.51 kmpl, CNG 26.11 km/ಕೆಜಿ ಹಾಗೂ 1.5L K15C ಸ್ಮಾರ್ಟ್ ಹೈಬ್ರಿಡ್, 102 bhp ಎಂಜಿನ್ ಸಾಮರ್ಥ್ಯದೊಂದಿಗೆ ಬರಲಿದೆ. ಅದ್ರಲ್ಲೂ, 7 ಇಂಚ್ ಟಚ್‌ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, ಆಟೋ AC, ಕ್ರೂಸ್ ಕಂಟ್ರೋಲ್, ಹಿಂಭಾಗದ AC ವೆಂಟ್ ಹಾಗೂ 6 ಏರ್‌ಬ್ಯಾಗ್‌ಗಳು ಸ್ಟ್ಯಾಂಡರ್ಡ್, ABS+EBD, ESP, ಹಿಲ್ ಹೋಲ್ಡ್, ISOFIX, ಹಿಂಬದಿ ಕ್ಯಾಮೆರಾ. ಆದರೆ ಗ್ಲೋಬಲ್ NCAP 1-ಸ್ಟಾರ್ ಹೊಂದಿದೆ. ಒಟ್ಟಾರೆಯಾಗಿ, ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣೆ ಮತ್ತು ವಿಶಾಲ ಕ್ಯಾಬಿನ್‌ನಿಂದ ಎರ್ಟಿಗಾ ಇನ್ನೂ ನಂ.1 ಆಗಿದೆ.

2. ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಸ್ಕಾರ್ಪಿಯೋ
ಮಹೀಂದ್ರಾ ಸ್ಕಾರ್ಪಿಯೋ — Online Desk

ಕಳೆದ ತಿಂಗಳು 14,097 ಕಾರುಗಳ ಮಾರಾಟದೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ ಎರಡನೇ ಸ್ಥಾನದಲ್ಲಿದೆ. 10.7% YoY ಬೆಳವಣಿಗೆ. ದಿಟ್ಟ ಲುಕ್, ಆಫ್-ರೋಡ್ ಸಾಮರ್ಥ್ಯ ಮತ್ತು ಪ್ರೀಮಿಯಂ ಫೀಚರ್‌ಗಳಿಂದ SUV ಪ್ರಿಯರ ಚಾಯ್ಸ್. ರೀಸೇಲ್ ವ್ಯಾಲ್ಯೂ ಸಹ ಉತ್ತಮ. ಇದರೊಂದಿಗೆ, 6 ಏರ್‌ಬ್ಯಾಗ್‌ಗಳು, ABS, EBD, ರೋಲ್-ಓವರ್ ಮಿಟಿಗೇಷನ್ ಸುರಕ್ಷತಾ ಫೀಚರ್‌ಗಳಿವೆ. ಇನ್ನು ಇದರ ಎಕ್ಸ್-ಶೋರೂಂ ಬೆಲೆಯೂ ₹13.59 ಲಕ್ಷದಿಂದ ₹17.39 ಲಕ್ಷ. 2.2L mHawk ಡೀಸೆಲ್ ಎಂಜಿನ್ 130 bhp ಮತ್ತು 300 Nm ಟಾರ್ಕ್ ನೀಡುತ್ತದೆ.

3. ಮಹೀಂದ್ರಾ XUV 7XO

ಮಹೀಂದ್ರಾ XUV 7XO
ಮಹೀಂದ್ರಾ XUV 7XO — Online Desk

9,244 ಯುನಿಟ್‌ ಕಾರುಗಳ ಮಾರಾಟದೊಂದಿಗೆ ಮಹೀಂದ್ರಾ XUV 7XO ತನ್ನ ಮಾರಾಟದಲ್ಲಿ 49.1% ಬೆಳವಣಿಗೆ ಕಂಡಿದೆ. ಅದ್ರಲ್ಲೂ, ಇದರ ADAS, ಲೇಟೆಸ್ಟ್ ಟೆಕ್, ಆಧುನಿಕ ಡಿಸೈನ್‌ನಿಂದ ಪ್ರೀಮಿಯಂ ಖರೀದಿದಾರರನ್ನು ಸೆಳೆಯುತ್ತಿದೆ. ಇನ್ನು ಇದರ ಎಕ್ಸ್-ಶೋರೂಂ ಬೆಲೆಯೂ ₹13.99 ಲಕ್ಷದಿಂದ ₹26.99 ಲಕ್ಷ. 2.0L ಟರ್ಬೋ ಪೆಟ್ರೋಲ್ 200 bhp ಮತ್ತು 2.2L ಡೀಸೆಲ್ 185 bhp ಎಂಜಿನ್ ಆಪ್ಷನ್ ಇದೆ.

ಏತನ್ಮಧ್ಯೆ, ಈ ವಿಭಾಗದಲ್ಲೇ ಅತಿ ಹೆಚ್ಚು ಫೀಚರ್ಸ್ ಅನ್ನು ಈ ಕಾರು ಹೊಂದಿದೆ. ಅದರಂತೆ, ADAS ಲೆವೆಲ್-2, 10.25 ಇಂಚ್ ಡ್ಯುಯಲ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, Sony 3D ಸೌಂಡ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ. ಜೊತೆಗೆ ಇದು ಸುರಕ್ಷತೆಯಲ್ಲಿ ಇದು ಕಿಂಗ್.! 6 ಏರ್‌ಬ್ಯಾಗ್, ADAS, ESP ಹಾಗಾಗಿಯೇ ಗ್ಲೋಬಲ್ NCAP 5-ಸ್ಟಾರ್ ರೇಟಿಂಗ್ ಪಡೆದಿದೆ.

4. ಮಹೀಂದ್ರಾ ಬೊಲೆರೊ

ಮಹೀಂದ್ರಾ ಬೊಲೆರೊ
ಮಹೀಂದ್ರಾ ಬೊಲೆರೊ — Online Desk

9,115 ಯುನಿಟ್‌ ಕಾರುಗಳ ಮಾರಾಟದೊಂದಿಗೆ ಮಹೀಂದ್ರಾ ಬೊಲೆರೊ ಜುಲೈ ತಿಂಗಳಿನಲ್ಲಿ 21.9% ಬೆಳವಣಿಗೆ ದರ ದಾಖಲಿಸಿದೆ. ಎಕ್ಸ್-ಶೋರೂಂ ಬೆಲೆ ₹9.98 ಲಕ್ಷದಿಂದ ₹11.19 ಲಕ್ಷದೊಂದಿಗೆ, 1.5L mDI ಡೀಸೆಲ್ ಎಂಜಿನ್ 75 bhp. 7 ಮತ್ತು 9 ಸೀಟರ್ ಆಪ್ಷನ್ ಇದೆ. ಜೊತೆಗೆ, ಸಿಂಪಲ್ ಮೆಕ್ಯಾನಿಕ್ಸ್, ಕಡಿಮೆ ನಿರ್ವಹಣೆ, ಕಳಪೆ ರಸ್ತೆಗಳಲ್ಲೂ ಹೋಗುವ ಸಾಮರ್ಥ್ಯ. ಬಾಳಿಕೆ ಮತ್ತು ರೀಸೇಲ್ ವ್ಯಾಲ್ಯೂ ಇದರ ಪ್ಲಸ್ ಪಾಯಿಂಟ್. ಡ್ಯುಯಲ್ ಏರ್‌ಬ್ಯಾಗ್ ಮತ್ತು ABS ಸ್ಟ್ಯಾಂಡರ್ಡ್. ಹಾಗಾಗಿ, ಇದು ಬಜೆಟ್ ಪ್ರಜ್ಞೆ ಇರುವ, ಕಮರ್ಷಿಯಲ್ ಮತ್ತು ಗ್ರಾಮೀಣ ಬಳಕೆದಾರರಿಗೆ ಬೆಸ್ಟ್.

5. ಟೊಯೋಟಾ ಇನ್ನೋವಾ

ಟೊಯೋಟಾ ಇನ್ನೋವಾ
ಟೊಯೋಟಾ ಇನ್ನೋವಾ — Online Desk

7,332 ಇನ್ನೋವಾ ಕಾರುಗಳ ಮಾರಾಟದೊಂದಿಗೆ ಟೊಯೋಟಾ ಇನ್ನೋವಾ SUV ಮಾರಾಟಗಳ ಲಿಸ್ಟ್ನಲ್ಲಿ 5 ನೇ ಸ್ಥಾನದಲ್ಲಿದೆ. ಆದ್ರೂ ಇದರ ಮಾರಾಟ ಪ್ರಮಾಣದಲ್ಲಿ 16.7% ಕುಸಿತ ಕಂಡಿದೆ.

ಏತನ್ಮಧ್ಯೆ, ಎಕ್ಸ್-ಶೋರೂಂ ಬೆಲೆ ₹19.99 ಲಕ್ಷದಿಂದ ₹28.32 ಲಕ್ಷದೊಂದಿಗೆ. 2.0L ಪೆಟ್ರೋಲ್ ಹೈಬ್ರಿಡ್ 186 bhp ಮತ್ತು 2.0L ಟರ್ಬೋ ಡೀಸೆಲ್ 172 bhp. ಹೈಬ್ರಿಡ್ 23.24 kmpl ಮೈಲೇಜ್ ನೀಡುತ್ತದೆ. ಆದರೂ ಐಷಾರಾಮಿ, ಸೌಕರ್ಯ ಮತ್ತು ಪ್ರೀಮಿಯಂ ಫೀಲ್‌ನಿಂದ ದೊಡ್ಡ ಕುಟುಂಬ ಮತ್ತು ಪ್ರೊಫೆಷನಲ್‌ಗಳ ಫೇವರೇಟ್. ಇನ್ನೂ, ಒಟ್ಟೋಮನ್ ಸೆಕೆಂಡ್ ರೋ ಸೀಟುಗಳು, ವೆಂಟಿಲೇಟೆಡ್ ಸೀಟು, ದೊಡ್ಡ ಸನ್‌ರೂಫ್, ADAS, 360 ಕ್ಯಾಮೆರಾ. ಕ್ಯಾಬಿನ್ ಶಾಂತತೆ ಮತ್ತು ಬಿಲ್ಡ್ ಕ್ವಾಲಿಟಿ ವಿಭಾಗದಲ್ಲೇ ಬೆಸ್ಟ್. 5-ಸ್ಟಾರ್ NCAP ಸೇಫ್ಟಿ ಕೂಡ ಇದೆ. ಅದರಂತೆ, ದೊಡ್ಡ ಕುಟುಂಬ, ಎಕ್ಸಿಕ್ಯೂಟಿವ್ ಮತ್ತು ಐಷಾರಾಮಿ ಬಯಸುವವರಿಗೆ ಇದು ಸೂಕ್ತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.