ಭಕ್ತಿ-ಜ್ಯೋತಿಷ್ಯ

ಮೇಷ ವಿಶೇಷ

ಮೇಷ ವಿಶೇಷ
Published On :

ಕುಜ ಗ್ರಹ ಅಧಿಪತಿಯಾಗಿರುವ ಮೇಷ ರಾಶಿ ಚರ ಸ್ವಭಾವ ರಾಶಿಯಾಗಿದ್ದು, ವರಾಹಮಿಹಿರರ ಮತದಂತೆ ಕ್ರೂರ ಸ್ವಭಾವ ರಾಶಿ ಆಗಿರುತ್ತದೆ. ಕುಜ ಗ್ರಹವನ್ನು ಅಂಗಾರಕ ಎಂದು ಕರೆವಂತೆ ಮೇಷ ರಾಶಿಯವರು ಸ್ವಭಾವತಃ ಸ್ವಲ್ಪ ಅಧಿಕ ಕೋಪಿಷ್ಠರೆಂದೇ ಹೇಳಬಹುದು.
ಅಗ್ನಿ ನಕ್ಷತ್ರಗಳಾದ ಭರಣಿ ನಾಲ್ಕು ಪಾದಗಳು ಹಾಗೂ ಕೃತ್ತಿಕಾ ಮೊದಲನೇ ಪಾದವುಳ್ಳ ಮೇಷ ರಾಶಿಯಲ್ಲಿ ಜನಿಸಿದವರ ಕೋಪ, ತಾಪ ಸಹಿಸಲಸಾಧ್ಯ. ಆಯುರ್ವೇದ ರೀತ್ಯಾ ವಾತ ಹಾಗೂ ಕಫ ಪ್ರಕೃತಿ ಇವರಲ್ಲಿ ಹೆಚ್ಚು ಕಂಡುಬರುತ್ತದೆ. ಹಾಗಾಗಿ ದೇಹದಲ್ಲಿ ಕಫವನ್ನು ಹೆಚ್ಚು ಮಾಡುವ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಎಳನೀರು, ಗಟ್ಟಿಮೊಸರು ಇತ್ಯಾದಿಗಳಿಂದ ಎಷ್ಟು ದೂರ ಇದ್ದರೆ ಅಷ್ಟು ಒಳಿತು.
ಕರ್ಮ ಹಾಗೂ ಲಾಭಾಧಿಪತಿ ಶನಿ ಸಪ್ತಮದಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುವುದರಿಂದ ಈ ವರ್ಷದ ನವೆಂಬರ್ 31ರ ತನಕ ತನಕ ಕಬ್ಬಿಣದ ವ್ಯಾಪಾರಿಗಳಿಗೆ ಟೂರ್ ಟ್ರಾವೆಲ್ಸ್, ವ್ಯಾಪಾರ ಮಾಡುವವರಿಗೆ ಅತ್ಯಂತ ಲಾಭದಾಯಕ ಪರಿಸ್ಥಿತಿ ಕಂಡುಬರುತ್ತದೆ.
ಅದೇ ಸಪ್ತಮದಲ್ಲಿ ಶನಿಯೊಂದಿಗೆ ರಾಹು ಕೂಡಾ ಇರುವುದರಿಂದ ವಿದೇಶ ಪ್ರಯಾಣ ಯೋಗ ಹೇರಳವಾಗಿ ಗೋಚರಿಸುತ್ತದೆ. ಆದರೆ, ಸಪ್ತಮವನ್ನು ಮಾರಕ ಸ್ಥಾನವಾಗಿಯೂ ಪರಿಗಣಿಸುವುದರಿಂದ ನಿಮ್ಮ ವ್ಯಾಪಾರದಲ್ಲಿ ಒಟ್ಟಿಗೆ ವ್ಯವಹಾರಿಸುವಾಗ ಎಚ್ಚರದಿಂದ ಇರುವುದು ಒಳಿತು ಮೋಸ ಹೋಗುವ ಅಥವಾ ಜಗಳವಾಗುವ ಸಾಧ್ಯತೆಗಳಿರುತ್ತವೆ.
ಅದೇ ತರ ಸಪ್ತಮ ಭಾವವನ್ನು ಜಾಯಾ ಸ್ಥಾನ ಎಂದು ಹೇಳಿರುವುದರಿಂದ ಬಾಳ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ, ಗಲಾಟೆ ಆಗುವ ಸಾಧ್ಯತೆ ಇರುವುದರಿಂದ ಆದಷ್ಟೂ ಸೌಮ್ಯವಾಗಿದ್ದು, ಮನಸ್ತಾಪಗಳಾಗದಂತೆ ಎಚ್ಚರ ವಹಿಸಬೇಕು.
ಮೇಷ ರಾಶಿಯವರಿಗೆ ಭಾಗ್ಯಾಧಿಪತಿ ಗುರುಗ್ರಹ ಆಗಿರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ, ಶಿರಡಿ ಸಾಯಿಬಾಬಾ ಆರಾಧನೆ ಸದಾ ಮಾಡುವುದರಿಂದ ಜೀವನದ ಉದ್ದಕ್ಕೂ ಅನಿರೀಕ್ಷಿತ ಅದೃಷ್ಟ, ಲಾಭ ಫಲ ನೋಡಬಹುದು. ಸೌರಮಾನ ರೀತ್ಯಾ ತುಲಾ ಮಾಸದಲ್ಲಿ ಹುಟ್ಟಿದ ಮೇಷ ರಾಶಿಯವರಿಗೆ ವಿವಾಹ ಹಾಗೂ ಸಂತಾನದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದ್ದರಿಂದ ಅವರು ನಿತ್ಯ ಆದಿತ್ಯ ಹೃದಯ ಸ್ತೋತ್ರ ಪಠಣ ಹಾಗೂ ಗೋಧಿ ದಾನ ಮಾಡುತ್ತಾ ಬರುವುದು ಒಳಿತು.
ಸಹೋದರರ ವಿಚಾರ ಬಂದಾಗ ತೃತೀಯ ಹಾಗೂ ಷಷ್ಠಾಧಿಪತಿ ಗ್ರಹ ಅವನೇ ಬುಧ ಆದ್ದರಿಂದ ಮೇಷ  ರಾಶಿಯವರು ಸಾಮಾನ್ಯವಾಗಿ ಅಣ್ಣ ತಮ್ಮಂದಿರೊಂದಿಗೆ ಮಾತಿನ ಚಕಮಕಿ ನಡೆಸುತ್ತಲೇ ಇರುತ್ತಾರೆ. ರಾಶ್ಯಾಧಿಪತಿ ಹಾಗೂ ಅಷ್ಟಮಾಧಿಪತಿ ಕುಜನೇ ಆಗಿರುವುದರಿಂದ ಮೇಷ ರಾಶಿಯವರು ಸದಾ ಕುದಿಯುವ ಎಣ್ಣೆ, ಬೆಂಕಿ ಇತ್ಯಾದಿಗಳಿಂದ ಆದಷ್ಟು ದೂರವಿರಬೇಕು. ಸುಬ್ರಹ್ಮಣ್ಯೇಶ್ವರನ ಆರಾಧನೆ ಹೆಚ್ಚು ಮಾಡುವುದರಿಂದ ಅಪಮೃತ್ಯು ಪರಿಹಾರ ಆಗಿ ದೀರ್ಘ ಆಯುಷಿಗಳಾಗಿ ಸುಖ ಜೀವನ ನಡೆಸಬಹುದು. ಮಾಹಿತಿಗಾಗಿ ಮೊ. 9743331250.


-ವಿಠಲ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.