ಮಾಂದಿ ಉಪಗ್ರಹ

ಹೆಚ್ಚಿನವರು ನವಗ್ರಹಗಳ ಬಗ್ಗೆ ಮಾಹಿತಿ ನೀಡುವರು. ಆದರೆ ಉಪಗ್ರಹಗಳ ಬಗ್ಗೆ ಗಮನಹರಿಸುವುದಿಲ್ಲ. ಉಪಗ್ರಹಗಳು ಸಹ ನವಗ್ರಹಗಳಷ್ಟೇ ಫಲ ನೀಡುವುವು ಎಂದು ಮಹಾಮುನಿ ಪರಾಶರರು ಬಹಳ ಹಿಂದೆಯೇ ತಿಳಿಸಿದ್ದಾರೆ.
ಅಂತಹ ಉಪಗ್ರಹಗಳಲ್ಲಿ ಮಾಂದಿ ಗ್ರಹವೂ ಸೇರಿದೆ. ಈ ಗ್ರಹಕ್ಕೆ ಗುಳಿಕ ಎಂಬ ಇನ್ನೊಂದು ಹೆಸರು ಇದೆ. ಇದು ಶನಿಯ ಉಪಗ್ರಹ. ಶನಿಗ್ರಹದ ಎಡಕಾಲಿನ ಕತ್ತರಿಸಲ್ಪಟ್ಟ ಅಂಗ ಎಂದು ಹೇಳುವವರಿದ್ದಾರೆ.
ಮಾಂದಿ ಗ್ರಹಕ್ಕೆ ಕುಂಭ ಸ್ಪಕ್ಷೇತ್ರ. ಸಿಂಹ ನೀಚ ಕ್ಷೇತ್ರ. ತುಲಾರಾಶಿ ಉಚ್ಛಕ್ಷೇತ್ರ. ಶನಿಗ್ರಹದ ಫಲದಂತೆ ಮಾಂದಿ ಗ್ರಹ ಕೂಡಾ 3, 6, 10 ಮತ್ತು 11 ನೇ ರಾಶಿಗಳಲ್ಲಿದ್ದಾಗ ಉತ್ತಮ ಫಲ ಕೊಡುವನು.
ಗುರುತಿಸುವುದು ಹೇಗೆ?
'ಫಲ ದೀಪಿಕಾ' ಗ್ರಂಥದ ಆಧಾರದಂತೆ ವ್ಯಕ್ತಿಯ ಜನನ ಹಗಲು ಹೊತ್ತಿನಲ್ಲಿ ಆದರೆ ಸೂರ್ಯ ಉದಯ ಕಾಲಕ್ಕೆ ಅನುಕ್ರಮವಾಗಿ ಭಾನುವಾರದಿಂದ ಆರಂಭಿಸಿ, 26, 22, 18, 14, 10, 6 ಮತ್ತು 2 ಗಳಿಗೆಗಳೆಂದು ಲೆಕ್ಕಹಾಕಿ ಕೂಡಿಸಿದರೆ ಮಾಂದಿ ಗ್ರಹದ ರಾಶಿ ಸಿಗುವುದು.
ರಾತ್ರಿ ಕಾಲದಲ್ಲಿ ಎಂದರೆ ಸೂರ್ಯಾಸ್ತದ ನಂತರ ಜನನ ಆದರೆ ಸೂರ್ಯ ಅಸ್ತಕಾಲಕ್ಕೆ ಭಾನುವಾರದಿಂದ ಮೊದಲ್ಗೊಂಡು ಅನುಕ್ರಮವಾಗಿ 10, 6, 2, 24, 22, 18 ಮತ್ತು 14 ಗಳಿಗೆ ಗಳನ್ನು ಕೂಡಿಸಿದರೆ ಮಾಂದಿ ಗ್ರಹದ ನಕ್ಷತ್ರ ರಾಶಿ ಸಿಗುವುದು.
ಫಲವೇನು?
ರವಿ ಮಾಂದಿಯಲ್ಲಿ ಇದ್ದರೆ ಪಿತೃದೋಷ, ಸಿಟ್ಟು ಅಧಿಕ. ಪಿತ್ತ ಸಂಬಂಧ ಅನಾರೋಗ್ಯ. ಚಂದ್ರ ಮಾಂದಿಯಲ್ಲಿ ಇದ್ದರೆ ತಾಯಿಗೆ ಅನಾರೋಗ್ಯ, ಮಾನಸಿಕ ನೆಮ್ಮದಿ ಇರಲಾರದು. ಆತ್ಮಹತ್ಯೆಗೆ ಯತ್ನ. ಮಂಗಳನೊಡನೆ ಮಾಂದಿ ಇದ್ದರೆ ಸಹೋದರ ಸಹೋದರಿಯರಿಗೆ ಅರಿಷ್ಟ, ಜಗಳ, ಅಪಘಾತ ಭಯ, ಬುಧ ಮಾಂದಿ ಜೊತೆ ಇದ್ದರೆ ವಿದ್ಯೆ ಯಲ್ಲಿ ತಡೆ. ನರಸಂಬಂಧಿ ದೋಷ, ಸೋದರ ಮಾವನವರಿಗೆ ಅನಿಷ್ಟ.
ಹೀಗೆ ಪ್ರತಿ ಗ್ರಹದಲ್ಲಿ ಮಾಂದಿ ಇದ್ದರೆ ಒಂದೊಂದು ರೀತಿಯ ಪರಿಣಾಮ ಬೀರುತ್ತದೆ.
ಪರಿಹಾರ ಇಲ್ಲವೆ?
ರವಿ ಮಾಂದಿ ದೋಷವಿದ್ದವರು ಪಿತೃ ಸಂಬಂಧ ಶಾಂತಿ ಮಾಡಿಸುವುದು. ರಾಹು ಮಾಂದಿ ದೋಷವಿದ್ದವರು ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮಾಡತಕ್ಕದ್ದು, ಮಂಗಳ ಮಾಂದಿ ಇದ್ದರೆ ವಾಹನ ಖರೀದಿಸಿದ ನಂತರ ವಾಹನ ಪೂಜೆ ಮಾಡಿಸುವುದು.
ಲಗ್ನದಿಂದ 1ನೇ ರಾಶಿಯಲ್ಲಿ ಮಾಂದಿ ಇದ್ದರೆ ವಾಸ್ತು ಶಾಂತಿ ಜೊತೆಗೆ ಸುದರ್ಶನ ಹೋಮ ಮಾಡುವುದು, ಜೈನ ರಾದರೆ ಕಲಿಕುಂಡಲ ಆರಾಧನೆ ಮಾಡಿಸತಕ್ಕದ್ದು. ಗುರುಪ್ರೇತವಿದ್ದರೆ, ಸ್ವಾಮೀಜಿಯವರಿಗೆ 3 ಯಾ 5 ಬಗೆಗಳ ಹಣ್ಣು ಹಂಪಲು ಗುರುಕಾಣಿಕೆ ಕೊಟ್ಟು ಆಶೀರ್ವಾದ ಪಡೆಯತಕ್ಕದ್ದು. ಇತರ ಯಾವುದೇ ರೀತಿಗಳಲ್ಲಿ ದೋಷವಿದ್ದರೆ. ಮೈಸೂರಿನ ಚಾಮುಂಡಿ ದೇವಿ ಕ್ಷೇತ್ರಕ್ಕೆ ಹೋಗಿ ಕುಂಕುಮ ಅರ್ಚನೆ ಮಾಡುವುದು.
ಮಾಹಿತಿಗೆ: 9916047096.
- ರತ್ನರಾಜ ಜೈನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


