ಮುಂಗಾರು ಪ್ರವೇಶವನ್ನು ಮತ್ತಷ್ಟು ನಿಖರವಾಗಿ ಅಂದಾಜಿಸಲು ಬಂತು ಹೊಸ ವಿಧಾನ
ಮುಂಗಾರು ಪ್ರವೇಶ ಹಾಗೂ ನಿಲ್ಲುವುದನ್ನು ಹಿಂದೆಂದಿಗಿಂತಲೂ ನಿಖರವಾಗಿ ಅಂದಾಜಿಸಲು ವಿಜ್ಞಾನಿಗಳು ಹೊಸ ವಿಧಾನ ಕಂಡುಕೊಂಡಿದ್ದಾರೆ.

ಬರ್ಲಿನ್:ಮುಂಗಾರು ಪ್ರವೇಶ ಹಾಗೂ ನಿಲ್ಲುವುದನ್ನು ಹಿಂದೆಂದಿಗಿಂತಲೂ ನಿಖರವಾಗಿ ಅಂದಾಜಿಸಲು ವಿಜ್ಞಾನಿಗಳು ಹೊಸ ವಿಧಾನ ಕಂಡುಕೊಂಡಿದ್ದಾರೆ.
ವಿಜ್ಞಾನಿಗಳು ಕಂಡುಕೊಂಡ ಹೊಸ ವಿಧಾನ, ಆಹಾರ ಮತ್ತು ಜಲ ವಿದ್ಯುತ್ ಸರಬರಾಜು ವಿಷಯದಲ್ಲಿ ಮಹತ್ವದ ಪ್ರಗತಿ ಸಾಧಿಸಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಾದೇಶಿಕ ಹವಾಮಾನ ಡೇಟಾದ ನೆಟ್ವರ್ಕ್ ಅನಾಲಿಸಿಸ್ ಮೂಲಕ ಮುಂಗಾರು ಪ್ರವೇಶವನ್ನು ಹಿಂದೆಂದಿಗಿಂತಲೂ ನಿಖರವಾಗಿ ಅಂದಾಜಿಸಲು ಸಾಧ್ಯವಿದ್ದು ಈ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವಂತೆ ವಿಜ್ಞಾನಿಗಳು ಹವಾಮಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ.
ರೈತರಿಗೆ ಮುಂಗಾರು ಮುನ್ಸೂಚನೆ ಅತಿ ಮುಖ್ಯವಾಗಿದ್ದು, ಮುಂಬರುವ ಹವಾಮಾನ ಬದಲಾವಣೆ ಮುಂಗಾರು ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಮುಂಗಾರು ಪ್ರವೇಶದ ಬಗ್ಗೆ ನಿಖರ ಮಾಹಿತಿ ಪಡೆಯುವುದು ಮುಖ್ಯವಾಗಲಿದೆ. ಮುಂಗಾರು ಪ್ರವೇಶದ ಬಗ್ಗೆ ಈಗ ನೀಡಲಾಗುತ್ತಿರುವ ಮುನ್ಸೂಚನೆಗಿಂಟಲೂ ಎರಡುವಾರಗಳ ಮುನ್ನವೇ ಮುನ್ಸೂಚನೆ ನೀಡಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮುಂಗಾರು ಡೇಟಾಗಳೊಂದಿಗೆ ವಿಜ್ಞಾನಿಗಳು ತಮ್ಮ ಹೊಸ ವಿಧಾನವನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಿದ್ದು, ಶೇ.70 ಕ್ಕಿಂತಲೂ ಹೆಚ್ಚು ನಿಖರವಾದ ಮಾಹಿತಿ ನೀಡುತ್ತದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


