ಆಕ್ಸ್ ಫರ್ಡ್ ವಿಶ್ವಕೋಶದಲ್ಲಿ ಬೆಂಗಳೂರಿನ 23 ವರ್ಷದ ಯುವಕನ ಕಲೆ
ಬೆಂಗಳುರಿನ 23 ವರ್ಷದ ಯುವ ಕಲಾವಿದ ಆಂಡ್ರ್ಯೂ ಪೌಲ್ ನ ಕಲೆ ದಕ್ಷಿಣ ಏಶ್ಯಾದಲ್ಲಿ ಬೈಬಲ್ ಹಾಗೂ ಕಲೆಗೆ ಸಂಬಂಧಿಸಿದ ಆಕ್ಸ್ ಫರ್ಡ್ ನ ವಿಶ್ವಕೋಶದಲ್ಲಿ ಸ್ಥಾನ ಪಡೆದಿದೆ.

ಬೆಂಗಳೂರು: ಬೆಂಗಳೂರಿನ 23 ವರ್ಷದ ಯುವ ಕಲಾವಿದ ಆಂಡ್ರ್ಯೂ ಪೌಲ್ ನ ಕಲೆ ದಕ್ಷಿಣ ಏಶ್ಯಾದಲ್ಲಿ ಬೈಬಲ್ ಹಾಗೂ ಕಲೆಗೆ ಸಂಬಂಧಿಸಿದ ಆಕ್ಸ್ ಫರ್ಡ್ ನ ವಿಶ್ವಕೋಶದಲ್ಲಿ ಸ್ಥಾನ ಪಡೆದಿದೆ.
ವಿಶ್ವಕೋಶದಲ್ಲಿ ಸ್ಥಾನ ಪಡೆದ ಕಲಾಕೃತಿಗೆ (ಮೈಟಿ ಸೇವಿಯರ್) ತಾನು ಕೇರಳದಲ್ಲಿ ರಿಟ್ರೀಟ್ ಮುಗಿಸಿ ವಾಪಸ್ಸಾಗುತ್ತಿರಬೇಕಾದರೆ ಕಂಡ ಕನಸಿನ ಆಧಾರ ಎಂದು ಆಂಡ್ರ್ಯೂ ಪೌಲ್ ಹೇಳಿದ್ದಾರೆ. ಕನಸಿನಲ್ಲಿ ಜೀಸಸ್ ನ ಮುಖದ ತುಂಬ ರಕ್ತ ಹಾಗೂ ಒಂದು ನೀಲಿ ಬಣ್ಣದ ಶಿಲುಬೆ ನೋಡಿದೆ. ಇದನ್ನು ಅರ್ಥೈಸುವಂತೆ ಪಾದ್ರಿಯೋಬ್ಬರನ್ನು ಕೇಳಿದೆ. ಈ ಕನಸಿನ ಹಿಂದೆ "ಜನರು ಎಷ್ಟೇ ಪಾಪ ಮಾಡಿದರೂ ಅವರನ್ನು ದೇವರು ರಕ್ಷಿಸುತ್ತಾನೆ" ಎಂಬ ಸಂದೇಶವಿರುವುದಾಗಿ ಅವರು ಹೇಳಿದರು.
ಇದರ ನಂತರ ಕಲಾಕೃತಿಯನ್ನು ಸಿದ್ಧಪಡಿಸಲು ಆರು ಗಂಟೆಗಳು ಹಾಗೂ ಮುಕ್ತಾಯಗೊಳಿಸಲು 8 ಗಳಷ್ಟು ಸಮಯ ಬೇಕಾಯಿತು ಎಂದಿದ್ದಾರೆ ಆಂಡ್ರ್ಯೂ ಪೌಲ್. "ಆಕ್ಸ್ ಫರ್ಡ್ ನ ಪ್ರಬಂಧಕ್ಕಾಗಿ ಕೆಲಸ ಮಾಡುತ್ತಿದ್ದ ಕೆನಡಾ ವಿಶ್ವವಿದ್ಯಾನಿಲಯದ ಪ್ರೊ. ಕ್ಲಾರಾ ಜೋಸೆಫ್ ಪೌಲ್ ಅವರ ಕಲಾಕೃತಿಯನ್ನು ಫೇಸ್ ಬುಕ್ ನಲ್ಲಿ ನೋಡಿದ್ದರು. 2014 ರಲ್ಲಿ ಪೌಲ್ ಅವರನ್ನು ಸಂಪರ್ಕಿಸಿದ ಒಂದು ವರ್ಷದ ನಂತರ ಅದನ್ನು ಆಕ್ಸ್ ಫರ್ಡ್ ವಿಶ್ವಕೋಶದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು" ಎಂದು ಆಂಡ್ರ್ಯೂ ಪೌಲ್ ಹೇಳಿದ್ದಾರೆ.
2013 ರಲ್ಲಿ ಚಿತ್ರಕಲೆಯನ್ನು ಪ್ರಾರಂಭಿಸಿದ ಆಂಡ್ರ್ಯೂ ಪೌಲ್ ನ ಕಲಾಕೃತಿಗೆ ಅತಿ ಕಡಿಮೆ ಸಮಯದಲ್ಲಿ ಆಕ್ಸ್ ಫರ್ಡ್ ವಿಶ್ವಕೋಶದಲ್ಲಿ ಸ್ಥಾನ ದೊರೆತಿದೆ. ತನ್ನ ಕಲಾಕೃತಿಗಳನ್ನು ದುಬೈ ನ ಗ್ರ್ಯಾಂಡ್ ಹ್ಯಾಟ್ ನಲ್ಲಿ ಹರಾಜು ಹಾಕಿರುವ ಪೌಲ್, ಸಿಸ್ಟರ್ಸ್ ಆಫ್ ಚಾರಿಟಿಗಾಗಿ ಶಾಲಾ ಗೋಡೆಗಳ ಮೇಲೂ ಚಿತ್ರಕಲೆಯನ್ನು ಮೂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


