ಉಗ್ರರ ಭಯದ ನೆರಳಲ್ಲಿ ಕಲಿತ ಬಡ ಹುಡುಗ ಐಐಟಿಯಲ್ಲಿ 89ನೇ ರ್ಯಾಂಕ್ ಪಡೆದ!
ಉಗ್ರರ ಗುಂಡು ತಾಗಿ ಅಪ್ಪ ಸಾಯುವಾಗ ಜಹೀದ್ ಅಹ್ಮದ್ ಖುರೇಷಿ ಎರಡು ತಿಂಗಳ ಕೂಸು. ಅಮ್ಮ ಎರಡನೇ ಮದುವೆಯಾದಾಗ ಅಜ್ಜ ಮತ್ತು ಅಜ್ಜಿಯ...

ಶ್ರೀನಗರ: ಉಗ್ರರ ಗುಂಡು ತಾಗಿ ಅಪ್ಪ ಸಾಯುವಾಗ ಜಹೀದ್ ಅಹ್ಮದ್ ಖುರೇಷಿ ಎರಡು ತಿಂಗಳ ಕೂಸು. ಅಮ್ಮ ನ ಲಾಲನೆ ಪಾಲನೆಯಲ್ಲಿ ಬೆಳೆಯಬೇಕಿದ್ದ ಸಮಯದಲ್ಲಿ ಅಮ್ಮ ಎರಡನೇ ಮದುವೆಯಾದಳು. ಈ ಹೊತ್ತಲ್ಲಿ ಅಜ್ಜ ಮತ್ತು ಅಜ್ಜಿಯ ಆರೈಕೆಯಲ್ಲಿ ಖುರೇಷಿ ಬೆಳೆದದ್ದು. ಶಾಲೆಗೆ ಸೇರಿಸಲು ಅಜ್ಜ ಅಜ್ಜಿಯ ಕೈಯಲ್ಲಿ ದುಡ್ಡು ಕೂಡಾ ಇರರಲಿಲ್ಲ. ಹಾಗಿದ್ದರೂ ಕಷ್ಟ ಪಟ್ಟು ಓದಿದ ಹುಡುಗ ಜಹೀದ್ ಅಹ್ಮದ್ ಖುರೇಷಿ ಈಗ 21 ವರ್ಷಗಳ ನಂತರ ಐಐಟಿ ಪ್ರವೇಶ ಪರೀಕ್ಷೆಯಲ್ಲಿ 89 ನೇ ರ್ಯಾಂಕ್ ಪಡೆದಿದ್ದಾನೆ. ಊರಿಗೂ, ಕುಟುಂಬಕ್ಕೂ ಹೆಮ್ಮೆ ತಂದ ಈ ಹುಡುಗನಿಗೆ ಈಗ ಮತ್ತೊಂದು ಕಷ್ಟ ಎದುರಾಗಿದೆ. ಅದೇನೆಂದರೆ ಇನ್ನು ಕಲಿಕೆಗೆ ಬೇಕಾದ ದುಡ್ಡು ಇವನಲ್ಲಿ ಇಲ್ಲ. ಅದನ್ನು ಹೊಂದಿಸುವುದು ಹೇಗೆ? ಎಂಬುದು ಇವರ ಪ್ರಶ್ನೆ
ಕೌನ್ಸಿಲಿಂಗ್ ಗೆ ಬೇಕಾದ 10,000 ರುಪಾಯಿ ಕೂಡಾ ನನ್ನ ಕೈಯಲ್ಲಿ ಇಲ್ಲ. ಆ ದುಡ್ಡು ಪಾವತಿ ಮಾಡದಿದ್ದರೆ ಅಡ್ಮಿಷನ್ ರದ್ದಾಗುತ್ತದೆ. ನನ್ನ ಕೈಯಲ್ಲಿರುವ ಫೋನ್ ಮಾರಿದರೂ ರು. 5000 ಅಷ್ಟೇ ಸಿಗುತ್ತದೆ ಎಂದು ಖುರೇಷಿ ಸಂಕಟವನ್ನು ತೋಡಿಕೊಳ್ಳುತ್ತಾನೆ.
ಇಲ್ಲಿನ ಕುಪ್‌ವಾರಾ ಜಲ್ಲೆಯ ದೂಡ್‌ವಾನ್ ಎಂಬ ಗ್ರಾಮದಲ್ಲಿ ಖುರೇಷಿ ಜನಿಸಿದ್ದು. 1995ರಲ್ಲಿ ಈತನ ಅಪ್ಪ ಫಾರೂಖ್ ಖುರೇಷಿ ಉಗ್ರರ ಗುಂಡು ತಗಲಿ ಸಾವನ್ನಪ್ಪಿದ್ದರು.
ಇದೀಗ ಮನೆಯ ಒಂದು ಕೋಣೆ ಬಾಡಿಗೆಗೆ ಕೊಟ್ಟಿದ್ದು, ಅಲ್ಲಿಂದ ಸಿಗುವ ದುಡ್ಡಷ್ಟೇ ಕುಟುಂಬದ ಆದಾಯ. ತನ್ನ ಮೊದಲ ಪ್ರಯತ್ನದಲ್ಲೇ ಖುರೇಷಿ ಈ ಪರೀಕ್ಷೆ ಪಾಸಾಗಿದ್ದಾರೆ. ವಿದ್ಯಾಭ್ಯಾಸ ಸಾಲಕ್ಕಾಗಿ ಬ್ಯಾಂಕ್‌ಗಳನ್ನು ಸಮೀಪಿಸಿದಾಗ ಅವರು ಅಡ್ಮಿಷನ್ ಆಗಿರುವ ದಾಖಲೆಗಳನ್ನು ತೋರಿಸಲು ಹೇಳಿದ್ದಾರೆ. ಕೌನ್ಸಿಲಿಂಗ್ ಶುಲ್ಕ ಪಾವತಿ ಮಾಡಿದರೆ ಮಾತ್ರ ಅಡ್ಮಿಷನ್ ಸಿಗುತ್ತದೆ. ಈಗ ನಿರೀಕ್ಷೆಗಳೆಲ್ಲಾ ಹುಸಿಯಾಗುತ್ತಿವೆ ಎಂಬ ದುಃಖದಿಂದ ಅಲ್ಲಿಯೇ ಇರುವ ಡಿಗ್ರಿ ಕಾಲೇಜಿಗೆ ಸೇರಲು ಖುರೇಷಿ ಸಿದ್ಧತೆ ನಡೆಸುತ್ತಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


