ಇವಳೇ ನೋಡು ವಿಶ್ವದ ಯಂಗ್ ಅಜ್ಜಿ

ನಮ್ಮಲ್ಲಿ ಸಾಮಾನ್ಯವಾಗಿ 23 ವರ್ಷಕ್ಕೆ ಇನ್ನೂ ಓದಿನಲ್ಲಿ ತೊಡಗಿಕೊಂಡಿದ್ದರೆ ಮತ್ತೆ ಕೆಲವರು ಮದುವೆ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಈ ವಯಸ್ಸಿನಲ್ಲಿ ಮಗುವೊಂದರ ತಾಯಿಯಾಗಿರುತ್ತಾರೆ. ಆದರೆ ಇಷ್ಟು ಕಿರಿವಯಸ್ಸಿನಲ್ಲಿಯೇ ಅಜ್ಜಿಯಾಗುವುದೆಂದರೆ ಆಶ್ಚರ್ಯದ ಸಂಗತಿ ಅಲ್ಲವೇ? ಹೌದು, ರೊಮೇನಿಯಾ ದೇಶದ ಇನ್ವೆಸ್ಟಿ ಎಂಬ ಹಳ್ಳಿಯಲ್ಲಿ ಜಿಪ್ಸಿ ಜನಾಂಗಕ್ಕೆ ಸೇರಿದ ಮಹಿಳೆ, ರಿಫ್ಕಾ ಸ್ಟ್ಯಾನೆಸ್ಕು ಕೇವಲ 23 ವರ್ಷಕ್ಕೆ ಅಜ್ಜಿಯ ಪಟ್ಟ ಧರಿಸಿದ್ದಾಳೆ. ಬ್ರಿಟಿಷ್ ಟ್ಯಾಬ್ಲಾಯ್ಡ್ ಪತ್ರಿಕೆ 'ದಿ ಸನ್' ಪ್ರಕಾರ ಈಕೆಯೇ ಪ್ರಪಂಚದ ಅತಿ ಕಿರಿಯ ವಯಸ್ಸಿನ ಅಜ್ಜಿಯಂತೆ. 1985ರಲ್ಲಿ ಜನಿಸಿರುವ ರಿಫ್ಕಾಳು ತನ್ನ 11ನೇ ವರ್ಷ ವಯಸ್ಸಿನಲ್ಲಿ ಮನೆಯವರ ವಿರೋಧವನ್ನು ಕಟ್ಟಿಕೊಂಡು, ಆಭರಣ ಮಾರಾಟಗಾರನಾದ 13 ವರ್ಷ ವಯಸ್ಸಿನ ಲೊನೆಲ್ ಸ್ಟ್ಯಾನೆಸ್ಕು ಎಂಬಾತನೊಂದಿಗೆ ಓಡಿಹೋದಳಂತೆ. ನಂತರ ಮದುವೆ ಮಾಡಿಕೊಂಡು, 12 ವರ್ಷದವಳಿರುವಾಗಲೇ ಮೊದಲ ಮಗು ಮಾರಿಯಾಗೆ ಜನ್ಮ ನೀಡಿದ್ದಾಳೆ. ರಿಫ್ಕಾಳಿಗೆ ತನ್ನ ಮಗಳು ಮಾರಿಯಾ ಶಾಲೆಗೆ ಹೋಗಿ ಚೆನ್ನಾಗಿ ಓದಲಿ ಎಂಬಾಸೆ ಇತ್ತಂತೆ. ಆದರೆ ಈಕೆ ಸಹ ಅಮ್ಮನಿಗಿಂತ ನಾನೇನು ಕಮ್ಮಿ ಎಂದುಕೊಂಡು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಂಡಳಂತೆ. ಮಗಳು ಮದುವೆ ಮಾಡಿಕೊಳ್ಳುವುದನ್ನು ನಾನು ತಡೆಯುವ ಪ್ರಯತ್ನ ಮಾಡಲಿಲ್ಲ, ಯಾಕೆಂದರೆ ಇದು ನಮ್ಮ ಜನಾಂಗದ ಪದ್ಧತಿ ಎಂದು ರಿಫ್ಕಾಳು ಪತ್ರಿಕಾ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಮಾರಿಯಾಳು ತನ್ನ ತಾಯಿಗಿಂತ 1 ವರ್ಷ ಮೊದಲೇ ಅಂದರೆ 11 ವರ್ಷ ವಯಸ್ಸಿನವಳಾಗಿದ್ದಾಗಲೇ, ಗಂಡು ಮಗು ಇಯಾನ್‌ನನ್ನು ಹೆತ್ತಿದ್ದಾಳೆ. ತಾನೇ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಅಜ್ಜಿ ಎನ್ನುವ ಸಂಗತಿ ಸ್ಟ್ಯಾನೆಸ್ಕುವಿಗೆ ಮುಜುಗರವನ್ನುಂಟು ಮಾಡಿದೆಯಂತೆ. ಆದರೆ ಮುಂದೊಂದು ದಿನ ಮೊಮ್ಮಗ, ನಮ್ಮಜ್ಜಿಯೇ ಎಲ್ಲರಿಗಿಂತ ಯಂಗ್ ಅಜ್ಜಿ ಎಂದು ಹೆಮ್ಮೆಪಟ್ಟುಕೊಳ್ಳಬಹುದು.
-ಪ್ರಿಯಾಂಕ ವಿ. ಹೆಚ್.
pdimple23@gmail.com
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


