ವಿದೇಶ

ಲಿಂಗ ತಾರತಮ್ಯ ವಿವಾದ: ಮಹಿಳಾ ನೌಕರರ ಕ್ಷಮೆಯಾಚಿಸಿದ ಮ್ಯಾನೇಜ್‌ಮೆಂಟ್; ಐಫೆಲ್ ಟವರ್ ಮತ್ತೆ ಪ್ರವಾಸಿಗರಿಗೆ ಮುಕ್ತ!

ಫ್ರಾನ್ಸ್‌ನಲ್ಲಿ ಹೊಸ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ 'ಬಿಎಪಿಎಸ್' (BAPS) ಸ್ವಾಮಿನಾರಾಯಣ ಸಂಸ್ಥೆಯ ಸುಮಾರು 100 ಜನರ ನಿಯೋಗವು ಐಫೆಲ್ ಟವರ್‌ಗೆ ಖಾಸಗಿ ಭೇಟಿ ನೀಡಿತ್ತು.

ಲಿಂಗ ತಾರತಮ್ಯ ವಿವಾದ: ಮಹಿಳಾ ನೌಕರರ ಕ್ಷಮೆಯಾಚಿಸಿದ ಮ್ಯಾನೇಜ್‌ಮೆಂಟ್; ಐಫೆಲ್ ಟವರ್ ಮತ್ತೆ ಪ್ರವಾಸಿಗರಿಗೆ ಮುಕ್ತ!
ಸಂಗ್ರಹ ಚಿತ್ರ
Published On :

ಪ್ಯಾರಿಸ್: ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಐಫೆಲ್ ಟವರ್‌ನ ಸಿಬ್ಬಂದಿ ನಡೆಸುತ್ತಿದ್ದ ದಿಢೀರ್ ಮುಷ್ಕರ ಕೊನೆಗೊಂಡಿದ್ದು, ಮಂಗಳವಾರದಿಂದ ಸಾರ್ವಜನಿಕ ವೀಕ್ಷಣೆಗೆ ಐಫೆಲ್ ಟವರ್ ಪುನಃ ಮುಕ್ತವಾಗಿದೆ.

ಹಿಂದೂ ಧಾರ್ಮಿಕ ನಿಯೋಗವೊಂದರ ಭೇಟಿಯ ವೇಳೆ ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದ್ದರು. ಇದೀಗ ಐಫೆಲ್ ಟವರ್ ನಿರ್ವಹಣಾ ಸಂಸ್ಥೆ (SETE) ಅಧಿಕೃತವಾಗಿ ಕ್ಷಮೆಯಾಚಿಸಿದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.

ಫ್ರಾನ್ಸ್‌ನಲ್ಲಿ ಹೊಸ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ 'ಬಿಎಪಿಎಸ್' (BAPS) ಸ್ವಾಮಿನಾರಾಯಣ ಸಂಸ್ಥೆಯ ಸುಮಾರು 100 ಜನರ ನಿಯೋಗವು ಐಫೆಲ್ ಟವರ್‌ಗೆ ಖಾಸಗಿ ಭೇಟಿ ನೀಡಿತ್ತು.

ಈ ವೇಳೆ, ನಿಯೋಗದ ಕೋರಿಕೆಯ ಮೇರೆಗೆ ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿಗೆ ತಾವಿದ್ದ ಜಾಗದಿಂದ ದೂರವಿರಲು ಮತ್ತು "ಕಾಣಿಸದಂತೆ" (Invisible) ಇರುವಂತೆ ಮ್ಯಾನೇಜ್‌ಮೆಂಟ್ ಸೂಚಿಸಿತ್ತು. ಅಷ್ಟೇ ಅಲ್ಲದೆ, ಮಹಿಳೆಯರಿದ್ದ ಜಾಗಕ್ಕೆ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರ ಮಹಿಳಾ ಕಾರ್ಮಿಕರಿಗೆ ಉಂಟುಮಾಡಿದ ಅವಮಾನ ಮತ್ತು ಲಿಂಗ ಆಧಾರಿತ ತಾರತಮ್ಯ ಎಂದು ಖಂಡಿಸಿ ಸಿಬ್ಬಂದಿ ಸೋಮವಾರ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದರು. ಇದರಿಂದಾಗಿ ನೂರಾರು ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿತ್ತು.

ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಐಫೆಲ್ ಟವರ್ ಆಡಳಿತ ಮಂಡಳಿಯ ಅಧ್ಯಕ್ಷ ಏರಿಯಲ್ ವೈಲ್, "ಇಂತಹ ಷರತ್ತುಗಳನ್ನು ಒಪ್ಪಿಕೊಳ್ಳಬಾರದಿತ್ತು. ಇದು ನಮ್ಮ ಸಂಸ್ಥೆಯ ಮೂಲಭೂತ ಮೌಲ್ಯಗಳಿಗೆ ವಿರುದ್ಧವಾಗಿದೆ" ಎಂದು ಒಪ್ಪಿಕೊಂಡು ಸಿಬ್ಬಂದಿಯ ಕ್ಷಮೆಯಾಚಿಸಿದ್ದಾರೆ.

ಇತ್ತ ಬಿಎಪಿಎಸ್ ಪ್ಯಾರಿಸ್ ಘಟಕ ಕೂಡ ಪ್ರಕಟಣೆ ಹೊರಡಿಸಿದ್ದು, "ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಮುಂಜಾನೆ ಭೇಟಿ ನೀಡಿದ್ದೆವೇ ಹೊರತು, ನಮ್ಮ ಭೇಟಿಯ ಹಿಂದೆ ಯಾವುದೇ ತಾರತಮ್ಯದ ಉದ್ದೇಶವಿರಲಿಲ್ಲ" ಎಂದು ಸ್ಪಷ್ಟಪಡಿಸಿದೆ. ಸದ್ಯ ಫ್ರಾನ್ಸ್ ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆಂತರಿಕ ತನಿಖೆಗೆ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.