ವಿದೇಶ

ಇರಾನ್ ಮಂಡಿಯೂರುವಂತೆ ಮಾಡಲು ಅಮೆರಿಕ, ಇಸ್ರೇಲ್ ಪ್ರಯತ್ನ: ಅಯತೊಲ್ಲಾ ಮೊಜ್ತಬಾ ಖಮೇನಿ!

ಇರಾನ್ ರಾಜ್ಯ ದೂರದರ್ಶನದಲ್ಲಿ ನೀಡಿದ ಲಿಖಿತ ಸಂದೇಶದಲ್ಲಿ ಅಯತೊಲ್ಲಾ ಮೊಜ್ತಬಾ ಖಮೇನಿ ಈ ರೀತಿ ಹೇಳಿದ್ದಾರೆ.

ಇರಾನ್ ಮಂಡಿಯೂರುವಂತೆ ಮಾಡಲು ಅಮೆರಿಕ, ಇಸ್ರೇಲ್ ಪ್ರಯತ್ನ: ಅಯತೊಲ್ಲಾ ಮೊಜ್ತಬಾ ಖಮೇನಿ!
ಅಯತೊಲ್ಲಾ ಮೊಜ್ತಬಾ ಖಮೇನಿ
Published On :

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್, ಇಸ್ಲಾಮಿಕ್ ಗಣರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಗುರುವಾರ ಹೇಳಿದ್ದಾರೆ.

ಇರಾನ್ ಸರ್ಕಾರಿ ಟಿವಿ ಚಾನೆಲ್ ನಲ್ಲಿ ನೀಡಿದ ಲಿಖಿತ ಸಂದೇಶದಲ್ಲಿ ಅಯತೊಲ್ಲಾ ಮೊಜ್ತಬಾ ಖಮೇನಿ ಈ ರೀತಿ ಹೇಳಿದ್ದಾರೆ.

ಸೇನೆ ಸೋಲಿಸಲು ಮತ್ತು ರಾಷ್ಟ್ರ ಮಂಡಿಯೂರುವಂತೆ ಮಾಡಲು ಯುದ್ಧ, ಆರ್ಥಿಕ ಒತ್ತಡದ ಹೇರಿಕೆ ನಂತರ ಇದೀಗ ವಿರೋಧಿಗಳು ಕರುಡು ರೀತಿಯ ಯೋಜನೆ ಮಾಡುತ್ತಿದ್ದಾರೆ ಎಂದು ಮಾರ್ಚ್ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೂ ಎಲ್ಲಿಯೂ ಕಾಣಿಸಿಕೊಳ್ಳದ ಮೊಜ್ತಬಾ ಖಮೇನಿ ಹೇಳಿದ್ದಾರೆ.

ಇಸ್ಲಾಮಿಕ್ ಗಣರಾಜ್ಯದ ರಾಷ್ಟ್ರೀಯ ಶಾಸಕಾಂಗದ ವಾರ್ಷಿಕೋತ್ಸವ ಅಂಗವಾಗಿ ನೀಡಿರುವ ಸಂದೇಶದಲ್ಲಿ ಇರಾನಿಯನ್ನರಲ್ಲಿ ಮತ್ತಷ್ಟು ಏಕತೆ ಮತ್ತು "ಒಗ್ಗಟ್ಟು" ಗಾಗಿ ಕರೆ ನೀಡಿದ್ದಾರೆ.

ಫೆಬ್ರವರಿ 28 ರಂದು ಇರಾನ್ ಮೇಲೆ ಯುಎಸ್-ಇಸ್ರೇಲಿ ದಾಳಿಯಲ್ಲಿ56 ವರ್ಷದ ಮೊಜ್ತಬಾ ಖಮೇನಿ ಹತ್ಯೆಯಾದ ನಂತರ ಖಮೇನಿ ತಮ್ಮ ತಂದೆಯ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದರು. ತದನಂತರ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಯುದ್ಧ ಮತ್ತಷ್ಟು ಹೆಚ್ಚಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.