Operation Sindoorಗೆ ಪಾಕಿಸ್ತಾನ ತಿರುಗೇಟು; ಭಾರತದ 2 ವಾಯುನೆಲೆ ಧ್ವಂಸ ಅಂತೆ..! ಆದ್ರೆ ಅದು ಅಸ್ತಿತ್ವದಲ್ಲೇ ಇಲ್ಲ..!
ಪಾಕಿಸ್ತಾನದ ಪ್ರಮುಖ ಉಗ್ರ ತರಬೇತಿ ಕೇಂದ್ರಗಳು ಮಾತ್ರವಲ್ಲದೇ ಉಗ್ರರ ಬೆನ್ನಿಗೆ ನಿಲ್ಲುತ್ತಿದ್ದ ಪಾಕಿಸ್ತಾನ ಸೇನೆಗೂ ಭಾರತ ಭಾರಿ ಆಘಾತ ನೀಡಿತ್ತು. ಭಾರತ ನಡೆಸಿದ ವಾಯುದಾಳಿಯಲ್ಲಿ ಪಾಕಿಸ್ತಾನದ ಹಲವು ವಾಯುನೆಲೆಗಳು ಧ್ವಂಸಗೊಂಡಿದ್ದವು.

ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಭಾರತೀಯ ಸೇನೆಯ ಆರ್ಭಟಕ್ಕೆ ಬೆಚ್ಚಿಬಿದ್ದಿದ್ದ ಪಾಕಿಸ್ತಾನ ಇದೀಗ ಸುಳ್ಳಿನ ಸರಮಾಲೆಗಳನ್ನೇ ಹರಿಯಬಿಡುತ್ತಿದ್ದು, ಈ ಸರಣಿಗೆ ಇದೀಗ ಅಸ್ತಿತ್ವದಲ್ಲೇ ಇಲ್ಲದ 2 ವಾಯುನೆಲೆಗಳು ಕೂಡ ಸೇರಿದೆ.
ಹೌದು.. ಪಹಲ್ಗಾಮ್ ಉಗ್ರದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಮರ್ಮಾಘಾತ ಎದುರಾಗಿತ್ತು.
ಪಾಕಿಸ್ತಾನದ ಪ್ರಮುಖ ಉಗ್ರ ತರಬೇತಿ ಕೇಂದ್ರಗಳು ಮಾತ್ರವಲ್ಲದೇ ಉಗ್ರರ ಬೆನ್ನಿಗೆ ನಿಲ್ಲುತ್ತಿದ್ದ ಪಾಕಿಸ್ತಾನ ಸೇನೆಗೂ ಭಾರತ ಭಾರಿ ಆಘಾತ ನೀಡಿತ್ತು. ಭಾರತ ನಡೆಸಿದ ವಾಯುದಾಳಿಯಲ್ಲಿ ಪಾಕಿಸ್ತಾನದ ಹಲವು ವಾಯುನೆಲೆಗಳು ಧ್ವಂಸಗೊಂಡಿದ್ದವು.
ಪಾಕ್ ಪ್ರತಿದಾಳಿ.. ಆದ್ರೆ ಭಾರತ ತಿರುಗೇಟು
ಅಂತೆಯೇ ಭಾರತದಲ್ಲಿನ ನಗರಗಳು ಮತ್ತು ರಕ್ಷಣಾ ಮೂಲಸೌಕರ್ಯಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.
ಪಾಕಿಸ್ತಾನದ Operation Bunyan Ul Marsoos ಭಾಗವಾಗಿ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ತಾನ ಮತ್ತು ಗುಜರಾತ್ ಪ್ರದೇಶಗಳಲ್ಲಿ ಭಾರತೀಯ ವಾಯುಪ್ರದೇಶಕ್ಕೆ ಹಲವಾರು ಕ್ಷಿಪಣಿಗಳು ಮತ್ತು ಡ್ರೋನ್ ಗಳುನುಗ್ಗಿದ್ದವು.
ಆದರೆ ಭಾರತದ ವಾಯುರಕ್ಷಣಾ ವ್ಯವಸ್ಥೆ ಈ ಎಲ್ಲ ಕ್ಷಿಪಣಿಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಿತ್ತು.
2025ರ ಮೇ 10ರಂದು ಪಾಕಿಸ್ತಾನ ಸೇನೆ Fatah-1 guided artillery rocket ಬಳಸಿ ಗಡಿ ದಾಟಿ ದಾಳಿ ನಡೆಸಿತ್ತು. ಆದರೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ಅದನ್ನು ಮೇಲಾಕಾಶದಲ್ಲೇ ಯಶಸ್ವಿಯಾಗಿ ಹೊಡೆದುರುಳಿಸಿತ್ತು.
ಮುಜುಗರ ತಪ್ಪಿಸಿಕೊಳ್ಳಲು ಸುಳ್ಳು
ಇದು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿತ್ತು. ಇದನ್ನು ಮರೆಮಾಚಲೆಂದೇ ಪಾಕಿಸ್ತಾನ ನಾನಾ ಸುಳ್ಳುಗಳ ಸರಮಾಲೆಯನ್ನೇ ಹಬ್ಬಿಸಿತ್ತು. ಭಾರತ ರಾಫೆಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಸಾಕ್ಷಿ ಕೇಳಿದರೆ ಸಾಮಾಜಿಕ ಜಾಲತಾಣಗಳಲ್ಲಿದೆ ಎಂದು ಸಬೂಬು ಹೇಳಿತ್ತು.
ಇದೀಗ ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಭಾರತದ 2 ವಾಯುನೆಲೆಗಳನ್ನು ಧ್ವಂಸ ಮಾಡಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈ ಸಂಬಂಧ ಪಾಕಿಸ್ತಾನ ಸೇನೆಯೊಬ್ಬ ಅಧಿಕಾರಿ ನೀಡಿದ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು ಮೇ 10ರಂದು ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತದಲ್ಲಿನ ಎರಡು ಏರ್‌ಬೇಸ್‌ಗಳನ್ನು ಯಶಸ್ವಿಯಾಗಿ ಗುರಿಯಾಗಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
“ನಮಗೆ ರಜೌರಿ ವಾಯುನೆಲೆ ಮತ್ತು Mamun Airbase ಎಂಬ ಎರಡು ಗುರಿಗಳನ್ನು ನೀಡಲಾಗಿತ್ತು. ಅವುಗಳನ್ನು ಯಶಸ್ವಿಯಾಗಿ ಗುರಿಯಾಗಿಸಿ ಹೊಡೆದುರುಳಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ. ಈ ಅಧಿಕಾರಿ ಕ್ಯಾಪ್ಟನ್ ಮುನೀಬ್ ಜಮಾಲ್ (Captain Muneeb Zamal) ಕ್ಷಿಪಣಿ ಉಡಾವಣೆ ಸಿದ್ಧತೆಯ ವೇಳೆ ನಾಗರಿಕರ ಸಾನ್ನಿಧ್ಯವೇ ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎಂದು ಕೂಡ ಅವರು ಹೇಳಿದ್ದಾರೆ.
ಅಸ್ತಿತ್ವದಲ್ಲೇ ಇಲ್ಲ
ಅಚ್ಚರಿ ಎಂದರೆ ಪಾಕ್ ಅಧಿಕಾರಿ ಧ್ವಂಸ ಮಾಡಿದ್ದೇವೆ ಎಂದು ಹೇಳಿರುವ ಏರ್‌ಬೇಸ್‌ಗಳು ಅಸ್ತಿತ್ವದಲ್ಲೇ ಇಲ್ಲ ಎಂಬುದು ಗಮನಾರ್ಹ. ರಜೌರಿ ಜಮ್ಮು-ಕಾಶ್ಮೀರದ ಒಂದು ಜಿಲ್ಲೆಯಾಗಿದ್ದು, ಅಲ್ಲಿ ಯಾವುದೇ ಕಾರ್ಯನಿರ್ವಹಣೆಯ ಭಾರತೀಯ ವಾಯುಪಡೆ ತಾಣವಿಲ್ಲ.
ಮತ್ತೊಂದು Mamun ಪಂಜಾಬಿನ Pathankot ಸಮೀಪದ ಸೈನಿಕ ಕ್ಯಾಂಟೋನ್‌ಮೆಂಟ್ ಪ್ರದೇಶವಾಗಿದ್ದು, ಅದು ಏರ್‌ಬೇಸ್ ಅಲ್ಲ.
ವ್ಯಾಪಕ ಟ್ರೋಲ್
ಈ ವಿಡಿಯೋ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಅನೇಕರು ಅದನ್ನು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




