ವಿದೇಶ

ಇಸ್ರೇಲ್ ಮೇಲೆ ಅಕ್ಟೋಬರ್ 7ರ ಮಾರಣಾಂತಿಕ ದಾಳಿಯ ಮತ್ತೊಬ್ಬ ರೂವಾರಿ Hamas ಸೇನಾ ಮುಖ್ಯಸ್ಥನ ಬರ್ಬರ ಹತ್ಯೆ!

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿ ಹಲವು ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಹಮಾಸ್ ಸೇನಾ ಮುಖ್ಯಸ್ಥ ಇಜ್ಜೆದಿನ್ ಅಲ್-ಹದ್ದದ್ ನನ್ನು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಕೊಂದಿದೆ.

ಇಸ್ರೇಲ್ ಮೇಲೆ ಅಕ್ಟೋಬರ್ 7ರ  ಮಾರಣಾಂತಿಕ ದಾಳಿಯ ಮತ್ತೊಬ್ಬ ರೂವಾರಿ Hamas ಸೇನಾ ಮುಖ್ಯಸ್ಥನ ಬರ್ಬರ ಹತ್ಯೆ!
ಇಜ್ಜೆದಿನ್ ಅಲ್-ಹದ್ದದ್
Published On :

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿ ಹಲವು ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಹಮಾಸ್ ಸೇನಾ ಮುಖ್ಯಸ್ಥ ಇಜ್ಜೆದಿನ್ ಅಲ್-ಹದ್ದದ್ ನನ್ನು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಕೊಂದಿದೆ. ಗಾಜಾದಲ್ಲಿ ವೈಮಾನಿಕ ದಾಳಿಯ ನಂತರ, ಸೇನೆ ಮತ್ತು ಇಸ್ರೇಲ್‌ನ ದೇಶೀಯ ಭದ್ರತಾ ಸಂಸ್ಥೆ ಈ ಕ್ರಮವನ್ನು ದೃಢಪಡಿಸಿದೆ. ಗಾಜಾ ನಗರ ಪ್ರದೇಶದಲ್ಲಿ ನಿನ್ನೆ ಐಡಿಎಫ್ ಮತ್ತು ಐಎಸ್‌ಎ ನಡೆಸಿದ ನಿಖರ ದಾಳಿಯಲ್ಲಿ ಭಯೋತ್ಪಾದಕ ಇಜ್ಜೆದಿನ್ ಅಲ್-ಹದ್ದದ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಹೇಳಿದೆ.

ಹಮಾಸ್ ಅಧಿಕಾರಿಗಳು ಸಹ ಇಸ್ರೇಲ್ ಹೇಳಿಕೆಯನ್ನು ದೃಢಪಡಿಸಿದ್ದಾರೆ. ಶುಕ್ರವಾರ ಇಸ್ರೇಲ್ ವಾಯುದಾಳಿಯಲ್ಲಿ ಹದ್ದದ್ ಸಾವನ್ನಪ್ಪಿದ್ದಾನೆ ಎಂದು ಹಮಾಸ್ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಹದ್ದದ್ ವಸತಿ ಅಪಾರ್ಟ್ಮೆಂಟ್‌ನಲ್ಲಿದ್ದು ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹದ್ದದ್ ಅವರ ಮರಣದ ನಂತರ, ಚಿಕ್ಕ ಮಕ್ಕಳು ಸೇರಿದಂತೆ ಸಾವಿರಾರು ಜನರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಅಕ್ಟೋಬರ್ 7ರ ದಾಳಿಯ ಯೋಜನೆಯಲ್ಲಿ ಭಾಗಿ

ಅಕ್ಟೋಬರ್ 7 ರ ದಾಳಿಯ ಯೋಜನೆಯಲ್ಲಿ ಹದ್ದಾದ್ ಭಾಗಿಯಾಗಿದ್ದನು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಅಕ್ಟೋಬರ್ 7ರ ದಾಳಿಯನ್ನು ಯೋಜಿಸಿ ನಿರ್ದೇಶಿಸಿದ ಉಳಿದ ಹಮಾಸ್ ಭಯೋತ್ಪಾದಕರಲ್ಲಿ ಹದ್ದಾದ್ ಒಬ್ಬರು. ಇದಲ್ಲದೆ, ಯುದ್ಧದ ಸಮಯದಲ್ಲಿ, ಹದ್ದಾದ್ ಹೆಚ್ಚಿನ ಸಂಖ್ಯೆಯ ಇಸ್ರೇಲಿ ಕೈದಿಗಳನ್ನು ತನ್ನ ಸೆರೆಯಲ್ಲಿಟ್ಟುಕೊಂಡಿದ್ದನು. ತನ್ನ ಜೀವವನ್ನು ಉಳಿಸಿಕೊಳ್ಳಲು ಒತ್ತೆಯಾಳುಗಳನ್ನು ಗುರಾಣಿಗಳಾಗಿ ಬಳಸಿಕೊಂಡನು ಎಂದು ಮಿಲಿಟರಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.