ವಿದೇಶ

'ಪಾಕಿಸ್ತಾನಕ್ಕೆ ಉಪಕಾರ' ಮಾಡಲು ಇರಾನ್‌ನೊಂದಿಗೆ ಕದನವಿರಾಮ; ಪಾಕ್ ಪ್ರಧಾನಿ 'ಅದ್ಭುತ' ಎಂದ ಟ್ರಂಪ್!

ನಾವು ಅದನ್ನು ಪಾಕಿಸ್ತಾನದ ಅನುಕೂಲಕ್ಕಾಗಿ ಒಪ್ಪಿಕೊಂಡಿದ್ದೇವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಹಜ್‌ ಷರೀಫ್‌ ಹಾಗೂ ಫೀಲ್ಡ್‌ ಮಾರ್ಷಲ್‌ ಆಸಿಮ್‌ ಮುನೀರ್‌ ಅದ್ಬುತ ಜನ" ಎಂದು ಟ್ರಂಪ್ ಹಾಡಿ ಹೊಗಳಿದ್ದಾರೆ.

'ಪಾಕಿಸ್ತಾನಕ್ಕೆ ಉಪಕಾರ' ಮಾಡಲು ಇರಾನ್‌ನೊಂದಿಗೆ ಕದನವಿರಾಮ; ಪಾಕ್ ಪ್ರಧಾನಿ 'ಅದ್ಭುತ' ಎಂದ ಟ್ರಂಪ್!
ಡೊನಾಲ್ಡ್ ಟ್ರಂಪ್ — online desk
Published On :

ವಾಷಿಂಗ್ಟನ್‌: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಶಮನಗೊಳಿಸಲು ಪಾಕಿಸ್ತಾನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಶನಿವಾರ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧಗಳಿಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಲು ರಾಜತಾಂತ್ರಿಕ ಮಾತುಕತೆಗೆ ಅವಕಾಶ ನೀಡುವ ಸಲುವಾಗಿ ಮತ್ತು ಪಾಕಿಸ್ತಾನದ ಅನುಕೂಲಕ್ಕಾಗಿ ನಾವು ಇರಾನ್ ನೊಂದಿಗೆ ಕದನವಿರಾಮಕ್ಕೆ ಒಪ್ಪಿಕೊಂಡಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ತಮ್ಮ ಎರಡು ದಿನಗಳ ಚೀನಾ ಭೇಟಿಯ ನಂತರ ಅಮೆರಿಕಕ್ಕೆ ಮರಳುವ ಮಾರ್ಗದಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಕದನ ವಿರಾಮ ಘೋಷಿಸುವ ನಿರ್ಧಾರದ ಮೇಲೆ ವಿಶಾಲವಾದ ಅಂತರರಾಷ್ಟ್ರೀಯ ಒತ್ತಡ ಪ್ರಭಾವ ಬೀರಿದೆ ಎಂದರು.

"ನಾವು ನಿಜವಾಗಿಯೂ ಇತರ ರಾಷ್ಟ್ರಗಳ ಕೋರಿಕೆಯ ಮೇರೆಗೆ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದೇವೆ. ನಾನು ಕದನ ವಿರಾಮದ ಪರವಾಗಿರಲಿಲ್ಲ. ಆದರೆ ನಾವು ಅದನ್ನು ಪಾಕಿಸ್ತಾನದ ಅನುಕೂಲಕ್ಕಾಗಿ ಒಪ್ಪಿಕೊಂಡಿದ್ದೇವೆ. ಪಾಕಿಸ್ತಾನದ ಪ್ರಧಾನಿ ಶೆಹಬಾಹಜ್‌ ಷರೀಫ್‌ ಹಾಗೂ ಫೀಲ್ಡ್‌ ಮಾರ್ಷಲ್‌ ಆಸಿಮ್‌ ಮುನೀರ್‌ ಅದ್ಭುತ ಜನ" ಎಂದು ಟ್ರಂಪ್ ಹಾಡಿ ಹೊಗಳಿದ್ದಾರೆ.

ಕಾರ್ಯತಂತ್ರದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್ ಮೇಲೆ ಒತ್ತಡ ಹೇರಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ 'ಸಹಾಯ' ಕೇಳುವುದನ್ನು ಟ್ರಂಪ್ ಸ್ಪಷ್ಟವಾಗಿ ತಳ್ಳಿಹಾಕಿದರು.

ಒಂದು ತಿಂಗಳ ಕಾಲ ನಡೆದ ಕದನ ವಿರಾಮದ ನಂತರ ಅಮೆರಿಕ 'ಸ್ವಲ್ಪ ಸ್ವಚ್ಛತಾ ಕಾರ್ಯ' ಕೈಗೊಳ್ಳಬೇಕಾಗಬಹುದು ಎಂದು ಅವರು ಹೇಳಿದರು.

ಮುಂದುವರೆದು,ಇರಾನ್‌ನ ಪರಮಾಣು ಯೋಜನೆ ಕುರಿತು ತಿಳಿಸುತ್ತಾ, ಈಗಾಗಲೇ ಅಮೆರಿಕ ದಾಳಿಯಲ್ಲಿ ಅವರ ಪರಮಾಣು ಸೌಲಭ್ಯಗಳು ಹಾನಿಗೊಳಗಾಗಿದ್ದು, ಅವರು ಅದನ್ನು ಮತ್ತೆ ಹಿಂಪಡೆಯುವ ಸ್ಥಿತಿಯಲ್ಲಿಲ್ಲ ಎಂದು ಸಂಧಾನಕಾರರು ತಿಳಿಸಿದ್ದಾರೆ. ಇರಾನ್‌ ಪರಮಾಣು ಅಸ್ತ್ರ ಹೊಂದಲು ಸಾಧ್ಯವಿಲ್ಲ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.