ಅಬು ಧಾಬಿಯಲ್ಲಿ ಮೋದಿ ದರ್ಬಾರು: ಪ್ರಧಾನಿ ವಿಮಾನಕ್ಕೆ F16 ಯುದ್ದ ವಿಮಾನದ ಬೆಂಗಾವಲು; Video ನೋಡಿ
ಯುಎಇ ವಾಯುಪಡೆಯ ಎಫ್ -16 ಬ್ಲಾಕ್ 60 'ಡೆಸರ್ಟ್ ಫಾಲ್ಕನ್' ಫೈಟರ್ ಜೆಟ್‌ಗಳು ಪ್ರಧಾನಿ ಮೋದಿ ಅವರ ವಿಮಾನವಾದ ಏರ್ ಇಂಡಿಯಾ ಓನ, ಬೋಯಿಂಗ್ 777-300ER ಅನ್ನು ಬೆಂಗಾವಲು ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಶುಕ್ರವಾರ ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ಬೆಂಗಾವಲು ನೀಡಲು ತನ್ನ ಫೈಟರ್ ಜೆಟ್‌ಗಳನ್ನು ನಿಯೋಜಿಸುವ ಮೂಲಕ ದೊಡ್ಡ ಗೌರವ ನೀಡಿದೆ.
ಪ್ರಧಾನಿ ಮೋದಿ ಅವರು ಐದು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಇಂದು ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ನಂತರ ನಾಲ್ಕು ಯುರೋಪಿಯನ್ ರಾಷ್ಟ್ರಗಳಾದ ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿಗೆ ಭೇಟಿ ನೀಡಲಿದ್ದಾರೆ.
ಯುಎಇ ವಾಯುಪಡೆಯ ಎಫ್ -16 ಬ್ಲಾಕ್ 60 'ಡೆಸರ್ಟ್ ಫಾಲ್ಕನ್' ಫೈಟರ್ ಜೆಟ್‌ಗಳು ಪ್ರಧಾನಿ ಮೋದಿ ಅವರ ವಿಮಾನವಾದ ಏರ್ ಇಂಡಿಯಾ ಓನ, ಬೋಯಿಂಗ್ 777-300ER ಅನ್ನು ಬೆಂಗಾವಲು ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲಿ ಮೋದಿವರ ಏರ್ ಇಂಡಿಯಾ ಒನ್ ವಿಮಾನವು, ಅರಬ್ ಗಣರಾಜ್ಯದ ವಾಯುಪ್ರದೇಶ ಪ್ರವೇಶಿಸುತ್ತಿದ್ದಂತೆಯೇ, ಯುಎಇನ ಅತ್ಯಾಧುನಿಕ ಎಫ್-16, ಯುದ್ದ ವಿಮಾನವು ಬೆಂಗಾವಲಿಗೆ ನಿಲ್ಲುತ್ತವೆ. ಇದು, ದೆಹಲಿ ಮತ್ತು ಅಬುಧಾಬಿ ನಡುವಿನ ನಿಕಟ ಸಂಬಂಧದ ಸಂಕೇತ ಎಂದು ಯುಎಇ ಬಣ್ಣಿಸಿದೆ.
ಇರಾನ್ ಡ್ರೋನ್, ಕ್ಷಿಪಣಿ ಹೊಡೆದುರುಳಿಸಿದ್ದ ಎಫ್ 16
ಎಫ್ 16 ಡೆಸರ್ಟ್ ಫಾಲ್ಕನ್ ಯುದ್ದ ವಿಮಾನಗಳನ್ನು ಇರಾನ್ ಉಡಾಯಿಸಿದ್ದ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ಬಳಸಿಕೊಳ್ಳಲಾಗಿತ್ತು. ಇದೇ ವಿಮಾನವನ್ನು, ಈಗ ಮೋದಿಯವರ ವಿಮಾನಕ್ಕೆ ಎಸ್ಕಾರ್ಟ್ ಆಗಿ ಯುಎಇ ಬಳಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



