ವಿದೇಶ

ಅಮೆರಿಕ ದಾಳಿ ಭೀತಿ: ಪಾಕಿಸ್ತಾನದ ವಾಯುನೆಲೆಯಲ್ಲಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ; ವರದಿ

ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಯಿಂದ ತನ್ನ ರಕ್ಷಣಾ ಆಸ್ತಿಗಳನ್ನು ಉಳಿಸಿಕೊಳ್ಳಲು ಇರಾನ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ. ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ ಅತ್ಯಾಧುನಿಕ RC-130 ರಿಕನೈಸನ್ಸ್ (ಬೇಹುಗಾರಿಕೆ) ವಿಮಾನವೂ ಸೇರಿದೆ .

ಅಮೆರಿಕ ದಾಳಿ ಭೀತಿ: ಪಾಕಿಸ್ತಾನದ ವಾಯುನೆಲೆಯಲ್ಲಿ ಇರಾನ್ ಯುದ್ಧ ವಿಮಾನಗಳಿಗೆ ಆಶ್ರಯ; ವರದಿ
ಸಾಂದರ್ಭಿಕ ಚಿತ್ರ
Published On :

ಇಸ್ಲಮಾಬಾದ್: ಅಮೆರಿಕ - ಇರಾನ್ ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನವು, ಇರಾನಿನ ಸೈನ್ಯದ ವಿಮಾನಗಳನ್ನು ತನ್ನ ವಾಯುನೆಲೆಗಳಲ್ಲಿ ನಿಲ್ಲಿಸಲು ಅನುಮತಿ ನೀಡಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಇದು ಅಮೆರಿಕದ ವಾಯುದಾಳಿಗಳಿಂದ ರಕ್ಷಿಸುವ ಉದ್ದೇಶದಿಂದಾಗಿ ಈ ಕೆಲಸ ಮಾಡಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಾಗಿದೆ.

ವರದಿಯ ಪ್ರಕಾರ, ಏಪ್ರಿಲ್ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ, ಇರಾನ್ ತನ್ನ ಪ್ರಮುಖ ಯುದ್ಧ ವಿಮಾನಗಳನ್ನು ಪಾಕಿಸ್ತಾನದ ರಾವಲ್ಪಿಂಡಿ ಸಮೀಪವಿರುವ 'ನೂರ್ ಖಾನ್' ವಾಯುನೆಲೆಗೆ ರವಾನಿಸಿದೆ.

ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಯಿಂದ ತನ್ನ ರಕ್ಷಣಾ ಆಸ್ತಿಗಳನ್ನು ಉಳಿಸಿಕೊಳ್ಳಲು ಇರಾನ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ. ಈ ವಿಮಾನಗಳಲ್ಲಿ ಇರಾನ್ ವಾಯುಪಡೆಯ ಅತ್ಯಾಧುನಿಕ RC-130 ರಿಕನೈಸನ್ಸ್ (ಬೇಹುಗಾರಿಕೆ) ವಿಮಾನವೂ ಸೇರಿದೆ ಎಂದು ಮೂಲಗಳು ತಿಳಿಸಿವೆ.

ಇರಾನ್ ಕೇವಲ ಪಾಕಿಸ್ತಾನ ಮಾತ್ರವಲ್ಲದೆ, ನೆರೆಯ ಅಫ್ಘಾನಿಸ್ತಾನಕ್ಕೂ ತನ್ನ ನಾಗರಿಕ ವಿಮಾನಗಳನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಕಾಬೂಲ್ ಮತ್ತು ಹೆರಾತ್ ವಿಮಾನ ನಿಲ್ದಾಣಗಳಲ್ಲಿ ಇರಾನ್‌ನ 'ಮಹಾನ್ ಏರ್' ಸಂಸ್ಥೆಯ ವಿಮಾನಗಳು ಪತ್ತೆಯಾಗಿವೆ. ಆದರೆ, ತಾಲಿಬಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ಈ ವರದಿಯನ್ನು ನಿರಾಕರಿಸಿದ್ದು, ಇರಾನ್ ವಿಮಾನಗಳಿಗೆ ಅಫ್ಘಾನಿಸ್ತಾನದಲ್ಲಿ ಆಶ್ರಯ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ವರದಿಯ ಪ್ರಕಾರ, ಇರಾನ್ ತನ್ನ ನಾಗರಿಕ ವಿಮಾನಗಳನ್ನು ನೆರೆಯ ದೇಶವಾದ ಆಫ್ಘಾನಿಸ್ತಾನದಲ್ಲೂ ಕೂಡ ನಿಲ್ಲಿಸಿದೆ ಎಂದು ಹೇಳಲಾಗಿದೆ. ಈ ವರದಿಗೆ ಪ್ರತಿಕ್ರಿಯಿಸಿದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ, ಅಮೆರಿಕ - ಇರಾನ್ ಯುದ್ಧದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಪಾತ್ರವನ್ನು ಪೂರ್ಣವಾಗಿ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಫೆಬ್ರವರಿ 28ರಂದು ಆರಂಭವಾಗಿ ಏಪ್ರಿಲ್ 8ರಿಂದ ತಾತ್ಕಾಲಿಕವಾಗಿ ನಿಲ್ಲಿಸಲಾದ ಈ ಯುದ್ಧದಲ್ಲಿ ಪಾಕಿಸ್ತಾನದ ಪಾತ್ರವನ್ನು ಪುನರ್ ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.

ಸಿಬಿಎಸ್ ವರದಿಯ ಪ್ರಕಾರ, ಅಮೆರಿಕದ ಅನಾಮಧೇಯ ಅಧಿಕಾರಿಗಳನ್ನು ಉಲ್ಲೇಖಿಸಿ, ಇರಾನ್ ತನ್ನ ಹಲವು ವಿಮಾನಗಳನ್ನು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಕಳುಹಿಸಿದೆ. ಇದರಲ್ಲಿ ಒಂದು ಗುಪ್ತಚರ ಮತ್ತು ಮಾಹಿತಿ ಸಂಗ್ರಹ ವಿಮಾನವೂ ಸೇರಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್‌ನಲ್ಲಿ ಕದನ ವಿರಾಮ ಘೋಷಿಸಿದ ಕೆಲವೇ ದಿನಗಳಲ್ಲಿ ಇದು ನಡೆದಿದೆ.

ಈ ಆರೋಪಗಳನ್ನು ತಳ್ಳಿಹಾಕಿರುವ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು, "ನೂರ್ ಖಾನ್ ವಾಯುನೆಲೆಯು ಜನನಿಬಿಡ ಪ್ರದೇಶದಲ್ಲಿದೆ. ಅಲ್ಲಿ ವಿಮಾನಗಳ ಸಂಚಾರವನ್ನು ಅಡಗಿಸಿಡುವುದು ಅಸಾಧ್ಯ" ಎಂದು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.