ಯುದ್ಧದಲ್ಲಿ ಅಮೆರಿಕಾ ಗೆಲ್ಲುತ್ತಿಲ್ಲ ಎನ್ನುತ್ತಿರುವವರು ದ್ರೋಹಿಗಳು; ಇರಾನ್ ಅಣ್ವಸ್ತ್ರ ಹೊಂದಿದರೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಭಾರೀ ಅಪಾಯ: ಟ್ರಂಪ್
ಕೆಲವರು ನಾವು ಗೆಲ್ಲುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅದು ತಪ್ಪು ಮಾತ್ರವಲ್ಲ, ದೇಶದ ಹಿತಾಸಕ್ತಿಗೆ ವಿರುದ್ಧವಾದ ಮಾತು. ಯುದ್ಧದ ಬಗ್ಗೆ ಈ ರೀತಿಯ ಹೇಳಿಕೆಗಳು ದೇಶದ ಮನೋಬಲವನ್ನು ಕುಗ್ಗಿಸುತ್ತವೆ.

ವಾಷಿಂಗ್ಟನ್: ಅಮೆರಿಕಾ ಯುದ್ಧದಲ್ಲಿ ಗೆಲ್ಲುತ್ತಿಲ್ಲ ಎಂದು ಹೇಳುವವರು ದ್ರೋಹಿಗಳು ಎಂದು ಕಿಡಿಕಾರಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ವಿರುದ್ಧ ಟೀಕೆ ಮಾಡುವವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ನಾವು ಗೆಲ್ಲುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅದು ತಪ್ಪು ಮಾತ್ರವಲ್ಲ, ದೇಶದ ಹಿತಾಸಕ್ತಿಗೆ ವಿರುದ್ಧವಾದ ಮಾತು. ಯುದ್ಧದ ಬಗ್ಗೆ ಈ ರೀತಿಯ ಹೇಳಿಕೆಗಳು ದೇಶದ ಮನೋಬಲವನ್ನು ಕುಗ್ಗಿಸುತ್ತವೆ ಎಂದು ಹೇಳಿದರು.
ಇದೇ ವೇಳೆ ಇರಾನ್ ಅಣ್ವಸ್ತ್ರ ವಿಚಾರವನ್ನು ಉಲ್ಲೇಖಿಸಿದ ಟ್ರಂಪ್ ಅವರು, “ಇರಾನ್ ಅಣ್ವಸ್ತ್ರ ಹೊಂದಿದರೆ ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಭಾರೀ ಅಪಾಯ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಅಮೆರಿಕಾ ಕೈಗೊಂಡ ಸೈನಿಕ ಕ್ರಮಗಳನ್ನು ಸಮರ್ಥಿಸಿಕೊಂಡ ಅವರು, ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯುವುದೇ ಈ ಯುದ್ಧದ ಪ್ರಮುಖ ಉದ್ದೇಶ ಎಂದು ಹೇಳಿದರು.
B-2 Spirit bomber ದಾಳಿಗಳನ್ನು ಉಲ್ಲೇಖಿಸಿದ ಟ್ರಂಪ್, “ನಾವು ಈ ಕ್ರಮ ತೆಗೆದುಕೊಳ್ಳದೇ ಇದ್ದರೆ ಇರಾನ್ ಈಗಾಗಲೇ ಅಣ್ವಸ್ತ್ರ ಹೊಂದಿರುತ್ತಿತ್ತು,” ಎಂದು ಹೇಳಿದರು. ಜೊತೆಗೆ ಇರಾನ್ ಸೈನಿಕ ಸಾಮರ್ಥ್ಯ ಬಹಳ ಮಟ್ಟಿಗೆ ಕುಗ್ಗಿದೆಯೆಂದು ಹೇಳಿ, ಅವರ ನೌಕಾಪಡೆ, ವಾಯುಪಡೆ ಮತ್ತು ರಕ್ಷಣಾ ವ್ಯವಸ್ಥೆಗಳು ದುರ್ಬಲಗೊಂಡಿವೆ ಎಂದು ಹೇಳಿದರು.
ಈ ನಡುವೆ ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿ, ಅಮೆರಿಕೆಗೆ ತೃಪ್ತಿಕರವಾದ ಒಪ್ಪಂದ ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಿದರು. “ಈ ಸಮಸ್ಯೆಯನ್ನು ಸರಿಯಾಗಿ ಪರಿಹರಿಸುವವರೆಗೆ ಹಿಂದೆ ಸರಿಯಲ್ಲ ಎಂದೂ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



