ವಿದೇಶ

'USA ಇದನ್ನು ಎಂದಿಗೂ ನೆನಪಿಟ್ಟುಕೊಳ್ಳುತ್ತದೆ!': ಫ್ರಾನ್ಸ್ ವಿರುದ್ಧ ಟ್ರಂಪ್ ಆಕ್ರೋಶ

‘ಇರಾನ್‌ನ ಕೊಲೆಗಡುಕ’ನನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ವಿಷಯದಲ್ಲಿ ಫ್ರಾನ್ಸ್ ತುಂಬಾ ಸಹಕಾರಿಯಾಗಿಲ್ಲ! ಅಮೆರಿಕಾ ಇದನ್ನು ಮರೆಯುವುದಿಲ್ಲ! ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.

'USA ಇದನ್ನು ಎಂದಿಗೂ ನೆನಪಿಟ್ಟುಕೊಳ್ಳುತ್ತದೆ!': ಫ್ರಾನ್ಸ್ ವಿರುದ್ಧ ಟ್ರಂಪ್ ಆಕ್ರೋಶ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಫ್ರಾನ್ಸ್ ಅಧ್ಯಕ್ಷ — online desk
Published On :

ವಾಷಿಂಗ್ ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಫ್ರಾನ್ಸ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಸ್ರೇಲ್‌ಗೆ ಸೈನಿಕ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಫ್ರಾನ್ಸ್ ಅನುಮತಿ ನಿರಾಕರಿಸಿದ್ದಕ್ಕೆ ಅವರು ಕಿಡಿಕಾರಿದರು.

ಟ್ರೂತ್ ಸೋಶಿಯಲ್‌ನಲ್ಲಿ ಮಾಡಿದ ಒಂದು ಪೋಸ್ಟ್‌ನಲ್ಲಿ, ಟ್ರಂಪ್ ಫ್ರಾನ್ಸ್ ನ್ನು ಇರಾನ್ ವಿಷಯದಲ್ಲಿ "ಸಹಕಾರಿಯಲ್ಲ" ಎಂದು ಟೀಕಿಸಿ, ವಾಷಿಂಗ್ಟನ್ ಇದನ್ನು ಮರೆಯುವುವುದಿಲ್ಲ ಎಂದು ಹೇಳಿದ್ದಾರೆ.

ಫ್ರಾನ್ಸ್ ದೇಶ ಇಸ್ರೇಲ್‌ಗೆ ತೆರಳುತ್ತಿದ್ದ, ಸೈನಿಕ ಸಾಮಗ್ರಿಗಳನ್ನು ಹೊತ್ತ ವಿಮಾನಗಳಿಗೆ ತನ್ನ ವಾಯುಪ್ರದೇಶದ ಮೇಲೆ ಹಾರಲು ಅನುಮತಿ ನೀಡಲಿಲ್ಲ. ‘ಇರಾನ್‌ನ ಕೊಲೆಗಡುಕ’ನನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ವಿಷಯದಲ್ಲಿ ಫ್ರಾನ್ಸ್ ತುಂಬಾ ಸಹಕಾರಿಯಾಗಿಲ್ಲ! ಅಮೆರಿಕಾ ಇದನ್ನು ಮರೆಯುವುದಿಲ್ಲ! ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.

ಇದನ್ನೊಳಗೊಂಡಂತೆ, ಜೆರುಸಲೇಮ್ ಪೋಸ್ಟ್ ಮಂಗಳವಾರದ ವರದಿಯಲ್ಲಿ, ಇಸ್ರೇಲ್ ಫ್ರಾನ್ಸ್‌ ವಿರುದ್ಧದ ‘ವೈರಭಾವದ ನಿಲುವು’ ಉಲ್ಲೇಖಿಸಿ ಆ ದೇಶಕ್ಕೆ ತನ್ನ ರಕ್ಷಣಾ ಸಾಮಗ್ರಿಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿಸಿದೆ.

ಜೆರುಸಲೇಮ್ ಪೋಸ್ಟ್ ವರದಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಫ್ರಾನ್ಸ್ ಇಸ್ರೇಲ್‌ ವಿರುದ್ಧ ತೋರಿಸಿದ ವೈಮನಸ್ಯಪೂರ್ಣ ನಿಲುವಿನ ಪರಿಣಾಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅಧಿಕೃತವಾಗಿ ನಿಲುಗಡೆಗೆ ಆದೇಶ ನೀಡಿದ್ದಾರೆಯೆಂದು ವರದಿ ತಿಳಿಸಿದೆ. ಆದರೆ ಇಂತಹ ಮಹತ್ವದ ನಿರ್ಧಾರವು ಪ್ರಧಾನಮಂತ್ರಿ ನೆತನ್ಯಾಹು ಅವರ ಪ್ರಾಥಮಿಕತೆಯಾಗಿ ಪರಿಗಣಿಸಲ್ಪಟ್ಟಿದ್ದರೆ ಮಾತ್ರ ಜಾರಿಗೊಳ್ಳಬಹುದಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.